Chitradurga News | Nammajana.com | 17-08-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಚಿತ್ರದುರ್ಗ(seized vehicles) ಕೋಟೆ ಪೊಲೀಸ್ ಠಾಣೆ ವತಿಯಿಂದ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ವಾರಸುದಾರರು ಇಲ್ಲದ 11 ಮೋಟಾರು ಬೈಕುಗಳ ಹರಾಜಿಗೆ ಜೆ.ಎಂ.ಎಫ್.ಸಿ ಹಿರಿಯ ಸಿವಿಲ್ ನ್ಯಾಯಾಲಯ ಅನುಮತಿ ನೀಡಿದೆ.

ಇದನ್ನೂ ಓದಿ: ನಾನು ಓದಿದ ಶಾಲೆಗೆ ನಾನೇ ಶಾಸಕನಾಗಿ ನೂತನ ಕಟ್ಟಡ ಕಟ್ಟಿಸಿದ್ದು ನನ್ನ ಸೌಭಾಗ್ಯ: ಟಿ.ರಘುಮೂರ್ತಿ
ಈ ಹಿನ್ನಲೆಯಲ್ಲಿ ಆಗಸ್ಟ್ 23 ರಂದು ಬೆಳಿಗ್ಗೆ 11 ಗಂಟೆಗೆ ಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ಹರಾಜು ನಡೆಯಲಿದ್ದು, ಆಸಕ್ತರು ಹರಾಜಿನಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕೋಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194-222933 ಹಾಗೂ ಮೊಬೈಲ್ ಸಂಖ್ಯೆ 9480803145 ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.
