Chitradurga News | Nammajana.com | 01-08-2025
ನಮ್ಮಜನ.ಕಾಂ, ಚಿತ್ರದುರ್ಗ: ಐತಿಹಾಸಿಕ(Hindu Maha Ganapati) ಕೊಟೆನಾಡು ಚಿತ್ರದುರ್ಗದ 18ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವ ಆಚರಣೆಯ ಪೆಂಡಾಲ್ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ, ಧ್ವಜಸ್ತಂಭ, ಗೋಮಾತೆ ಪೂಜೆ ಶಾಸ್ರೋಕ್ತವಾಗಿ ಜರುಗಿತು.
ಇದನ್ನೂ ಓದಿ: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ

ಈ ಸಂದರ್ಭದಲ್ಲಿ ನಾನಾ ಮಠಾಧಿ ಶರು, ಜನ ಪ್ರತಿನಿಧಿಗಳು, ಗಣ್ಯರು, ಮಹೋತ್ಸವ ಸಮಿತಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಪದಾಧಿ ಕಾರಿಗಳ, ಕಾರ್ಯಕರ್ತರು, ಭಕ್ತರು ಸಾಕ್ಷೀಕರಿಸಿದರು.
18ನೇ ವರ್ಷದ ಉತ್ಸವವಾಗಿದ್ದು, ಆ.27ರಂದು ಹಿಂದೂ ಮಹಾಗಣಪತಿ ಮೂರ್ತಿಯನ್ನು ಸಂಪ್ರದಾಯದಂತೆ ಶಾಸ್ತೋಕ್ತವಾಗಿ ಪ್ರತಿಷ್ಠಾಪಿಸಿ, ಅಂದಿನಿಂದ ಸೆ.13ರವರೆಗೆ ಪೂಜಾ ಕೈಂಕರ್ಯಗಳು ನಡೆಯಲಿವೆ. ಒಟ್ಟು 18 ದಿನವೂ ವೈವಿಧ್ಯಮಯವಾಗಿ ಆಚರಿಸಲು ಸಮಿತಿ ಈಗಿನಿಂದಲೇ ಸಿದ್ಧತೆಗೆ ಸಮಿತಿ ಮುಂದಾಗಿದೆ.
ಉತ್ಸವ ವರ್ಷದಿಂದ ವರ್ಷಕ್ಕೆ(Hindu Maha Ganapati) ಮೆರುಗು ಪಡೆಯುತ್ತಿದ್ದು, ದೇಶದ ಗಮನ ಸೆಳೆಯುತ್ತಿದೆ. ಹೆಚ್ಚಿನ ಭಕ್ತಸಮೂಹ ಆಕರ್ಷಿಸುವಲ್ಲಿ ಸಫಲವಾಗಿದೆ. ಲಕ್ಷಾಂತರ ಜನಸಾಗರದ ನಡುವೆ ಶೋಭಾಯಾತ್ರೆ ಸಾಗಲಿದೆ. ಇದು ಚಿತ್ರದುರ್ಗದ ಧಾರ್ಮಿಕ ಹಬ್ಬವಾಗಿ ಹೊರಹೊಮ್ಮಿದೆ ಎಂದು ಮಠಾಧೀಶರು ಬಣ್ಣಿಸಿದರು.
ಇದನ್ನೂ ಓದಿ: ಎಚ್.ಆಂಜನೇಯಗೆ ನಿಂದನೆ : ಮಾದಿಗ ಜಾಗೃತಿ ವೇದಿಕೆ ಖಂಡನೆ
ಸದ್ಗುರು ಕಬೀರಾನಂದ ಆಶ್ರಮದ ಶ್ರೀಶಿವಲಿಂಗಾನಂದ ಸ್ವಾಮೀಜಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ 2. ಎಚ್.ತಿಪ್ಪಾರೆಡ್ಡಿ, ১.৪. ಬಸವರಾಜನ್, ಹಿಂದೂ ಪರಿಷತ್‌ನ ಮಹಾಗಣಪತಿ ಮಹೋತ್ಸವ ಸಮಿತಿ ಅಧ್ಯಕ್ಷ ಶರಣ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ವಿಶ್ವ ಹಿಂದೂ ಷಡಾಕ್ಷರಪ್ಪ ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252