Chitradurga News | Nammajana.com | 13-08-2025
ನಮ್ಮಜನ.ಕಾಂ,ಚಳ್ಳಕೆರೆ: ತಾಲ್ಲೂಕಿನ ಯಲಗಟ್ಟೆ (Peeder channel broke)ಗೊಲ್ಲರಹಟ್ಟಿ ಬಳಿ ರಾಣೀಕೆರೆ ಪೀಡರ್ ಚಾನಲ್ ಒಡೆದು ಹೋದ ಪರಿಣಾಮವಾಗಿ ನೀರು ಜಮೀನುಗಳಿಗೆ ನುಗ್ಗಿ ಅಪಾರವಾದ ಬೆಳೆ ಹಾನಿಯಾಗಿದೆ.
ಇದನ್ನೂ ಓದಿ: ಧರಣಿ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ : ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಭರವಸೆ

ಹರಿಯುವ ನೀರನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆಯದ ಕಾರಣ, ನೀರು ಆ ಭಾಗದ ಎಲ್ಲಾ ಜಮೀನುಗಳಿಗೆ ವ್ಯಾಪಿಸಿದೆ.
ಸಂಕಷ್ಟಕ್ಕೊಳವಾದ ರೈತರಾದ ಚಂದ್ರಣ್ಣ, ಸಿರಿಯಣ್ಣ, ಚಿಕ್ಕಣ್ಣ, ರಾಮಕೃಷ್ಣಪ್ಪ, ಓಬಳಮ್ಮ ಮುಂತಾದವರು ಪತ್ರಿಕೆಯೊಂದಿಗೆ ಮಾತನಾಡಿ, ಜಮೀನಿನಲ್ಲಿ ಮೆಕ್ಕೆಜೋಳ, ಈರುಳ್ಳಿ, ಭತ್ತ, ಶೇಂಗಾ, ರೇಷ್ಮೆ ಮುಂತಾದ ಬೆಳೆಗಳಿದ್ದು ಎಲ್ಲಾ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿ ಲಕ್ಷಾಂತರ ರೂ ನಷ್ಟವಾಗಿದೆ.
ಇದನ್ನೂ ಓದಿ: ಹಿರಿಯ ನಾಗರಿಕರ ನಿರ್ಲಕ್ಷ್ಯ ಸಲ್ಲದು : ಜಿಲ್ಲಾ ನ್ಯಾಯಾಧೀಶ ರೋಣ ವಾಸುದೇವ್
ಈ ಹಿಂದೆ ಬಿರುಕು ಬಿಟ್ಟ ಫೀಡರ್(Peeder channel broke) ಚಾನಲ್ ರಿಪೇರಿಗೆ ಮನವಿ ಮಾಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಲಕ್ಷಾಂತರ ರೂಪಾಯಿ ಬೆಳೆಯನ್ನು ಕಳೆದುಕೊಂಡು ಕಂಗಾಲಾಗಿದ್ದೇವೆಂದು ನೊಂದು ನುಡಿದ್ದಾರೆ.
