Chitradurga news|Nammajana.com|12-7-2025
ನಮ್ಮಜನ.ಕಾಂ, ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರೆಂಟಿ ತರುವ ಮೂಲಕ ಬಡವರ ಸುಧಾರಣೆ (Santhosh Lad) ಮಾಡುವ ಕೆಲಸ ಮಾಡಿದ್ದು ಬಿಜೆಪಿ ಇಂತಹ ಒಂದು ಕಾರ್ಯಕ್ರಮ ಮಾಡಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ನಗರದ ಎಸ್.ಜಿ .ಸಮುದಾಯ ಭವನದಲ್ಲಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಸಂಸ್ಕೃತಿ ಇಲಾಖೆಯಲ್ಲಿನ ಎಲ್ಲಾ ಕಲಾವಿದರಿಗೆ ಕಾರ್ಮಿಕ ಇಲಾಖೆ ಸೌಲಭ್ಯ ಒದಗಿಸಲಾಗುತ್ತಿದೆ. ಕಾರ್ಮಿಕರಿಗೆ ಸಂಕಷ್ಟಕ್ಕೆ ಸಿಲುಕಿ ಸಾವನ್ನು ಅನುಭವಿಸಿದರೆ ಅಂತಹ ಕಾರ್ಮಿಕರಿಗೆ 5 ಲಕ್ಷ ಪರಿಹಾರ ಒದಗಿಸಲಾಗುತ್ತದೆ.
ಆಶಾ ದೀಪ ಯೋಜನೆಯಲ್ಲಿ ಎಸ್ಸಿ , ಎಸ್ಟಿ ಮಕ್ಕಳಿಗೆ ತರಬೇತಿ ಅವಧಿಯಲ್ಲಿ 5000 ರೂ. ಮತ್ತು ಪರ್ಮೆಂಟ್ ಕೆಲಸ ಕಂಪನಿ ಪಡೆದುಕೊಂಡರೆ 6000 ರೂ ಗಳನ್ನು ಎರಡು ವರ್ಷದ (Santhosh Lad) ಅವಧಿಗೆ ನೀಡಲಾಗುತ್ತದೆ.
ಆಶಾ ದೀಪ ಯೋಜನೆಯ ಸೌಲಭ್ಯಗಳು
1.ಮಾಲೀಕರು ಪಾವತಿಸಿದ ಇ.ಎಸ್ ಮತ್ತು ಜಿಪಿಎಸ್ ವಂತಿಕೆ ಮರುಪಾವತಿ:-
ಖಾಸಗಿ ವಲಯದ ಸಂಸ್ಥೆಗಳಲ್ಲಿ ಹೊಸದಾಗಿ ನೇಮಿಸಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳಿಗೆ ಮಾಲೀಕರು/ಉದ್ಯೋಗದಾತರು ಕಡ್ಡಾಯವಾಗಿ ಪಾವತಿಸಿದ ಶಾಸನಬದ್ಧ ಭವಿಷ್ಯನಿಧಿ ಹಾಗೂ ಬಿ.ಎಸ್.ಐ ವಂತಿಕೆಯನ್ನು ರಾಜ್ಯ ಸರ್ಕಾರದಿಂದ ಮಾಲೀಕರು/ ಉದ್ಯೋಗದಾತರಿಗೆ ಎರಡು ವರ್ಷಗಳ ಅವಧಿವರೆಗೆ ಮಾಸಿಕ ಗರಿಷ್ಠ ತಲಾ ರೂ.3000/-ಗಳ ಮಿತಿಯೊಳಗೆ ಮರುಪಾವತಿಸುವುದು.
2. ಅಪ್ರೆಂಟಿಸ್ ತರಬೇತಿ ಪಡೆಯುವ ಅಭ್ಯರ್ಥಿಗಳ ಶಿಷ್ಯವೇತನ (Stipend) ಮರುಪಾವತಿ:-
ಆರು ತಿಂಗಳಿನಿಂದ ಎರಡು ವರ್ಷಗಳ ಅವಧಿಯ ಅಫ್ರೆಂಟೈಸ್‌ಶಿಪ್ ತರಬೇತಿ (Santhosh Lad) ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ಕಾಯ್ದೆ, 1961 ರನ್ವಯ ಮಾಲಿಕರು ಪಾವತಿಸಿದ ಮಾಸಿಕ ಶಿಷ್ಯವೇತನ (Slind) ಮೊತ್ತದಲ್ಲಿ 2/3 ರಷ್ಟು ಮೊತ್ತವನ್ನು ಮಾಸಿಕ ತಲಾ ರೂ.5000/- ಗಳ ಮಿತಿಯೊಳಗೆ ಮರುಪಾವತಿಸುವುದು.
ಇದನ್ನೂ ಓದಿ: NREGA: ನರೇಗಾ ಹೊರಗುತ್ತಿಯ ಸಿಬ್ಬಂದಿಗೆ ಆರು ತಿಂಗಳಿಂದ ವೇತನ ಕೊರತೆ
3. ಹೊಸದಾಗಿ ನೇಮಿಸಿಕೊಂಡ ಆ ಅಭ್ಯರ್ಥಿಗಳ ವೇತನ ಮರುಪಾವತಿ:-
ಹೊಸದಾಗಿ ನೇಮಿಸಿಕೊಂಡ ಅಪ್ರೆಂಟೈಸ್ ಅಭ್ಯರ್ಥಿಗಳ ವೇತನ ಭಾಗಶಃ ಮರುಪಾವತಿ:- ಅಪೆಂಟೈಸ್ ತರಬೇತಿ ಪೂರ್ಣಗೊಂಡ ನಂತರ ಅದೇ ಮಾಲೀಕರು ಖಾಯಂ ಹುದ್ದೆಗೆ ಅದೇ ಅಭ್ಯರ್ಥಿಯನ್ನು ಹೊಸದಾಗಿ ನೇಮಕಾತಿ ಮಾಡಿಕೊಂಡಲ್ಲಿ, ಮಾಲೀಕರು ಪಾವತಿಸಿದ ವೇತನದಲ್ಲಿ ಶೇ.50 ರಷ್ಟು ಮೊತ್ತವನ್ನು ಮಾಸಿಕ ತಲಾ ರೂ. 7000/-ಗಳ ಮಿತಿಯೊಳಗೆ ಎರಡು | ವರ್ಷಗಳ ಅವಧಿಗೆ ಮರುಪಾವತಿಸುವುದು.
4. ಹೊಸದಾಗಿ ಖಾಯಂ ಹುದ್ದೆಗೆ ನೇಮಕಾತಿಗೊಂಡ ಅಭ್ಯರ್ಥಿಗಳ ವೇತನ ಮರುಪಾವತಿ:-
ಹೊಸದಾಗಿ ಖಾಯಂ ಹುದ್ದೆಗೆ ನೇಮಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮಾಲೀಕರು ಪಾವತಿಸಿದ (Santhosh Lad) ವೇತನದಲ್ಲಿ ಮಾಸಿಕ ತಲಾ ರೂ. 6000/-ಗಳ ಮಿತಿಯೊಳಗೆ ಎರಡು ವರ್ಷಗಳ ಅವಧಿಗೆ ಮರುಪಾವತಿಸುವುದು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252