Chitradurga news | nammajana.com | 02-08-2025
ನಮ್ಮಜನ.ಕಾಂ, ಹೊಸದುರ್ಗ: ಸರ್ಕಾರಿ(FIR) ಜಾಗವನ್ನು ಅನಧಿಕೃತವಾಗಿ ಕಬಳಿಕೆ ಮಾಡಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆಗಿದ್ದರೂ ಮತ್ತೆ ಅದೇ ಜಾಗದಲ್ಲಿ ತೆಂಗಿನ ಸಸಿ ನೆಡುವ ಕೆಲಸ ಮಾಡಿಸಲಾಗುತ್ತಿದ್ದು, ಇದನ್ನು ಗಮನಿಸಿದರೆ ತಾಲೂಕಿನಲ್ಲಿ ಕಾನೂನಿಗೆ ಬೆಲೆಯಿಲ್ಲವೇ ಅನ್ನುವ ಅನುಮಾನ ಮೂಡಿತ್ತಿದೆ ಎಂದು ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೊಳಲ್ಕೆರೆ: ಇಂದಿನಿಂದ 3 ದಿನ ವಿದ್ಯುತ್ ವ್ಯತ್ಯಯ

ಈ ಕುರಿತು ಸಸಿ ನೆಡುತ್ತಿರುವ ಪೋಟೋ ಸಮೇತ ಪತ್ರಿಕೆಗೆ ಹೇಳಿಕೆ ನೀಡಿರುವ ಅವರು, ಜು.31ರಂದು ಈ ಭಾಗದ ರಾಜಸ್ವ ನೀ ನೀರೀಕ್ಷರು ಸ್ಥಳ ಪರಿಶೀಲನೆ ಮಾಡಿ ಸ್ವಚ್ಛ ಗೊಳಿಸಲಾಗಿರುವ ಜಾಗ ಗೊರವಿನಕಲ್ಲುರಿ ಸರ್ವೇ ನಂಬರ್ 86ರಲ್ಲಿ ಬರುತ್ತಿದ್ದು ಇದೆ ಸರ್ಕಾರಿ ಜಾಗವಾಗಿದ್ದು ಇಲ್ಲಿ ಅತಿಕ್ರಮವಾಗಿ ಕೆಲಸ
ಮಾಡಿರುವವ ವಿರುದ್ಧ ಕ್ರಮ(FIR) ಕೈಗೊಳ್ಳುವಂತೆ ರಾಜಸ್ವ ನೀರೀಕ್ಷಕ ಹೊಸದುರ್ಗ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಷ್ಟಾದರೂಮತ್ತೆ ಶುಕ್ರವಾರಅದೇಜಾಗದಲ್ಲಿತೆಂಗಿನ ಸಸಿ ನೆಡುತ್ತಿದ್ದು ಇದನ್ನು ಪ್ರಶ್ನಿಸಿದವರಿಗೆ ಕ್ಯಾರೆ ಎನ್ನದೆ ಉದ್ದಟನತನ ತೋರಿಸಿ ರಾಜರೋಷವಾಗಿ ಸಸಿ ನೆಡುತ್ತಿರುವುದನ್ನು ಗಮನಿಸಿದರೆ ಇವರಿಗೆ ಪೊಲೀಸರ ಬಗ್ಗೆ ಆಥವಾ ಕಾನೂನು ಬಗ್ಗೆಯಾಗಲೀ ಭಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹಿಂಬಾಕಿ ನೀಡದಿದ್ದರೆ ಆ.5 ರಿಂದ KSRTC ಬಸ್ ಓಡಾಟ ಬಂದ್
ಈ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ(FIR) ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ತಹಸೀಲ್ದಾರ್ ಗಮನ ಹರಿಸಿದ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿದವರೆ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252