Chitradurga news | nammajana.com | 12-08-2025
ನಮ್ಮಜನ.ಕಾಂ,ಚಳ್ಳಕೆರೆ: ತಾಲ್ಲೂಕಿನ(Protest) ಪರಶುರಾಂಪುರ ಹೋಬಳಿಯ ಕೋನಿಗರಹಳ್ಳಿ ಮತ್ತು ದೊಡ್ಡ ಚೆಲ್ಲೂರು ಗ್ರಾಮಗಳ ಶೋಷಿತ, ದಲಿತ ಸಮುದಾಯದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಶೋಷಿತ ದಲಿತ ಕುಟುಂಬದ ಎಲ್ಲಾ ಸದಸ್ಯರು ಪ್ರತಿಭಟನಾರ್ತವಾಗಿ ತಾಲ್ಲೂಕು ಕಚೇರಿ ಕಾಂಫೌಂಡ್ ಮುಂಭಾಗದ ಪುಟ್‌ಬಾತ್‌ನಲ್ಲಿ ಸೌದೆ ಒಲೆ ನಿರ್ಮಿಸಿ ಅಡುಗೆ ತಯಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ಧಾರೆ.
ಇದನ್ನೂ ಓದಿ: ಗೌರಸಮುದ್ರ ಮಾರಮ್ಮದೇವಿ ಹುಂಡಿಯಲ್ಲಿ ಇದ್ದಿದ್ದು ಎಷ್ಟು ಲಕ್ಷ?

ಕಳೆದ ಹತ್ತು ವರ್ಷಗಳ ಹಿಂದೆ ಗ್ರಾಮದ ಸವರ್ಣಿಯರ ಕುಟುಂಬದಿಂದ ದೌರ್ಜನ್ಯಕ್ಕೀಡಾಡ ದಲಿತ ಕುಟುಂಬಗಳಿಗೆ ಸೂಕ್ತ ನೆರವು ದೊರೆಯಲಿಲ್ಲ. ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಕೆಲವು ನಿರ್ಧಿಷ್ಟ ಕುಟುಂಬಗಳಿಗೆ ಮಾತ್ರ ಸೌಲಭ್ಯ ನೀಡಿ, ಅವಲಂಬಿತ ಕುಟುಂಬಗಳನ್ನು ಕೈಬಿಡಲಾಯಿತು. ಇದರಿಂದ ಅಸಮದಾನಗೊಂಡ ದಲಿತ ಕುಟುಂಬಗಳು ಟಿ.ಡಿ.ರಾಜಗಿರಿ ನೇತೃತ್ವದಲ್ಲಿ ಅನಿರ್ಧಿಷ್ಟಕಾಲ ಧರಣಿ ಸತ್ಯಾಗ್ರಹವನ್ನು ಕೈಗೊಂಡಿಗೆ. ಬೇಡಿಕೆ ಈಡೇರುವತನಕ ತೆರಳುವುದಿಲ್ಲವೆಂಬ ಪ್ರತಿಜ್ಞೆ ಕೈಗೊಂಡಿದ್ಧಾರೆ.
ಸೋಮವಾರ ಶೋಷಿತ ದಲಿತ ಕುಟುಂಬದ ಎಲ್ಲಾ ಸದಸ್ಯರು ಪ್ರತಿಭಟನಾರ್ತವಾಗಿ ತಾಲ್ಲೂಕು ಕಚೇರಿ ಕಾಂಫೌಂಡ್ ಮುಂಭಾಗದ ಪುಟ್‌ಬಾತ್‌ನಲ್ಲಿ ಸೌದೆ ಒಲೆ ನಿರ್ಮಿಸಿ ಅಡುಗೆ ತಯಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ಧಾರೆ. ಪುಟ್‌ಬಾತ್ ಉದ್ದಕ್ಕೂ ಕಲ್ಲು, ಗುಂಡು ಇಟ್ಟು ಅದರ ಮೇಲೆ ಪಾತ್ರೆಇಟ್ಟು ಅಡುಗೆ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ.
ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
ಶೋಷಿತ ಸಮುದಾಯ ಈ ವಿನೂತನ(Protest) ಪ್ರತಿಭಟನೆಯಿಂದ ತಾಲ್ಲೂಕು ಆಡಳಿತ ಇಕ್ಕಟ್ಟಿಗೆ ಒಳಗಾಗಿದೆ. ಈಗಾಗಲೇ ಉಪವಿಭಾಗಾಧಿಕಾರಿ ಮೆಹಬೂಬ್‌ಜಿಲಾನಿ, ತಹಶೀಲ್ಧಾರ್ ರೇಹಾನ್‌ಪಾಷ ಪ್ರತಿಭಟನಕಾರರೊಂದಿಗೆ ಮಾತುಕಥೆ ನಡೆಸಿದರೂ ಪ್ರಯೋಜನವಾಗಿಲ್ಲ.
