CHITRADURGA NEWS | nammajanna news | 12-07- 2025
ನಮ್ಮಜನ.ಕಾಂ, ಚಿತ್ರದುರ್ಗ: ಕೇಂದ್ರ ಸರಕಾರದ (Achievement) ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಮುದ್ರಾ ಯೋಜನೆಯ (ಪಿಎಂಎಂವೈ)ಲಾಭಪಡೆದ ಚಿತ್ರದುರ್ಗದ ಯುವ ಉದ್ಯಮಿ, ಪರಿಸರ ಸ್ನೇಹಿ ಪೇಪರ್ ಬ್ಯಾಗ್(paper bag) ತಯಾರಿಕಾ ಘಟಕ ಆರಂಭಿಸಿ, ಎಂಟರಿಂದ ಹತ್ತು ಮಂದಿಗೆ ಉದ್ಯೋಗ ಕೊಟ್ಟು ತಾವೂ ಉತ್ತಮ ಜೀವನ ಕಂಡುಕೊಂಡಿದ್ದಾರೆ.

ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಅಳವಡಿಕೆಗೆ ರೈತ ಸಂಘ ವಿರೋಧ
ಶ್ರೀವಾರಿ ಎಂಟರ್‌ಪ್ರೈಸಸ್ ಹೆಸರಲ್ಲಿ ಯಶಸ್ಸು
ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಗ್ರಾಮದ ಡಿ.ಪಿ.ಬಸವೇಶ, ಎಂಬಿಎ ಪದವಿ ಮುಗಿಸಿದ್ದು ಚಿತ್ರದುರ್ಗ ವಿದ್ಯಾನಗರದಲ್ಲಿ ವಾಸಿಸುತ್ತಿದ್ದಾರೆ. ಇವರು, ಚಿತ್ರದುರ್ಗ ನಗರ ಹೊರವಲಯದ ಮಠದ ಕುರುಬರಹಟ್ಟಿಯ ಅಗಸರಹಳ್ಳಿಯ ಕೈಗಾರಿಕ ವಸಾಹತು ಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಶ್ರೀವಾರಿ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಪೇಪರ್ ಬ್ಯಾಗ್ (Achievement) ತಯಾರಿಕಾ ಘಟಕ ಆರಂಭಿಸಿದ್ದಾರೆ. ಘಟಕದಲ್ಲಿ ಪೇಪರ್ ತಯಾರಿಸುವವರು, ಮಾರ್ಕೆಟಿಂಗ್ ಸೇರಿದಂತೆ ಎಂಟರಿಂದ ಹತ್ತು ಮಂದಿ ಕೆಲಸ ಮಾಡುತ್ತಿದ್ದಾರೆ.
ಸುಮಾರು 25ರಿಂದ 30 ರೀತಿಯ ಬಿಳಿ, ಬ್ರೌನ್ ಸೇರಿದಂತೆ ಮತ್ತಿತರೆ ಬಣ್ಣಗಳ ಪೇಪರ್ ಬ್ಯಾಗ್,(paper bag)ಕವರ್ ತಯಾರಿಸಲಾಗುತ್ತಿದ್ದು, ಇವುಗಳನ್ನು ಹೋಟೆಲ್, ರೆಸ್ಟೋರೆಂಟ್, ಮೆಡಿಕಲ್ ಸ್ಟೋರ್, ಬೇಕರಿ, ಕಿರಾಣಿ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ.
ತಮಿಳುನಾಡಿನಿಂದ ಬರುತ್ತೆ ರಾಮೆಟೇರಿಯಲ್
ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹೊಸಪೇಟೆ, ಹುಬ್ಬಳ್ಳಿ, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಗೆ ಕೊಡಲಾಗುತ್ತಿದೆ. ತಮಿಳುನಾಡಿನಿಂದ ರಾಮೆಟೇರಿಯಲ್ ತರಿಸಲಾಗುತ್ತಿದೆ.
ಇದನ್ನೂ ಓದಿ: ಕಾರ್ಮಿಕ ಇಲಾಖೆಯಿಂದ SC-ST ಯುವಕರಿಗೆ “ಆಶಾದೀಪ ಯೋಜನೆ” ಜಾರಿ:Santhosh Lad
ಪ್ರತಿ ವರ್ಷ ಜುಲೈ 12ರಂದು ವಿಶ್ವ ಪೇಪರ್ ಬ್ಯಾಗ್ ದಿನವನ್ನಾಗಿ ಆಚರಿಸಲಾಗುತ್ತದೆ. ಪೇಪರ್ ಬ್ಯಾಗ್ ಪರಿಸರ ಸ್ನೇಹಿ ಮತ್ತು ಸುಸ್ಥಿರ ಅತಿಯಾದ ಪರ್ಯಾಯವಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಭೂಮಿ, ಪರಿಸರಕ್ಕೆ ಹಾನಿ ಆಗುತ್ತಿದೆ. ಇದರಿಂದ ಹೊರಬರಬೇಕಾದರೆ ಪರಿಸರಸ್ನೇಹಿ ಪೇಪರ್ ಬ್ಯಾಗ್‌ಗಳು ಇಂದಿನ ಸಮಾಜಕ್ಕೆ ಅನಿವಾರ್ಯ (paper bag) ಎಂಬುದನ್ನು ಮನಗಂಡು ಪೇಪರ್ ಬ್ಯಾಗ್ ಇಂಡಸ್ಟ್ರಿ ಆರಂಭಿಸಿದ್ದೇನೆ, ಆದರೆ ನಮ್ಮ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಹಾವಳಿ ಹೆಚ್ಚಾಗಿದೆ, ಪೇಪರ್ ಬ್ಯಾಗ್ ಬಗ್ಗೆ ಇನ್ನೂ ಸಾಕಷ್ಟು ಅರಿವು ಮೂಡಿಸಬೇಕಾದ ಆವಶ್ಯಕತೆ ಇದೆ ಎನ್ನುತ್ತಾರೆ ಬಸವೇಶ.
ಇದನ್ನೂ ಓದಿ: Today Gold Rate | ಇಂದು ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 10 ಲಕ್ಷ ಸೇರಿದಂತೆ ಸುಮಾರು 25ರಿಂದ 30 ಲಕ್ಷ ಬಂಡವಾಳ ಹಾಕಲಾಗಿದೆ. ಪೇಪರ್ ಬ್ಯಾಗ್ ಪರಿಸರ ಸ್ನೇಹಿಯಾಗಿವೆ. ಅವುಗಳ ಮೇಲೆ ಯಾವುದೇ ರೀತಿಯ ಪ್ರಿಂಟಿಂಗ್ ಕೂಡ ಮಾಡುತ್ತಿಲ್ಲ, ಜಿಲ್ಲಾಧಿಕಾರಿಗಳು, ಪರಿಸರ (Achievement) ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೂಡ ನಮ್ಮಲ್ಲಿ ತಯಾರಾಗುತ್ತಿರುವ ಪೇಪರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-ಡಿ.ಪಿ.ಬಸವೇಶ ಘಟಕ ಮಾಲೀಕ, ಚಿತ್ರದುರ್ಗ
