Chitradurga news|Nammajana.com|27-7-2025
ನಮ್ಮಜನ.ಕಾಂ, ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ದುಮ್ಮಿ (Brother murder) ಗ್ರಾಮದಲ್ಲಿ ಒಡ ಹುಟ್ಟಿದ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾಗಿದ್ದು ಹೇಗೆ ನೋಡಿ
ಈ ಪ್ರಕರಣದಲ್ಲಿ ಸ್ವಂತ ಅಕ್ಕ-ಭಾವ ಸೇರಿ ತನ್ನ ತಮ್ಮನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅಂಬ್ಯುಲೆನ್ಸ್ ನಲ್ಲಿ ಕತ್ತು ಬಿಗಿದು ಹತ್ಯೆ ಮಾಡಿದ್ದಾರೆ.

ದುಮ್ಮಿ ಗ್ರಾಮದ ಮಲ್ಲಿಕಾರ್ಜುನ (23) ಕೊಲೆಯಾದ ಯುವಕ. ಅಕ್ಕ ನಿಶಾ, ಭಾವ ಮಂಜುನಾಥ್ ಕೊಲೆ ಮಾಡಿದ ಆರೋಪಿಗಳಾಗಿದ್ದು ಅಪಘಾತದಲ್ಲಿ ಗಂಭೀರವಾಗಿ (Brother murder) ಗಾಯಗೊಂಡಿದ್ದ ಮೃತ ಮಲ್ಲಿಕಾರ್ಜುನ್. ಅಪರೇಷನ್ ವೇಳೆ ಮಲ್ಲಿಕಾರ್ಜುನ್ ಗೆ HIV ಇದೆ ಎಂದು ದೃಢವಾಗಿತ್ತು. ತಮ್ಮನಿಗೆ ಹೆಚ್ಐವಿ ಪಾಸಿಟಿವ್ ಬಂದಿದ್ದ ಕಾರಣದಿಂದ ಮಾಡಿದ ಅಕ್ಕ- ಭಾವ ಹತ್ಯೆ ಮಾಡಿದ್ದಾರೆ.
ಒಬ್ಬನೇ ತಮ್ಮ ಸತ್ತರೆ ಆಸ್ತಿ ತನಗೆ ಸೇರುವ ದೃಷ್ಠಿಯಲ್ಲಿ ಹತ್ಯೆ ಶಂಕೆ. ಮಣಿಪಾಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ (Brother murder) ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.
ಮೃತದೇಹ ನೋಡಿದ ನಂತರ ಅನುಮಾನ
ಮೃತದೇಹ ದುಮ್ಮಿ ಗ್ರಾಮಕ್ಕೆ ತಂದಿದ್ದ ವೇಳೆ ಅನುಮಾನ ಮೂಡಿದ್ದು ಕೊಲೆ ಶಂಕೆ ವ್ಯಕ್ತಪಡಿಸಿ ಗ್ರಾಮಸ್ಥರಿಂದ ಪೊಲೀಸರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಸಾಧನೆಗೆ ಬದ್ಧತೆ ಮತ್ತು ಕಠಿಣ ಪರಿಶ್ರಮ ಅತ್ಯಗತ್ಯ: MC ರಘುಚಂದನ್
ಹೊಳಲ್ಕೆರೆ ಠಾಣೆಗೆ ಮೃತನ ತಂದೆ ನಾಗರಾಜ್ ದೂರು (Brother murder) ನೀಡಿದ್ದರು ನಂತರ ಪೊಲೀಸರ ವಿಚಾರಣೆಯಲ್ಲಿ ಕೊಲೆ ರಹಸ್ಯ ಬಯಲಾಗಿದ್ದು ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252