Chitradurga News | Nammajana.com | 19-08-2025
ನಮ್ಮಜನ ನ್ಯೂಸ್ ಕಾಂ,ಮೊಳಕಾಲ್ಮುರು: ಹಾಡಹಗಲೇ (Thieves) ಜನ ಜಂಗುಳಿ ಇರುವ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಬಳಿ ಸೋಮವಾರದಂದು ಶಿಕ್ಷಕನ ಬೈಕ್ ನಲ್ಲಿ ಇಟ್ಟಿದ್ದ 5ಲಕ್ಷ ರೂಪಾಯಿ ಹಣ ಎಗರಿಸಿ ಖತರ್ನಾಕ್ ಕಳ್ಳರು ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ

ತಾಲ್ಲೂಕಿನ ದೇವಸಮುದ್ರ ಹೋಬಳಿಯ ಕೋನಾಪುರ ಗ್ರಾಮದ ಪ್ರೌಢಶಾಲಾ ಶಿಕ್ಷಕ ಸೋಮಶೇಖರ್ ಹಣ ಕಳೆದುಕೊಂಡವರಾಗಿದ್ದಾರೆ.
ಇವರು ಕಾರ್ಯ ನಿಮಿತ್ತ ತಮ್ಮೇನಹಳ್ಳಿಯ ಎಸ್‌ಬಿಐ ಶಾಖೆಯಲ್ಲಿರುವ ಖಾತೆಯಿಂದ ರೂ 1 ಲಕ್ಷ ಹಣ ಡ್ರಾ ಮಾಡಿಕೊಂಡು ಬಂದಿದ್ದ ಸೋಮಶೇಖರ್ ಪಟ್ಟಣದ ಎಸ್‌ಬಿಐ ಬ್ಯಾಂಕ್ ನಿಂದ ಮತ್ತೆ ಸೋಮವಾರ ರೂ.4ಲಕ್ಷ ಹಣ ಡ್ರಾ ಮಾಡಿಕೊಂಡು ಬ್ಯಾಗ್‌ನಲ್ಲಿ ಹಾಕಿಕೊಂಡು ಬ್ಯಾಂಕ್ ಮುಂಭಾಗ ನಿಲ್ಲಿಸಿದ್ದ ತಮ್ಮ ಬೈಕ್‌ನ ಸೈಡ್ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದಾರೆ.
ಶಿಕ್ಷಕನ ಬೈಕ್ ನಲ್ಲಿ ಇಟ್ಟಿದ್ದ 5 ಲಕ್ಷ ಕಳವು
ಬೈಕ್ ಪಂಚರ್ ಆಗಿರುವನ್ನು ಕಂಡು ನಿಧಾನವಾಗಿ ಬೈಕ್‌ನ್ನು ಪಂಚರ್ ಶಾಪ್‌ಗೆ ತೆಗೆದುಕೊಂಡು ಹೋಗುವಾಗ ಸ್ಕೂಟಿಯಲ್ಲಿ ಎರಡು ಸಲ ಅಡ್ಡ ಬಂದ ಇಬ್ಬರು ಅಪರಿಚಿತರು ಸೈಡ್ ಬ್ಯಾಗ್‌ನಲ್ಲಿದ್ದ ಹಣವನ್ನು ಲಪಟಾಯಿಸಿದ್ದಾರೆ.
ಇದನ್ನೂ ಓದಿ: ಮೈನಿಂಗ್ ಯಾರ್ಡ್ ಸ್ಥಳಾಂತರ : ವಾಯುಮಾಲಿನ್ಯ ಮತ್ತು ಜಿಲ್ಲಾ ಯೋಜನಾಧಿಕಾರಿಗಳ ತಂಡ ಭೇಟಿ
ಪಂಚರ್ ಅಂಗಡಿ ಬಳಿ ಬೈಕ್ ನಿಲ್ಲಿಸಿ ನೋಡಿದಾಗ ಹಣ ಕಳವು ಆಗಿರುವುದು ಗಮನಕ್ಕೆ ಬಂದಿದೆ. ಬ್ಯಾಂಕ್ ಬಳಿ ಹಣ ಲಪಟಾಯಿಸಿರುವ ವ್ಯಕ್ತಿಗಳೇ ಟಯರ್‌ನ ಗಾಳಿ ಬಿಟ್ಟಿದ್ದಾರೆ. ಈ ಮೂಲಕ ವ್ಯವಸ್ಥಿತವಾಗಿ ಹಿಂಬಾಲಿಸಿ ಕೃತ್ಯ ಎಸಗಿದ್ದಾರೆ ಎಂದು ಸೋಮಶೇಖರ್ ಅಳಲು ತೋಡಿಕೊಂಡರು.
ಘಟನಾ ಸ್ಥಳಕ್ಕೆ ಕೂಡಲೇ(Thieves) ಆಗಮಿಸಿದ ಪಿಎಸ್ ಐ ಮಹೇಶ್ ಹೊಸಪೇಟೆ ಸಿಸಿ ಟಿವಿಗಳನ್ನು ಪರಿಶೀಲನೆ ