Chitradurga news | nammajana.com | 07-07-2025
ನಮ್ಮಜನ.ಕಾಂ, ಚಳ್ಳಕೆರೆ: ಭದ್ರೆ ನೀರು ತನ್ನಿ, ಊರೊಳಗೆ ಬನ್ನಿ ಎಂದು 1980ರಲ್ಲೇ ಆಂಧ್ರ ಗಡಿ ಭಾಗದ ಓಬಳಾಪುರದಲ್ಲಿ ಚಳವಳಿ ಆರಂಭಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಭದ್ರಾ ಮೇಲ್ದಂಡೆ ಯೋಜನೆ(Upper Bhadra) ಕಾಮಗಾರಿ ಮುಗಿಯುತ್ತಿಲ್ಲ. ಕೇಂದ್ರ ಸರಕಾರ ಘೋಷಣೆ ಮಾಡಿರುವ 5300 ಕೋಟಿ ರೂ. ಕೊಡುತ್ತಿಲ್ಲ ಎಂದು ಅಖಂಡ ರೈತ ಸಂಘದ ಮಾಜಿ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಆರೋಪಿಸಿದರು.

ಇದನ್ನೂ ಓದಿ: ಮಲ್ಲಾಡಿಹಳ್ಳಿಯಲ್ಲಿ 5 ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಚಾಲನೆ
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರದ ಬಯಲು ಸೀಮೆಗೆ ಭದ್ರೆಯ ನೀರು ಹರಿಸುವ ಮೂಲಕ ಕೃಷಿಗೆ
ಶಕ್ತಿ ತುಂಬಬೇಕಿದೆ. ಆದರೆ, ಭದ್ರೆಯ ಕಾಮಗಾರಿ ಮುಗಿಯುತ್ತಿಲ್ಲ, ನಮಗೆ ನೀರು ಬರುತ್ತಿಲ್ಲ, ಇನ್ನೂ ಎಷ್ಟು ವರ್ಷ ಕಾಯಬೇಕು ಎಂದು ಪ್ರಶ್ನೆ ಮಾಡಿದರು.
ಶಾಸಕ ರಘುಮೂರ್ತಿಯವರು ಬತ್ತಿ ಹೋಗಿದ್ದ ಜಿಲ್ಲೆಯ ಜೀವನದಿ ವೇದಾ ವತಿಗೆ ಬ್ಯಾರೇಜ್ ಕಟ್ಟಿಸಿ ನೀರು ತುಂಬಿಸಿದ್ದರಿಂದ ಮತ್ತೆ ನದಿಗೆ ಜೀವ ಕಳೆ ಬಂದಿದೆ. ಈಗ ಮತ್ತೆ ಮೂರು ಬ್ಯಾರೇಜ್(Upper Bhadra) ಕಟ್ಟಿಸಲು ಮುಂದಾ ಗಿರುವುದು ಖುಷಿ ತಂದಿದ್ದು, ಇನ್ನು ಐದು ವರ್ಷದಲ್ಲಿ ಪರಶುರಾಂಪುರ ಹೋಬಳಿ ಮಲೆನಾಡು ಆಗುವುದು ಎಂದರು.
ಇದನ್ನೂ ಓದಿ: ನಗರಸಭೆಗೆ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ
ಅಖಂಡ ರೈತ ಸಂಘದ ತಾಲೂಕು ಅಧ್ಯಕ್ಷ ಎ.ನಾಗರಾಜ್ ರೈತರಾದ ರಾಮಣ್ಣ ಶಿವಣ್ಣ, ಕೃಷ್ಣಮೂರ್ತಿಸ್ವಾಮಿ ಇದ್ದರು.
