Chitradurga news | nammajana.com | 26-07-2025
ನಮ್ಮಜನ.ಕಾಂ,ಹೊಸದುರ್ಗ: ಭದ್ರಾ ಜಲಾಶಯಕ್ಕೆ(vv sagara) ಯಥೇಚ್ಛವಾಗಿ ನೀರು ಬರುತ್ತಿರುವುದರಿಂದ ಡ್ಯಾಮ್ ಭರ್ತಿಯಾಗುವ ಮುನ್ನವೇ, ನಿತ್ಯವು ನೀರನ್ನು ಹೊರ ಬಿಡಲಾಗುತ್ತಿದೆ. ವಿ.ವಿ.ಸಾಗರ ಜಲಾಶಯದಲ್ಲಿ 130 ಅಡಿಗೆ ನೀರು ನಿಲ್ಲಬೇಕು. ಮೇಲ್ಪಟ್ಟ ನೀರು ಹೊರಹೋಗುವಂತೆ ಗೇಟ್ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಇದನ್ನೂ ಓದಿ: ಬ್ಯಾಂಕ್ ಹಣ ದುರುಪಯೋಗ ಆರೋಪ, ರೈತನ ವಿರುದ್ದ ಪ್ರತಿಭಟನೆ

ತಾಲೂಕಿನ ವಿ.ವಿ.ಸಾಗರ ಜಲಾಶಯದ ಹಿನ್ನೀರಿನಿಂದ ಲಕ್ಕಿಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೈಪ್ ಲೈನ್ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ವಿ.ವಿ.ಸಾಗರ ಜಲಾಶಯದ ಕೋಡಿ ಬಾಯಿಗೆ ಗೇಟ್ ಅಳವಡಿಸಿದರೆ, ಹಿನ್ನೀರಿನ ಗ್ರಾಮಗಳ ಜನರಿಗೆ ಸಮಸ್ಯೆಯಾಗುವುದು ತಪ್ಪುತ್ತದೆ. ಜಲಾಶಯ ತುಂಬಿ ಕೋಡಿ ಮುಖಾಂತರ ನೀರು ಹರಿದು ಹಿರಿಯೂರು ತಾಲ್ಲೂಕಿಗೆ ಹೋಗುತ್ತದೆ. ಅದನ್ನು ನೋಡಿ ಖುಷಿಪಡುವವರು, ಹಿನ್ನೀರಿನಲ್ಲಿ ತೊಂದರೆ ಆದಾಗ ನೋಡಲು ಯಾರು ಬರುವುದಿಲ್ಲ. ಕೋಡಿ ನೀರು ಬರುವ ಸಮೀಪ ಸೇತುವೆ ಹಾಕಲಾಗಿದ್ದು, 35.ಕೋಟಿ ರೂ.ವೆಚ್ಚದಲ್ಲಿ ಸೇತುವೆ ಅಭಿವೃದ್ಧಿ ಪಡಿಸುತ್ತೇವೆ ಎಂದರು.
ಚೆಕ್‌ಡ್ಯಾಂಗಳನ್ನು ಮಾಡುವುದರ(VV Sagar) ಮೂಲಕ ವೇದಾವತಿ ನದಿ ಪಾತ್ರದಲ್ಲಿ 35.ಕಿಮೀ ನೀರು ನಿಲ್ಲಿಸಿದ್ದೇವೆ. ಆ ಭಾಗಗಳಲ್ಲಿ ಅಂತರ್ಜಲ ಸಾಕಷ್ಟು ವೃದ್ಧಿಯಾಗಿದ್ದು, ಹಿನ್ನೀರಿನಿಂದ ಸಾಕಷ್ಟು ಹಾನಿಯಾಗಿದೆ. ಸೇತುವೆಗಳು, ರಸ್ತೆಗಳು ಹಾಳಾಗಿವೆ. 6 ಪಂಚಾಯತಿಗಳ ವ್ಯಾಪ್ತಿಯಲ್ಲಿ 87.ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನೆಡೆಯಲಿವೆ. 6 ಗ್ರಾ.ಪಂ.ವ್ಯಾಪ್ತಿಗಳ 12 ಸಾವಿರ ಎಕರೆ ಪ್ರದೇಶಕ್ಕೆ ನೀರು ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ
ರೈತರನ್ನು ಶ್ರೀಮಂತರನ್ನಾಗಿ ಮಾಡಲು ಮುಖ್ಯವಾಗಿ ಭೂಮಿ, ನೀರು ಮತ್ತು ವಿದ್ಯುತ್ ಬೇಕಾಗಿದ್ದು, ಆ ಕೆಲಸವನ್ನು ನಾನು 30 ವರ್ಷಗಳಿಂದ ಮಾಡಿದ್ದೇನೆ. ವಿ.ವಿ.ಸಾಗರ ಜಲಾಶಯ ಹತ್ತಿರವಿದ್ದರೂ, ಲಕ್ಕಿಹಳ್ಳಿ ಪ್ರದೇಶದ ವ್ಯಾಪ್ತಿಯ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಡ್ಯಾಮ್ ಸಮೀಪವಿದ್ದರೂ ನೀರು ಪಡೆಯುವುದು ಅಷ್ಟು ಸುಲಭವಿಲ್ಲ.
ವೇದಾವತಿ ನದಿ ನೀರು ಕರ್ನಾಟಕದಲ್ಲಿ ಹರಿದು ಆಂಧ್ರಪ್ರದೇಶಕ್ಕೆ ಸೇರುತ್ತದೆ. ಹೀಗಾಗಿ, ಅಂತರಾಜ್ಯ ಮಟ್ಟದ ಸಮಿತಿಯಲ್ಲಿ ನೀರು ಪಡೆಯಲು ಅನುಮತಿ ಪಡೆಯಬೇಕು. ಸರಕಾರದೊಂದಿಗೆ ಪ್ರಯತ್ನ ನಡೆಸಿದ್ದೇವೆ ಎಂದು ಹೇಳಿದರು.
