
Chitradurga news|nammajana.com|18-05-2025
ನಮ್ಮಜನ.ಕಾಂ, ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಸಣ್ಣಕಿಟ್ಟದಹಳ್ಳಿಯಲ್ಲಿ ಇತೀಚಿಗೆ ನಡೆದ ವ್ಯಕ್ತಿಯೊಬ್ಬರ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು (Murder) ಹೊಸದುರ್ಗ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಣ್ಣಕಿಟ್ಟದಹಳ್ಳಿಯ ಕೋಮಲ (25), ಗಿರೀಶ್ (26) ಹಾಗೂ ಮೂಡಲಗಿರಿಯಪ್ಪ (52) ಈ ಮೂರು ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಅಕ್ರಮ ಸಂಬಂಧದ ವಿಚಾರವಾಗಿ (Murder) ಚಿಕ್ಕಣ್ಣ ಎಂಬುವರನ್ನು ತಲೆಗೆ ಹೊಡೆದು, ಸೀರೆಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ.

ಮೇ 9 ರಂದು ಸಣ್ಣಕಿಟ್ಟದಹಳ್ಳಿ ಗ್ರಾಮದ ಪೂರ್ಣಿಮಾ ಅವರ ಪತಿ ಚಿಕ್ಕಣ್ಣ ಅವರನ್ನು ಕೊಲೆ ಮಾಡಿ, ಮೃತದೇಹವನ್ನು (Murder) ತೋಟದಲ್ಲಿ ಎಸೆಯಲಾಗಿತ್ತು.
ಇದನ್ನೂ ಓದಿ: Railway Bridge | ರೈಲ್ವೆ ಸೇತುವೆ ಕೆಳಗೆ ನೀರು | ಪ್ರಾಬ್ಲಂ ಕೇಳಿ ಅಧಿಕಾರಿಗಳ ವಿರುದ್ದ ಸೋಮಣ್ಣ ಕಿಡಿ
ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಟಿ.ಎಂ. ಶಿವಕುಮಾರ್, ಹೊಸದುರ್ಗ ಠಾಣೆ ಪಿಐ ಕೆ.ಟಿ. ರಮೇಶ್, ಶ್ರೀರಾಂಪುರ ಠಾಣೆ ಪಿಐ ಮಧು, ಪಿಎಸ್‌ಐ ಮಹೇಶ್ ಕುಮಾರ್, ಭೀಮನಗೌಡ ಪಾಟೀಲ್, ಶ್ರೀಶೈಲ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು (Murder) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.