Chitradurga news|Nammajana.com|19-8-2025
ನಮ್ಮಜನ.ಕಾಂ, ಹಿರಿಯೂರು: ತಾಲೂಕಿನ ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳಿಂದ ಬೋಧಕರಿಬ್ಬರು ಹಣ ವಸೂಲಿ (Case file) ಮಾಡುತ್ತಿದ್ದಾರೆಂದು ತರಬೇತಿ ಶಾಲೆಯ ಪ್ರಾಚಾರ್ಯ ಎನ್.ಶ್ರೀನಿವಾಸ್ ಐಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಐದನೇ ತುಕಡಿಯ ಎಡಿಐ ಆಗಿ ಬುನಾದಿ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಎಚ್.ಸಿಮಹಾಲಿಂಗಪ್ಪ. ಈ ಅವರು (Case file) ಸಿ-97 ಎಸಿಪಿ 20067 ಮಂಜುನಾಥ್ ಚಲವಾದಿ ಮತ್ತು ಇತರೆ ಪ್ರಶಿಕ್ಷಣಾರ್ಥಿಗಳಿಂದ 62,000 ರುಪಾಯಿ ಹಣವನ್ನು ಹಾಗೂ ರವಿನಾಯ್ಕ ಎಸ್.ಸಿ -470 ರವರು ಶಿವನಗೌಡ ಹಾಗೂ ಇತರೆ ಪ್ರಶಿಕ್ಷಣಾರ್ಥಿಗಳಿಂದ ಸರ್ಕಾರಿ ವಾಹನಕ್ಕೆ ಸೌಂಡ್ ಎಎಎ-248 ಸಿಸ್ಟಮ್ ಹಾಕಿಸುತ್ತೇನೆಂದು ತಲಾ 200 ರುಪಾಯಿ ಹಣ ವಸೂಲಿ ಮಾಡುತ್ತಿರುತ್ತಾರೆ.

ಇದನ್ನೂ ಓದಿ: Dina Bhavishya | ದಿನ ಭವಿಷ್ಯ | 19 -08 -2025
ಇದಲ್ಲದೇ ಡ್ರೈ ಫೂಟ್ಸ್ ಗೆಂದು ತಲಾ 250 ರುಪಾಯಿ ಹಣ ಹಾಗೂ ಹುಟ್ಟುಹಬ್ಬದ ಆಚರಣೆ ಸಲುವಾಗಿ ತಲಾ 500 ರುಪಾಯಿ ಹಣವನ್ನು ಪ್ರಶಿಕ್ಷಣಾರ್ಥಿಗಳಿಂದ ಹೆದರಿಸಿ, ಬೆದರಿಸಿ ವಸೂಲಿ ಮಾಡಿರುವುದಾಗಿ (Case file) ಪ್ರಶಿಕ್ಷಣಾರ್ಥಿಗಳು ತಿಳಿಸಿರುತ್ತಾರೆ ಎಂದು ಪ್ರಾಚಾರ್ಯ ದೂರಿನಲ್ಲಿ ಉಲ್ಲೇಖಿಸಿದ್ದು ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ.
