
Chitradurga News|Nammajana.com | 04-07-2025
ನಮ್ಮಜನ.ಕಾಂ, ಚಳ್ಳಕೆರೆ: ಚಳ್ಳಕೆರೆ(challakere)ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಕಳೆದ ಸುಮಾರು 12 ವರ್ಷಗಳಿಂದ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದು ಕ್ಷೇತ್ರದ ಮತದಾರರ ವಿಶ್ವಾಸವನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿದ್ಧಾರೆ.
ಇದನ್ನೂ ಓದಿ: Gold Rate | ಇಂದಿನ 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಎರಡು ಹೆಚ್ಚುವರಿ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಅವಕಾಶ ನೀಡಬೇಕೆಂದು ವಿಧಾನಸಭಾ ಅಧಿವೇಶನವಲ್ಲದೆ, ಸಿಎಂ, ಡಿ.ಸಿಎಂ ಹಾಗೂ ನೀರಾವರಿ ಸಚಿವರಿಗೆ ಮನವಿ ನೀಡಿ ನಿರಂತರ ಒತ್ತಾಯ ಪಡಿಸುತ್ತಿದ್ದರು.
ಪ್ರಸ್ತುತ ಚಳ್ಳಕೆರೆ(challakere) ವಿಧಾನಸಭಾ ಕ್ಷೇತ್ರದಲ್ಲಿ ಪರಶುರಾಮಪುರ, ಭೌಳೂರು, ಬೊಂಬೇರಹಳ್ಳಿ, ಕಲಮರಹಳ್ಳಿಯಲ್ಲಿ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣವಾಗಿದ್ದು, ಸುತ್ತಮುತ್ತಲ ಹತ್ತಾರು ಗ್ರಾಮಗಳ, ಸಾವಿರಾರು ರೈತರ ಜಮೀನು ಹಾಗೂ ಜಾನುವಾರುಗಳಿಗೆ ಸಮೃದ್ದಿ ಕುಡಿಯುವ ನೀರಿನ ಸೌಕರ್ಯವನ್ನು ಶಾಸಕರು ಒದಗಿಸಿದ್ಧಾರೆ.
ಶಾಸಕರ ಒತ್ತಾಯದ ಮೇರೆಗೆ ಜುಲೈ 2ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ನಡೆದ ಸಂಪುಟ ಸಭೆಯಲ್ಲಿ ಗೋಸಿಗೆರೆ ಗ್ರಾಮದ ಬಳಿ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 30.50ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ದೊರಕಿದೆ. ಇದರಿಂದ ವಡೇರಹಳ್ಳಿ, ಬೊಂಬೇರಹಳ್ಳಿ, ಕಸ್ತೂರಿತಿಮ್ಮನಹಳ್ಳಿ, ದ್ಯಾವರನಹಳ್ಳಿ, ದೇವರಮರಿಕುಂಟೆ ಗ್ರಾಮಗಳ ಸುತ್ತಮುತ್ತಲ್ಲಿನಲ್ಲಿ ಅಂತರ್ಜನ ಹೆಚ್ಚುತ್ತದಲ್ಲದೆ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದಂತಾಗುತ್ತದೆ.
ತೋರೆಬೀರನಹಳ್ಳಿ ಮತ್ತು ಬೆಳಗೆರೆ ಗ್ರಾಮದ ನಡುವೆ ಸುಮಾರು 28 ಕೋಟಿ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಅನುಮತಿ ದೊರಕಿದ್ದು ಇದರಿಂದ ನಾರಾಯಣಪುರ, ಕೋನಿಗರಹಳ್ಳಿ, ರಂಗನಾಥಪುರ ವ್ಯಾಪ್ತಿಯ ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ.
ವಿಶೇಷವಾಗಿ ಜಾಜೂರು ಗ್ರಾಮದ ನಾಗಗೊಂಡನಹಳ್ಳಿ ಬಳಿ ಕಳೆದ 2013ಕ್ಕೂ ಮುಂಚೆ ನಿರ್ಮಾಣ ಮಾಡಿದ್ದ ಬಿಡ್ಜ್ ಕಂ ಬ್ಯಾರೇಜ್ ಮಳೆಗೆ ಕೊಚ್ಚಿಹೋಗಿದ್ದು, ನೂತನ ಬ್ಯಾರೇಜ್ ನಿರ್ಮಾಣಕ್ಕಾಗಿ ಸಣ್ಣ ನೀರಾವರಿ ಇಲಾಖೆಗೆ 8.50ಕೋಟಿ ಅನುದಾನವನ್ನು ನೀಡಲಾಗಿದೆ.
ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ಅರ್ಜಿ ಆಹ್ವಾನ
ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಕಡೆ ನೂತನ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣ, ಒಂದು ಬ್ಯಾರೇಜ್ ನಿರ್ಮಾಣಕ್ಕಾಗಿ ಅನುದಾನ ನೀಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಣ್ಣನೀರಾವರಿ ಸಚಿವ ಎನ್.ಎಸ್.ಬೋಸರಾಜ್‌ರವರಿಗೆ ಶಾಸಕರು ಕೃತಜ್ಞತೆ ತಿಳಿಸಿದ್ಧಾರೆ.
ತಾಲ್ಲೂಕಿಗೆ ಮತ್ತೊಂದು ಗಿಫ್ಟ್ :
ತಾಲ್ಲೂಕಿನ ಗಡಿಭಾಗದಲ್ಲಿರುವ ಗುಡಿಹಳ್ಳಿ-ತಪ್ಪಗೊಂಡನಹಳ್ಳಿ ಮಾರ್ಗದ ಮಧ್ಯೆ ವೇದಾವತಿ ನದಿಗೆ ಅಡ್ಡಲಾಗಿ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 31.40 ಕೋಟಿ ಅನುದಾನ ದೊರಕಿದೆ.