Chitradurga news | nammajana.com | 29-07-2025
ನಮ್ಮಜನ.ಕಾಂ, ಚಳ್ಳಕೆರೆ: ನಗರಸಭೆಯ(Challakere) ಕೌನ್ಸಿಲ್ ಸಾಮಾನ್ಯಸಭೆ ಸೋಮವಾರ ಅಧ್ಯಕ್ಷೆ ಬಿ.ಶಿಲ್ಪಮುರುಳೀಧರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದ ಪೌರಾಯುಕ್ತ ಎಚ್.ಜಿ.ಜಗರೆಡ್ಡಿ ನಗರಸಭೆಯ ಸರ್ವತೋಮುಖ ಅಭಿವೃದ್ದಿ ಹಾಗೂ ಕಾಮಗಾರಿಗಳ ಅನುಷ್ಠಾನ ಕುರಿತು ಸಭೆಯನ್ನು ಆಯೋಜಿಸಲಾಗಿದೆ. ಎಲ್ಲಾ ಸದಸ್ಯರು ಹಾಗೂ ನಾಮನಿರ್ದೇಶನ ಸದಸ್ಯರು ನಗರದ ಅಭಿವೃದ್ದಿ ದೃಷ್ಠಿಯಿಂದ ಸಲಹೆ, ಸೂಚನೆ ನೀಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ವಿದ್ಯಾ ವಿಕಾಸ ಶಾಲೆಗೆ ಪ್ರಥಮ ಸ್ಥಾನ | ರಿಜನಲ್ ಹಂತಕ್ಕೆ ಆಯ್ಕೆ

ಪ್ರಾರಂಭದಲ್ಲಿ ಸ್ಥಾಯಿ ಸಮಿತಿ ರಚನೆ, ಕುಂಚಿಟಿಗರ ಹಾಸ್ಟಲ್ ಬಳಿ ನಾಡಪ್ರಭುಕೆಂಪೇಗೌಡ ವೃತ್ತ, ಬೀದಿನಾಯಿಗಳ ಹಾವಳಿ, ಬೀದಿದೀಪಗಳ ಅಳವಡಿಕೆ ಮುಂತಾದ ಸಮಸ್ಯೆಗಳ ಬಗ್ಗೆ ಸದಸ್ಯರು ಚರ್ಚೆ ಆರಂಭಿಸಿದರು.
ನಗರದ ಪಾವಗಡ ರಸ್ತೆಯ ಹೊರವಲಯದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಜಿ+೨ ಮನೆಗಳ ವಿತರಣೆ ಕುರಿತಂತೆ 175 ಫಲಾನುಭವಿಗಳ ಪಟ್ಟಿಯ ಬಗ್ಗೆ ಸದಸ್ಯರಾದ ಶ್ರೀನಿವಾಸ್, ಪ್ರಮೋದ್, ಎಸ್.ಜಯಣ್ಣ, ವಿಶುಕುಮಾರ್, ಪಾಲಮ್ಮ, ಸಾಕಮ್ಮ, ನಿರ್ಮಲ, ಸಾಕಮ್ಮ, ಕವಿತಾನಾಯಕಿ, ನಾಗಮಣಿ ಮುಂತಾದವರು ಆಕ್ಷೇಪಿಸಿದರು. ಪೌರಾಯುಕ್ತ ಜಗರೆಡ್ಡಿ ಪರವಾಗಿ ಮಾಹಿತಿ ನೀಡಿದ ಸಮನ್ವಯಾಧಿಕಾರಿ ಭೂತಣ್ಣ, ಈ ಹಿಂದೆ ಆಶ್ರಯ ಸಮಿತಿ ಕೈಗೊಂಡ ನಿರ್ಣಯದಂತೆ ೧೭೫ ಫಲಾನುಭವಿಗಳು ಈಗಾಗಲೇ ೫ ಸಾವಿರ ವಂತಿಕೆಯನ್ನು ಪಾವತಿಸಿದ್ಧಾರೆ.
