Chitradurga news|Nammajana.com|14-8-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿ ನಂತರ ಜಾಮೀನು ಮೇಲೆ ಹೊರಗಡೆ ಬಂದಿದ್ದು ನಟ ದರ್ಶನ್ ಅವರಿಗೆ ಈಗ ಮತ್ತೆ ಸಂಕಷ್ಟ (Darshan Arrest) ಎದುರಾಗಿದ್ದು ಸುಪ್ರೀಂ ಕೋರ್ಟ್ ಜಮೀನು ರದ್ದು ಮಾಡಿದ್ದು ದರ್ಶನ್ ಸೇರಿ ಏಳು ಜನರಿಗೆ ಮತ್ತೆ ಬಂಧನ ಮಾಡಲಾಗುತ್ತಿದೆ.
ದರ್ಶನ್ ಕೇಸ್ ನಲ್ಲಿ ಸಾವು ಅನುಭವಿಸಿರುವ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ಮಾತನಾಡಿದ್ದು ಈ ದಿನ ದರ್ಶನ್ ಅವರ ಬೇಲ್ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ರದ್ದಾಗಿದ್ದು ಅರೆಸ್ಟ್ ಮಾಡಲು ಆದೇಶ ಆಗಿದೆ.

ನ್ಯಾಯಾಂಗದ ಮೇಲೆ ನಂಬಿಕೆ ಹೆಚ್ಚಾಗಿದೆ ಹೈಕೋರ್ಟ್ ಬೇಲ್ ಕೊಟ್ಟಾಗ ಆತಂಕ ಆಗಿತ್ತು ಆದರೆ ಸರ್ಕಾರ ಸುಪ್ರೀಂ ಕೋರ್ಟ್ ಅಪೀಲ್ ಮಾಡಿದ್ದರು.ಯಾವುದೇ ಅಪರಾಧಿ ತಪ್ಪಿಸಿಕೊಳ್ಳಲು (Darshan Arrest) ಅಸಾಧ್ಯ ಎಂದು ಈ ತೀರ್ಪು ಮೂಲಕ ತಿಳಿದಿದೆ.
ಕಾನೂನು ಮೇಲೆ ಹೆಚ್ಚು ನಂಬಿಕೆ ಇದೆ
ಸರ್ಕಾರ ಮತ್ತು ನ್ಯಾಯಾಂಗದ ಬಗ್ಗೆ ಹೆಚ್ಚು ನಂಬಿಕೆ ಹುಟ್ಟಿದೆಈ ಕೇಸ್ ನಲ್ಲಿ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇದೆ. ನೊಂದ ಸೊಸೆ ಸಹನ ಅವರಿಗೆ ಉದ್ಯೋಗ ನೀಡಬೇಕು.ಕೆಳ ಹಂತದ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆ ಆಗಬೇಕು, ಯಾರೇ ದೊಡ್ಡವರು ಆದರೂ ಕಾನೂನು ಒಂದೇ ಎಂದು ಸಾಬೀತು ಆಗಿದೆ.
ಇದನ್ನೂ ಓದಿ: Govt School | ಈ ಊರಲ್ಲಿ ಮಳೆಗೆ ಸೋರುತ್ತಿದೆ ಸರ್ಕಾರಿ ಶಾಲೆ, ಸೌಲಭ್ಯ ವಂಚಿತ ಮಕ್ಕಳ ಗೋಳು ಕೇಳೋರ್ಯಾರು?
ನಮಗೆ ಈ ಪ್ರಕರಣದಲ್ಲಿ ತುಂಬಾ ಆತಂಕ ಇತ್ತು, ಸುಪ್ರೀಂ ಕೋರ್ಟ್ ನಿರ್ಧಾರ ವಿಶ್ವಾಸ ಹೆಚ್ಚಿಸಿದೆ. ಕೋರ್ಟ್ ತೀರ್ಪು ಬರುವ ಮುಂಚೆ ಪೂಜೆ ಅಂತ ಅಲ್ಲ, ಮಾಮೂಲಿ ದಿನಾಲೂ ಪೂಜೆ ಸಲ್ಲಿಕೆ ಮಾಡುತ್ತೇವೆ.ಪೂಜೆ ಮಾಡುವ ವೇಳೆ ನನ್ನ ಪತ್ನಿ ಬೇಲ್ ವಜಾ ಆಗಿದೆ ಎಂದರು.
ನಮ್ಮ ಮನೆಯ ಪೂಜೆ ಸಲ್ಲಿಕೆ ವೇಳೆ ಅರ್ಜಿ ವಜಾ ಆಯ್ತು ಗುರುಗಳು, ದೇವರ (Darshan Arrest) ಆಶಿರ್ವಾದದಿಂದ ಬೇಲ್ ಅರ್ಜಿ ವಜಾ ಆಗಿದೆ ಹಾಗೂ ನಮಗೆ ಬೆಂಬಲ ನೀಡುತ್ತಿರುವ ಎಲ್ಲಾ ಮಾಧ್ಯಮಗಳಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
