
Chitradurga news|nammajana.com|17-05-2025
ನಮ್ಮಜನ.ಕಾಂ, ಚಳ್ಳಕೆರೆ: ನಗರದ ಕಾಟಪ್ಪನಹಟ್ಟಿಯಲ್ಲಿ ಬುಧವಾರ ಸಂಜೆ ನೇಣುಹಾಕಿಕೊಂಡು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಮೃತಳ ತಾಯಿ ಗಂಗಮ್ಮ ಪೊಲೀಸರಿಗೆ (Challakere crime) ದೂರು ನೀಡಿದ್ದು, ನನ್ನ ಮಗಳ ಸಾವಿಗೆ ಗಂಡ ಹಾಗೂ ಆತನ ತಾಯಿ ಕಾರಣವೆಂದು ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮಜರುಗಿಸುವಂತೆ ಮನವಿ ಮಾಡಿದ್ಧಾಳೆ.
ಕಾಟಪ್ಪನಹಟ್ಟಿ ನಿವಾಸಿಯಾದ ಗಂಗಮ್ಮ ತನ್ನ ಮಗಳು ಟಿ.ಮಧುವನ್ನು ಬುಡ್ನಹಟ್ಟಿ ಗ್ರಾಮದ ಪ್ರೇಮಕುಮಾರ್(ಮಂಜುನಾಥ)ರವರಿಗೆ ಮದುವೆ ಮಾಡಿಕೊಟ್ಟಿದ್ದು, ಇಬ್ಬರೂ ಪ್ರೀತಿಸಿ ಇತ್ತೀಚಿಗೆ (Challakere crime) ಮದುವೆಯಾಗಿರುತ್ತಾರೆ.

ಇದನ್ನೂ ಓದಿ: Chitradurga | CBSE ಫಲಿತಾಂಶದಲ್ಲಿ ಸ್ಟೆಪ್ಪಿಂಗ್ ಸ್ಟೋನ್ ಶಾಲೆ ಉತ್ತಮ ಸಾಧನೆ
ಪ್ರೇಮಕುಮಾರ್ ದುಡಿಮೆ ಇಲ್ಲದ ಕಾರಣ ಹೆಂಡತಿ ಮೈಮೇಲಿದ್ದ ವಡವೆಗಳನ್ನು ಮಾರಿ ನಿತ್ಯ ಕುಡಿದು ಬಂದು ಮಧು ಮೇಲೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ. ಇದರಿಂದ ನೊಂದ ಟಿ.ಮಧು ಮನೆಯಲ್ಲೇ (Challakere crime) ನೇಣುಹಾಕಿಕೊಂಡು ಮೃತಪಟ್ಟಿರುತ್ತಾಳೆ. ಪಿಎಸ್‌ಐ ಧರೆಪ್ಪಬಾಳಪ್ಪದೊಡ್ಡಮನಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