Chitradurga News | Nammajana.com | 13-08-2025
ನಮ್ಮಜನ.ಕಾಂ, ಚಳ್ಳಕೆರೆ: ಕಳೆದ (DC venkatesh) 10 ದಿನಗಳಿಂದ ತಾಲ್ಲೂಕಿನ ದೊಡ್ಡಬೀರನಹಳ್ಳಿ ಮತ್ತು ಕೋನಿಗರಹಳ್ಳಿ ಗ್ರಾಮಗಳ ಶೋಷಿತ ಸಮುದಾಯಗಳು ತಾಲ್ಲೂಕು ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಹಂತ, ಹಂತವಾಗಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಇದನ್ನೂ ಓದಿ: ಹಿರಿಯ ನಾಗರಿಕರ ನಿರ್ಲಕ್ಷ್ಯ ಸಲ್ಲದು : ಜಿಲ್ಲಾ ನ್ಯಾಯಾಧೀಶ ರೋಣ ವಾಸುದೇವ್
ಹಂತ ಹಂತವಾಗಿ ಬೇಡಿಕೆ ಹಿಡೇರಿಕೆಗೆ ಬದ್ದ
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ನಿಮ್ಮೆಲ್ಲಾ ಬೇಡಿಕೆಗಳ ಬಗ್ಗೆ ಸಂಪೂರ್ಣ ವರದಿ ಪಡೆದಿರುವೆ, ಹಲವಾರು ಬೇಡಿಕೆಗಳು ನಮ್ಮ ಹಂತದಲ್ಲೇ ಈಡೇರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಕರೆದು ಅವರೊಂದಿಗೆ ಚರ್ಚಿಸಿ ಸೌಲಭ್ಯಗಳನ್ನು ಹಂತ, ಹಂತವಾಗಿ ವಿತರಿಸಲಾಗುವುದು. ಯಾವುದೇ ಕಾರಣಕ್ಕೂ ನಿಮಗೆ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯ ನೀಡುವಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

ಕನಿಷ್ಠ ಮೂಲಭೂತ ಸೌಲಭ್ಯಕ್ಕೆ ರಾಜಗಿರಿ ಆಗ್ರಹ
ದಲಿತ ಸಂಘರ್ಷಸಮಿತಿ ರಾಜ್ಯಾಧ್ಯಕ್ಷ ಟಿ.ಡಿ.ರಾಜಗಿರಿ, ಕೋನಿಗರಹಳ್ಳಿ ಮತ್ತು ದೊಡ್ಡ ಬೀರನಹಳ್ಳಿ ಗ್ರಾಮಗಳಲ್ಲಿ ದೌರ್ಜನ್ಯಕ್ಕೀಡಾದ ಕುಟುಂಬಗಳಿಗೆ ಕನಿಷ್ಠ ಪಕ್ಷ ಮೂಲಭೂತ ಸೌಕರ್ಯಗಳನ್ನು ತಾಲ್ಲೂಕು ಆಡಳಿತ ವಹಿಸಿಲ್ಲ, ಹಲವಾರು ಬಾರಿ ಮನವಿ ಮಾಡಿದರೂ ಸೂಕ್ತ ಸ್ಪಂದನೆ ಇಲ್ಲ.
ನಿವೇಶನ, ಜಮೀನು, ಪ್ರತ್ಯೇಕ ನ್ಯಾಯಬೆಲೆ(DC venkatesh) ಅಂಗಡಿ, ಗಂಗಾಕಲ್ಯಾಣವೂ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳಲ್ಲಿ ದೌರ್ಜನ್ಯಕೀಡಾದ ಕುಟುಂಬಗಳಿಗೆ ಮೊದಲ ಪ್ರಾಧ್ಯಾನ್ಯತೆ ನೀಡಿ ಸೌಲಭ್ಯಗಳನ್ನು ಕೂಡಲೇ ವಿತರಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದರು.
ಇದನ್ನೂ ಓದಿ: ವಾಣಿವಿಲಾಸ ಸಾಗರ ಇಂದಿನ ನೀರಿನ ಮಟ್ಟ
ಶೋಷಿತ ಕುಟುಂಬಗಳಿಗೆ ಸರ್ಕಾರದಿಂದ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಹಂತ, ಹಂತವಾಗಿ ನೀಡುವ ಭರವಸೆ ನೀಡಿದ್ಧಾರೆ. ನಮ್ಮೆಲ್ಲಾ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.
ಅವರ ಭೇಟಿ ನೀಡಿ ನಮಗೂ ಸಹ(DC venkatesh) ವಿಶ್ವಾಸ ಬಂದಿದೆ. ಅವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಮುಷ್ಕರವನ್ನು ಇಂದಿನಿಂದಲೇ ನಿಮ್ಮೆಲ್ಲರ ಒಪ್ಪಿಗೆ ಪಡೆದು ಹಿಂಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮುದಾಯ ಪರವಾಗಿ ಯಾವುದೇ ಹೋರಾಟ ನಡೆದರೂ ತಾವೆಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಬಂಗಾರದ ಬೆಲೆಯಲ್ಲಿ ಇಳಿಕೆ
ತಹಶೀಲ್ದಾರ್ ರೇಹಾನ್‌ಪಾಷ, ಸಮಾಜ ಕಲ್ಯಾಣಾಧಿಕಾರಿ ದೇವ್ಲಾನಾಯ್ಕ, ಪೌರಾಯುಕ್ತ ಜಗರೆಡ್ಡಿ, ಎಇಇ ಕೆ.ವಿನಯ್, ಪರಿಸರ ಇಂಜಿನಿಯರ್ ನರೇಂದ್ರಬಾಬು, ಕಂದಾಯಾಧಿಕಾರಿ ತಿಪ್ಫೇಸ್ವಾಮಿ, ರಾಜೇಶ್, ಗ್ರಾಮಲೆಕ್ಕಾಧಿಕಾರಿ ಹಿರಿಯಪ್ಪ, ಪ್ರಕಾಶ್, ಪ್ರತಿಭಟನಕಾರರಾದ ತಿಮ್ಮಪ್ಪ, ಹರೀಶ್, ತಿಪ್ಫೇಸ್ವಾಮಿ, ರತ್ನಮ್ಮ, ಪವಿತ್ರಮ್ಮ, ಪಾರ್ವತಮ್ಮ ಮುಂತಾದವರು ಉಪಸ್ಥಿತರಿದ್ದರು.