ವಿ.ವಿ.ಸಾಗರಕ್ಕೆ ವೇದಾವತಿ(VV Sagar) ನದಿ ನೀರು ಮಾತ್ರ ಹರಿದು ಬರಲಿದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಜಲಾಶಯಕ್ಕೆ ಗಂಜಿಗೆರೆ ಹಾಗೂ ಮಾದರ ಹಳ್ಳದ ಮೂಲಕ ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನೀರು, ಬಲ್ಲಾಳ ಸಮುದ್ರ ಹಳ್ಳದ ಮೂಲಕ ಕಡೂರು, ತರೀಕೆರೆ, ಅರಸಿಕೆರೆ ತಾಲೂಕಿನ ನೀರು, ಗುಂದಿಹಳ್ಳದ ಮೂಲಕ ಹೊಳಲ್ಕೆರೆ ತಾಲೂಕಿನ ನೀರು ಹರಿದು ಬರುವುದರಿಂದ 136.ಅಡಿಗೆ ಬರುತ್ತದೆ. ಹೀಗಾಗಿ, 130.ಅಡಿಗೆ ನೀರು ನಿಲ್ಲಬೇಕು. 130 ಅಡಿ ನಂತರ ನೀರು ಹೊರ ಹೋಗಬೇಕು ಎಂದು ಹೇಳಿದರು.
ಪುನರ್ ವಸತಿ, ಪುನರ್ ಚೇತನ ಯೋಜನೆಯಡಿ 6.ಪಂಚಾಯತಿ ವ್ಯಾಪ್ತಿಯ ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ 7.ಲಕ್ಷ ರೂಪಾಯಿ ಕೊಡಲಾಗುವುದು. ಉಳಿದ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಫಲಾನುಭಿಗಳಿಗೆ 3.50 ಲಕ್ಷ ರು.ಅನುದಾನ ನೀಡಲಾಗುವುದು ಭರವಸೆ ನೀಡಿದರು.
ಇದನ್ನೂ ಓದಿ: ನಗರಸಭೆ | ಜುಲೈ 28ರಂದು ಉಪಾಧ್ಯಕ್ಷರ ಚುನಾವಣೆ
ಈ ವೇಳೆ ಬೆಸ್ಕಾಂ ಎ.ಇ.ಇ ಕಿರಣ್ ರೆಡ್ಡಿ, ಎಂಜಿನಿಯರ್ ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ ಮುದ್ದಪ್ಪ, ಜಿ.ಪಂ.ಮಾಜಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್, ಗ್ರಾ.ಪಂ.ಸದಸ್ಯರಾದ ಲಕ್ಷ್ಮಿ ದೇವಿ ಸೋಮಶೇಖರ್, ಲೀಲಾವತಿ ದಾರಮಾದಪ್ಪ, ಲಕ್ಷ್ಮೀದೇವಿ ಲಕ್ಷ್ಮಣ, ಪ್ರಭಮ್ಮ, ದಾರಮಾದಪ್ಪ, ರಾಜಪ್ಪ, ಅರುಣ್ ಸ್ವಾಮಿ, ಗ್ರಾಮದ ಮುಖಂಡರಾದ ವೈ.ಮುದ್ದಪ್ಪ, ಸೋಮಶೇಖರ್, ಚಂದ್ರಶೇಖರ್, ಬಸವರಾಜಪ್ಪ, ಗುಂಡಪ್ಪ ಮತ್ತು ಗುರುಮೂರ್ತಿ ಸೇರಿದಂತೆ ಲಕ್ಕಿಹಳ್ಳಿ ಮತ್ತು ಇನ್ನಿತರ ಗ್ರಾಮಗಳ ಜನರು ಪಾಲ್ಗೊಂಡಿದ್ದರು.
ಲಕ್ಕಿಹಳ್ಳಿ ಗ್ರಾಮದವರು ಸ್ವಯಂ ಪ್ರೇರಿತರಾಗಿ ಗ್ರಾಮಕ್ಕೆ ಕುಡಿಯುವ ನೀರು ತರಲು ಹೊರಟಿರುವ ಕಾರ್ಯಕ್ಕೆ ನನ್ನ ಮೆಚ್ಚುಗೆ ಇದೆ. ಇದೀಗ, ಕೆರೆಯಲ್ಲಿ ನೀರಿಲ್ಲ ಎಂಬ ಕಾರಣಕ್ಕಾಗಿ ಒಂದುಗೂಡಿ ನೀರು ತರುವ ಪ್ರಯತ್ನ ಮಾಡುವ ಹುಮ್ಮಸ್ಸು ಬಂದಿದೆ. ಇದು ನಿಮ್ಮ ಮಕ್ಕಳ ಜೀವನಕ್ಕೆ ಬಹಳ ಒಳ್ಳೆಯದು. ಇದನ್ನು ಹಿಂದೆಯೇ ಮಾಡಬೇಕಿತ್ತು. ನಿಮಗೆ ತಡವಾಗಿ ನೆನಪಾಗಿದೆ. ನೀವು ಕೇಳಲಿಲ್ಲ ಅಂತ ನಾವು ಸುಮ್ಮಲ್ಲ, ಪ್ರಯತ್ನ ಮಾಡುತ್ತಲೇ ಇದ್ದೇವೆ. -ಬಿ.ಜಿ.ಗೋವಿಂದಪ್ಪ ಶಾಸಕರು, ಹೊಸದುರ್ಗ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252