Chitradurga news | nammajana.com | 25-07-2025
ನಮ್ಮಜನ.ಕಾಂ, ಚಿತ್ರದುರ್ಗ: ಗ್ರಾಮೀಣ (T.Raghumurthy) ಅಭಿವೃದ್ಧಿಯ ಜತೆಗೆ ಹಳ್ಳಿಗಾಡಿನ ಎಲ್ಲಾ ವರ್ಗದ ಜನರು ಸಮಾಜದ ಮುಖ್ಯ ವಾಹಿನಿಗೆ ಬರಲು ಅಲ್ಲಿಗೆ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ ಅತಿ ಮುಖ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಇದನ್ನೂ ಓದಿ: ಹಿರಿಯ ನಾಗರಿಕರಿಗೆ ರಾಜ್ಯ ಪ್ರಶಸ್ತಿ: ಅರ್ಜಿ ಆಹ್ವಾನ

ಪರಶುರಾಂಪುರದ ಮುಖ್ಯ ವೃತ್ತದಲ್ಲಿ ಟಿ.ರಘುಮೂರ್ತಿಯವರಿಂದ ಶಾಸಕ ಗ್ರಾಮದ ಕುಮುಟಾ ಕೊಡಮಡುಗಿ ರಸ್ತೆಯ ಅಗಲೀಕರಣ ಕಾಮಗಾರಿ ಭೂಮಿ ಪೂಜೆ ಮತ್ತು ಗ್ರಾಮಗಳ ಅಭಿವೃದ್ಧಿಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದ ಗಡಿ ಪ್ರದೇಶ ಹಾಗೂ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಪರಶುರಾಂಪುರ ಹೋಬಳಿಯ ಕೇಂದ್ರದ ಅಭಿವೃದ್ಧಿಯೇ ನನ್ನ ಧೈಯವಾಗಿದ್ದು ಇಲ್ಲಿನ ಜನರು ಸಹಕಾರ ಮತ್ತು ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.
ಪರಶುರಾಂಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಅವರು ಭೂಮಿಪೂಜೆ ನೆರವೇರಿಸಿದರು. ಎಂ.ಆರ್‌ರುದ್ರೇಶ್, ಉಪಾಧ್ಯಕ್ಷ ತಿಪ್ಪಮ್ಮ ಇದ್ದರು.
ಇದನ್ನೂ ಓದಿ: ಭಾರತ್ ಎಲೆಕ್ಟ್ರಾನಿಕ್ಸ್‍ನಲ್ಲಿ ಚಾಲಕರ ಹುದ್ದೆಗಳು | ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ
ಗ್ರಾಮಗಳ ಜನರು ಜಾನುವಾರುಗಳು (T.Raghumurthy) ಸೇರಿದಂತೆ ವಾಹನಗಳ ಸಂಚಾರಕ್ಕೆ ಗ್ರಾಮದಲ್ಲಿ ದ್ವಿಪಥ ರಸ್ತೆಯ ಅವಶ್ಯಕತೆ ಇದ್ದು ಈಗ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ 6 ಕೋಟಿ ರು.ವೆಚ್ಚದಲ್ಲಿ ಕುಮುಟಾ ಕೊಡಮಡುಗಿ ಕೂಡು ರಸ್ತೆಯ
ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಮತ್ತು ಚಳ್ಳಕೆರೆ ಎಂಹೆಚ್ 150ಎ ಇಂದ ವಿಶ್ವನಾಥ ಪುರ ರಸ್ತೆಯಿಂದ ದ್ವಿಪಥ ರಸ್ತೆ, ಕರೇ ಕಲ್ಲಹಟ್ಟಿ ಗ್ರಾಮದಲ್ಲಿ 20 ಲಕ್ಷ ರು. ವೆಚ್ಚದಲ್ಲಿ ಜಿಲ್ಲಾ ಖನಿಜ ನಿಧಿಯಿಂದ ಸಾಮಾನ್ಯ ಸಿ.ಸಿ ರಸ್ತೆ, ದೊಡ್ಡ ಗೊಲ್ಲರಹಟ್ಟಿ
ಗ್ರಾಮದಲ್ಲಿ 10ಲಕ್ಷರು.ಸಿಸಿ ರಸ್ತೆ, ಚೌಳೂರು ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 80 ಲಕ್ಷ ರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡ, ಗೊರ್ಲತ್ತು ಗ್ರಾಮದಲ್ಲಿ 20 ಲಕ್ಷ ರು. ವೆಚ್ಚದಲ್ಲಿ ಜಿಲ್ಲಾಖನಿಜ ನಿಧಿಯಿಂದ ಸಿಸಿ ರಸ್ತೆ ಕಾಮಗಾರಿಗಳಿಗೂ ಸಹಿತ ಚಾಲನೆ ನೀಡಿದರು.