ಆದರೆ, ಇದುವರೆಗೂ ಅವರಿಗೆ ನಿವೇಶನ ನೀಡಲಾಗಿಲ್ಲ, ಸರ್ಕಾರ ಸೂಚನೆಯಂತೆ ಜಿ+೨ ಮನೆಗಳನ್ನು ವಿತರಿಸಲಾಗುವುದು. ಹೆಚ್ಚುವರಿಯಾಗಿ ೫ ಸಾವಿರ ಪಾವತಿಸುವಂತೆ ಈಗಾಗಲೇ ಎಲ್ಲರಿಗೂ ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ರಸಗೊಬ್ಬರ ಕೊರತೆ ನೀಗಿಸಲು ಅಗತ್ಯ ಕ್ರಮ
ನಗರಸಭೆಯ(Challakere) ಎಲ್ಲಾ 31 ವಾರ್ಡ್ಗಳಲ್ಲೂ ಪ್ರತಿನಿತ್ಯ ಸಾರ್ವಜನಿಕರು, ವೃದ್ದರು, ಮಕ್ಕಳು, ಮಹಿಳೆಯರು ಓಡಾಡುವ ಸಂದರ್ಭದಲ್ಲಿ ಎಲ್ಲಂದರಲ್ಲೆ ಬೀದಿನಾಯಿಗಳು ಬೊಗಳುತ್ತಾ ಜನರನ್ನು ಬೆನ್ನತ್ತಿ ಕಡಿಯಲು ಬರುತ್ತಿವೆ, ಸಾರ್ವಜನಿಕರು ಅವುಗಳಿಂದ ತಪ್ಪಿಸಿಕೊಂಡು ಹೋಗುವುದೇ ಕಷ್ಟವಾಗಿದೆ. ಈಗಾಗಲೇ ನಗರ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಿನಿಂದ ೪೦೦ಕ್ಕೂ ಹೆಚ್ಚು ಜನರು ಬೀದಿನಾಯಿಗಳ ಹಾವಳಿಯಿಂದ ಪಾರಾಗಿದ್ಧಾರೆ.
ಬೀದಿನಾಯಿಗಳ ಉಪಟಳ ಮೀತಿಮೀರಿದ್ದು ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಎಲ್ಲಾ ಸದಸ್ಯರು ಆಗ್ರಹಿಸಿದರು. ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು ಮಾಹಿತಿ ನೀಡಿ, ಬೀದಿನಾಯಿಗಳನ್ನು ಹಿಡಿದು ಸರ್ಕಾರದ ಸೂಚನೆಯಂತೆ ಸಂತಾನಹರಣ ಚುಚ್ಚುಮದ್ದು ನೀಡಬೇಕಿದೆ, ಪ್ರತ್ಯೇಕವಾಗಿ ಶೆಡ್‌ಗಳನ್ನು ನಿರ್ಮಿಸಬೇಕಿದೆ, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದು ವರದಿಯನಂತರ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಿ.ಶಿಲ್ಪಮುರುಳೀಧರ ಮಾತನಾಡಿ, ನಗರಸಭೆ ಆಡಳಿತ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ: ಚಿತ್ರದುರ್ಗ | ಜಿಲ್ಲೆಯಲ್ಲಿ ಪ್ರತಿ ವರ್ಷ ಬಾಲ್ಯ ವಿವಾಹ ಸಂಖ್ಯೆ ಹೆಚ್ಚಳ: ನ್ಯಾಯಾಧೀಶ ರೋಣ ವಾಸುದೇವ್
ನಗರದ ಪಾವಗಡ ಮುಖ್ಯರಸ್ತೆಯಿಂದ ನೆಹರೂ ವೃತ್ತದ ತನಕ ಸುಟ್ಟುಹೋದ ಇಜಿ ಕೇಬಲ್ ಬದಲಾಯಿಸಿ ಹೊಸಕೇಬಲ್ ಅಳವಡಿಸಲು ನಗರದಲ್ಲಿ ಐದು ಕಡೆ ಹೈಮಾಸ್ ವಿದ್ಯುತ್ ದೀಪಗಳಿಗೆ ಪ್ಯಾನಲ್ ಬಾಕ್ಸ್ ಅಳವಡಿಸುವುದು, ೩೧ ವಾರ್ಡ್ಗಳಿಗೆ ಎಲ್‌ಇಡಿ ಬೀದಿದೀಪ ಅಳವಡಿಸವ ಬಗ್ಗೆ ೪೮.೮೦ ಲಕ್ಷ ವೆಚ್ಚದ ಟೆಂಡರ್‌ಗೆ ಅನುಮೋದನೆ ನೀಡಲಾಗಿದೆ. ನಗರದ ಖಾಸಗಿ ಬಸ್ ನಿಲ್ದಾಣದ ಒಂದು ಮತ್ತು ಎರಡನೇ ಮಹಡಿಗೆಯಲ್ಲಿ ೪೫೦ ಲಕ್ಷ ವೆಚ್ಚದ ಟೆಂಡರನ್ನು ಅನುಮೋದಿಸಲಾಗಿದೆ.
