Chitradurga news | nammajana.com | 26-07-2025
ನಮ್ಮಜನ.ಕಾಂ,ಚಿತ್ರದುರ್ಗ: ಕೃಷಿ(Protest) ಅಭಿವೃದ್ದಿಗಾಗಿ ರೈತ ಮಹೇಶ್ವರಪ್ಪನವರು ಪಡೆದುಕೊಂಡಿರುವ ಸಾಲದ ಕಂತನ್ನು ಬ್ಯಾಂಕಿಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡಿರುವ ಬೆನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಡಿ.ಸಿ.ಕಿರಣ್‍ಕುಮಾರ್‍ನನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಹುಲ್ಲೂರು ಹಾಗೂ ಬೆನಕನಹಳ್ಳಿ ಗ್ರಾಮಸ್ಥರು ಶುಕ್ರವಾರ ಸಹಕಾರ ಸಂಘದ ಎದುರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ನಗರಸಭೆ | ಜುಲೈ 28ರಂದು ಉಪಾಧ್ಯಕ್ಷರ ಚುನಾವಣೆ

ಬೆನಕನಹಳ್ಳಿಯಲ್ಲಿ ಹದಿನೆಂಟು ಎಕರೆ ಜಮೀನ ಹೊಂದಿರುವ ಕೃಷಿಕ ಮಹೇಶ್ವರಪ್ಪನವರು 2023 ಮಾರ್ಚ್‍ನಲ್ಲಿ 23 ಲಕ್ಷ ರೂ.ಗಳ ಸಾಲ ಪಡೆದಿದ್ದು, ಆರು ತಿಂಗಳಿಗೆ ಮೂರು ಲಕ್ಷ ರೂ.ನಂತೆ ನಾಲ್ಕು ಕಂತುಗಳನ್ನು ಪಾವತಿಸಿದ್ದಾರೆ.
ಇದರಲ್ಲಿ ಎರಡು ಕಂತು ಸಾಲದ ಹಣವನ್ನು ಡಿ.ಸಿ.ಸಿ. ಬ್ಯಾಂಕ್‍ಗೆ ಜಮ ಮಾಡಿರುವ ಕಾರ್ಯದರ್ಶಿ ಡಿ.ಸಿ.ಕಿರಣ್‍ಕುಮಾರ್ ಉಳಿದೆರಡು ಕಂತಿನ ಆರು ಲಕ್ಷ ಎಂಟು ಸಾವಿರ ರೂ.ಗಳನ್ನು ಸ್ವಂತಕ್ಕೆ ಬಳಸಿಕೊಂಡಿರುವುದಲ್ಲದೆ ಆರು ತಿಂಗಳ ಹಿಂದೆ ಎಂಬತ್ತು ಲಕ್ಷ ರೂ.ಗಳ ಹಗರಣದಲ್ಲಿ ಸಿಲುಕಿಕೊಂಡಿದ್ದಾನೆ. ಹಾಗಾಗಿ ಕಾನೂನು ರೀತಿಯ ಕ್ರಮ ಕೈಗೊಂಡು ಕಾರ್ಯದರ್ಶಿ ಹುದ್ದೆಯಿಂದ ಅಮಾನತ್ತುಗೊಳಿಸುವಂತೆ ಮಹೇಶ್ವರಪ್ಪನವರ ಪುತ್ರ ಈಶ್ವರ್ ಎಆರ್. ಡಿಆರ್. ಎಂ.ಡಿ. ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಗ್ರಾಮೀಣ ಭಾಗದ ರೈತರ ಬದುಕು ಹಸನಾಗಲು ಸಾರಿಗೆ ಸಂಪರ್ಕ ಅಗತ್ಯ: ಟಿ.ರಘುಮೂರ್ತಿ
ಇಷ್ಟೆಲ್ಲಾ(Protest) ಅವ್ಯವಹಾರದಲ್ಲಿ ಭಾಗಿಯಾಗಿರುವ ಕಾರ್ಯದರ್ಶಿ ಡಿ.ಸಿ.ಕಿರಣ್‍ಕುಮಾರ್‍ನನ್ನು ಅಮಾನತ್ತುಗೊಳಿಸುವಂತೆ ನಷ್ಟಕ್ಕೊಳಗಾಗಿರುವ ಬೆನಕನಹಳ್ಳಿ ಹುಲ್ಲೂರು ಗ್ರಾಮಸ್ಥರು ಧರಣಿ ನಡೆಸಿದಾಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಾಗಿಲು ತೆರೆಯದೆ ಅಲ್ಲಿನ ಸಿಬ್ಬಂದಿಗಳು ಪಲಾಯನಗೊಂಡಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252