Chitradurga news|Nammajana.com|13-8-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಜಾನುಕೊಂಡ ಹತ್ತಿರದಲ್ಲಿ ರವಿಕುಮಾರ್ ಕೊಲೆ ಮಾಡಿ ಗುರುತು ಪತ್ತೆಯಾಗದಂತೆ ಬೆಡ್‌ಶೀಟ್‌ನಲ್ಲಿ ಸುತ್ತಿ ಬಿಸಾಡಿ ಬರಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು (Chitradurga crime) ಮಾಡಿಕೊಂಡಿರುವ ಗ್ರಾಮಾಂತರ ಠಾಣೆಯ ಪೊಲೀಸರು ಕೊಲೆಯ ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ಮೂವರ ಬಂಧನ
ರವಿಕುಮಾರ್ ಪತ್ನಿ ಸುನಿತಾ, ಪುತ್ರ ವಿಷ್ಣು ಹಾಗೂ ಬೆಂಗಳೂರು ಮೂಲದ ಟಚ್ ಗಣೇಶ್ ಬಂಧನವಾಗಿದೆ. ರವಿಕುಮಾರ್ ಕುಟುಂಬಕ್ಕೆ ಸಾಲ ಕೊಟ್ಟು ಪರಿಚಿತನಾಗಿದ್ದ ಗಣೇಶ್ ಈ (Chitradurga crime) ಪ್ರಕರಣದ A1 ಆರೋಪಿಯಾಗಿದ್ದಾನೆ.

ಕೊಲೆ ಮಾಡಿ ಸುತ್ತಿದ ಬೆಡ್‌ಶೀಟ್ ಮಂಗಳ ಮುಖಿ
ರವಿಕುಮಾರ್ ಕೊಲೆ ನಂತರ ಆತನ ಮೃತ ದೇಹವನ್ನು ಬೆಡ್‌ಶೀಟ್ ನಲ್ಲಿ ಸುತ್ತಿ ಎಸೆಯಲಾಗಿತ್ತು. ಈ ಬೆಡ್‌ಶೀಟ್ ಮಂಗಳ ಮುಖಿ ಒಬ್ಬರಿಗೆ ಸೇರಿದ್ದು, ಇದರ ಆಧಾರದಲ್ಲಿ ಟಚ್ ಗಣೇಶ್ ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ: V V Sagar Dam Level | ವಾಣಿವಿಲಾಸ ಸಾಗರ ಇಂದಿನ ನೀರಿನ ಮಟ್ಟ
ಜುಲೈ 20 ರಂದು ಚಿತ್ರದುರ್ಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಪೊಲೀಸರು ತಿಂಗಳು ಕಳೆಯು (Chitradurga crime) ವುದರಲ್ಲಿ ಪತ್ತೆ ಮಾಡಿವಲ್ಲಿ ಯಶಸ್ವಿಯಾಗಿದ್ದಾರೆ.
