Chitradurga News | Nammajana.com | 18-08-2025
ನಮ್ಮಜನ ನ್ಯೂಸ್ ಕಾಂ,ಹಿರಿಯೂರು: ನಗರದಿಂದ(Road damaged) ಧರ್ಮಪುರ ಹಾಗೂ ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಬ್ಬುರು ಕ್ರಾಸ್ ನಲ್ಲಿ ಹತ್ತಾರು ಗುಂಡಿ ಬಿದ್ದಿದ್ದು ವಾಹನ ಸವಾರರು ಹರ ಸಾಹಸ ಪಟ್ಟು ಗುಂಡಿ ದಾಟಿ ಹೋಗಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಕಸವನ ಹಳ್ಳಿ ರಮೇಶ್ ಹಾಗೂ ರೈತ ಸಂಘದ ಯುವ ಘಟಕದ ಅಧ್ಯಕ್ಷ ಚೇತನ್ ಯಳನಾಡು ಆರೋಪಿಸಿದ್ದಾರೆ.
ಇದನ್ನೂ ಓದಿ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮಠಕ್ಕೆ ಸಚಿವ ಡಿ.ಸುಧಾಕರ್ ಭೇಟಿ

ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಟ್ಟೂರು ಕೆರೆ ಕೋಡಿ ಕ್ರಾಸ್ ನಲ್ಲಿ ಒಂದು ಗುಂಡಿಯನ್ನು ತಪ್ಪಿಸಲು ಹೋದರೆ ಮತ್ತೊಂದು ಗುಂಡಿಗೆ ಬೀಳುವ ಅಪಾಯ ವಿದೆ. ಇಲ್ಲಿ ಪ್ರತಿನಿತ್ಯ ದ್ವಿಚಕ್ರವಾಹನ, ಕಾರು, ಬಸ್ಸು, ಲಾರಿಗಳು ಸೇರಿದಂತೆ ಸಾವಿರಾರು ವಾಹನ ಸಂಚರಿಸುತ್ತವೆ.
ಹೊಸದಾಗಿ ನಿರ್ಮಾಣವಾಗಿರುವ ಬೀದರ್‌ಶ್ರೀರಂಗಪಟ್ಟಣ ರಸ್ತೆಗೆ ಅರ್ಧ ಕಿಮೀ ದೂರದಲ್ಲಿರುವ ಈ ರಸ್ತೆಯ ದುಃ ಸ್ಥಿತಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಕಣ್ಣಿಗೆ ಇನ್ನೂ ಬಿದ್ದಿಲ್ಲವಾ?
ಅಚ್ಚುಕಟ್ಟಾಗಿರುವ ನಗರದ ಪ್ರಧಾನ ರಸ್ತೆಗೆ ಪದೇ ಪದೇ ಡಾಂಬರು ಹಾಕುವ ಎಂಜಿನಿಯರ್‌ಗಳು ಧರ್ಮಪುರ ರಸ್ತೆಗೆ ಜಲ್ಲಿ ಹಾಕಲು ಸಹ ಬರುತ್ತಿಲ್ಲ.
ಗ್ರಾಮೀಣ ಭಾಗದ ರಸ್ತೆಗಳ ಬಗ್ಗೆ ತೀರಾ ಹಗುರ, ನಿಕೃಷ್ಟ, ನಿರಾಸಕ್ತಿ ತೋರಿಸಲಾಗುತ್ತಿದೆ. ಕನಿಷ್ಠ ಗುಂಡಿಗಳಿಗೆ ಜಲ್ಲಿ ಹಾಕಿ ಮುಚ್ಚಲಾರದಷ್ಟು ಬಡತನ ಪಿಡಬ್ ಲ್ಯೂಡಿಗೆ ಬಂದಿದೆಯೇ? ಅದೇ ಮುಖ್ಯಮಂತ್ರಿ ಬರುತ್ತಾರೆ, ಗಣ್ಯರು ಬರುತ್ತಾರೆ ಎಂದರೆ ಅನುದಾನ ಇಲ್ಲದಿ ದ್ದರೂ ಆ ರಸ್ತೆಗಳನ್ನು ರಾತ್ರೋರಾತ್ರಿ ಸರಿಪಡಿಸುತ್ತಾರೆ.
ಇದನ್ನೂ ಓದಿ: ಟೈಮ್ ವೆಸ್ಟ್ ಮಾಡಬೇಡಿ ಸ್ವಾಮಿ, ಒಳ ಮೀಸಲಾತಿ ಜಾರಿ ಮಾಡಿ: ಮೋಹನ್ ಆಗ್ರಹ
ನಮ್ಮ ತೆರಿಗೆಯಿಂದ(Road damage) ಅವರಿಗೆ ಉತ್ತಮ ರಸ್ತೆಗಳನ್ನು ಕೊಡುತ್ತಾರೆ, ಆದರೆ ತೆರಿಗೆ ಕಟ್ಟುವ ಸಾಮಾನ್ಯ ಜನರ ಓಡಾಟಕ್ಕೆ ರಸ್ತೆ ಸರಿಪಡಿಸಿಕೊಡಲು ಇವರಿಂದ ಆಗುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ರಸ್ತೆ ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252