ಇದನ್ನೂ ಓದಿ: ವಿದ್ಯಾರ್ಥಿವೇತನ | ವಿಕಲಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್‌ರುದ್ರೇಶ್, ಪರಶುರಾಮಪುರ ಹೋಬಳಿಯ ಅಭಿವೃದ್ಧಿಯಲ್ಲಿ ಪ್ರಮುಖ ರಸ್ತೆ ಕಾಮಗಾರಿ, ಘನತ್ಯಾಜ್ಯ ವಿಲೇವಾರಿ ಘಟಕನಿರ್ಮಾಣ, ಬಸ್‌ನಿಲ್ದಾಣ ಅಭಿವೃದ್ಧಿ, ಕುಡಿಯುವ ನೀರಿನ ಸಂಗ್ರಹಕ್ಕೆ ಓವರ್ ಹೆಡ್ ಟ್ಯಾಂಕ್ ಮತ್ತು ಹೆಚ್ಚುವರಿಯಾಗಿ ಗ್ರಾಪಂ ವ್ಯಾಪಾರದಮಳಿಗೆಗಳನ್ನು ಹಂತಹಂತವಾಗಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುವುದು ಎಂದರು.
ಇದೆ ವೇಳೆ(T.Raghumurthy) ಗ್ರಾಮಗಳಲ್ಲಿ ಕುಂದು ಕೊರತೆಗಳನ್ನು ಸ್ಥಳೀಯ ಜನಪ್ರತಿನಿಧಿ ಗಳೊಂದಿಗೆ ಸಮಾಲೋಚಿಸಿ ಕೂಡಲೇ ಹಿಂದಿನ ಆಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ಹೋಬಳಿ ಕೇಂದ್ರಕ್ಕೆ ಅತ್ಯಾಧುನಿಕ ಸೌಕರ್ಯಗಳ ಅವಶ್ಯಕತೆ ಇದೆ ಕೂಡಲೇ ರೂಪಿಸಿ ಯೋಜನೆ ಪರಶುರಾಂಪುರದ ಕೇಂದ್ರದ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು.
ಇದನ್ನೂ ಓದಿ: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ
ಈ ವೇಳೆ ಗ್ರಾಪಂ ಅಧ್ಯಕ್ಷ ಎಂ.ಆರ್ ರುದ್ರೇಶ್, ಉಪಾಧ್ಯಕ್ಷ ತಿಪ್ಪಮ್ಮ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯ ಎಸ್ ಚನ್ನಕೇಶವ, ಚೌಳೂರು ಬಸವರಾಜು, ಪ್ರಕಾಶ, ಕೃಷ್ಣಪ್ಪ, ಸರೋಜಮ್ಮ, ಬೊಮ್ಮಕ್ಕ, ಜಯವಿರಾಚಾರಿ, ಕ್ಯಾದಿಗುಂಟೆನಾಗರಾಜು, ರವಿ, ಕರಿಯಣ್ಣ, ಗೌಸ್ಪೀರ್, ಪ್ರಸನ್ನ ಕುಮಾರ್, ಕಾಟಯ್ಯ ಪಾಲಯ್ಯ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252