ಕ್ಷೇತ್ರ ಶಾಸಕ ಟಿ.ರಘುಮೂರ್ತಿ(Challakere) ಮಾರ್ಗದರ್ಶನದಲ್ಲಿ ನಗರಸಭೆ ಅಭಿವೃದ್ದಿ ವಿಚಾರದಲ್ಲಿ ಹಿನ್ನಡೆ ಸಾಧಿಸಿಲ್ಲ, ಸಾರ್ವಜನಿಕರ ಹಲವಾರು ಸಮಸ್ಯೆಗಳ ಬಗ್ಗೆ ಸಕರಾತ್ಮಕವಾಗಿ ಚರ್ಚೆ ನಡೆಸಲಾಗಿದೆ.
ನಗರದಲ್ಲಿ ಹೆಚ್ಚುವರಿಯಾಗಿ ಎಸ್.ಸೂರನಾಯಕ, ಡಾ.ರಾಜ್‌ಕುಮಾರ್, ಕೆಂಪೇಗೌಡ ವೃತ್ತಗಳ ನಿರ್ಮಾಣಕ್ಕೆ ಬೇಡಿಕೆ ಬಂದಿದ್ದು, ಹಂತ, ಹಂತವಾಗಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಇದನ್ನೂ ಓದಿ: ನಗರಸಭೆ ನೂತನ ಉಪಾಧ್ಯಕ್ಷೆಯಾಗಿ ಶಕೀಲ ಬಾನು ಆಯ್ಕೆ
ಸಭೆಯಲ್ಲಿ ಉಪಾಧ್ಯಕ್ಷೆ ಸಿ.ಕವಿತಾಬೋರಯ್ಯ, ಸ್ಥಾಯಿಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಕೆ.ವೀರಭದ್ರಪ್ಪ, ಆರ್.ರುದ್ರನಾಯಕ, ಆರ್.ಮಂಜುಳಾ, ಜೈತುಂಬಿ, ಸುಮಭರಮಣ್ಣ, ಸುಜಾತಪಾಲಯ್ಯ, ಕವಿತಾವೀರೇಶ್, ಜಯಲಕ್ಷ್ಮಿ, ಸಾವಿತ್ರಮ್ಮ, ಎಂ.ಜೆ.ರಾಘವೇಂದ್ರ, ವೈ.ಪ್ರಕಾಶ್, ಹೊಯ್ಸಳಗೋವಿಂದ, ವಿರೂಪಾಕ್ಷಿ, ಚಳ್ಳಕೆರೆಯಪ್ಪ, ಎಚ್.ಪ್ರಶಾಂತ್, ನಾಮನಿರ್ದೇಶಕ ಸದಸ್ಯರಾದ ಆರ್.ವೀರಭದ್ರಪ್ಪ, ನಟರಾಜ್, ಅನ್ವರ್‌ಮಾಸ್ಟರ್, ನೇತಾಜಿಪ್ರಸನ್ನ, ಬೈನಾಕಲಪಾಪಣ್ಣ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252