Chitradurga news|Nammajana.com| 14-8-2025
ನಮ್ಮಜನ, ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ,(Govt School) ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಗೌರಸಮುದ್ರ ವ್ಯಾಪ್ತಿಗೆ ಸೇರುವ ಬಂಡೆತಿಮ್ಲಾಪುರ ಗ್ರಾಮ ದೊಡ್ಡನಾಗಯ್ಯನ ಹಟ್ಟಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ರಸ್ತೆಯಲ್ಲಿ ಮಳೆಯ ನೀರು ನಿಂತಿರುವ ಕಾರಣದಿಂದ ಮಕ್ಕಳು ಶಾಲೆಗೆ ತೆರಳಲು ಕಷ್ಟವಾಗುತ್ತಿದೆ.
ಪ್ರಾಥಮಿಕ ಶಾಲೆಯ ಕಟ್ಟಡ ಸಹ ಅಳಿವಿನ ಹಂಚಿನಲ್ಲಿದ್ದು ಮಳೆ ಬಂದರೆ ಮಳೆಯ ನೀರು ಶಾಲೆಯ ಒಳಗಡೆ ಬೀಳುವ (Govt School) ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ.

ಇದನ್ನೂ ಓದಿ: Nagamohan Das Report ವರದಿ ಅನ್ವಯ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಿ | ಸಿಎಂ, ಡಿಸಿಎಂ ಬಳಿ ಮಾದಾರ ಚನ್ನಯ್ಯ ಶ್ರೀ ನಿಯೋಗ ಮನವಿ
ಮಕ್ಕಳಿಗೆ ಶೌಚಾಲಯಗಳ ವ್ಯವಸ್ಥೆ ಇಲ್ಲದ ಕಾರಣ ಶಿಕ್ಷಕರು ಹಾಗು ಮಕ್ಕಳಿಗೆ ತೊಂದರೆ ಆಗುತ್ತಿದೆ ಶಾಲೆಯ SDMC ಅಧ್ಯಕ್ಷರು ಚಿತ್ತಯ್ಯ ಹಾಗೂ ಊರಿನ ಗ್ರಾಮಸ್ಥರು ವೀಕ್ಷಿಸಿದ್ದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವ ರೀತಿ ಕ್ರಮ (Govt School) ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದ್ದು ಒಟ್ಟಿನಲ್ಲಿ ಜೀವ ಬಿಗಿ ಹಿಡಿದು ಮಕ್ಕಳು ಪಾಠ ಕೇಳುವ ವಾತವರಣ ನಿರ್ಮಾಣವಾಗಿದೆ.
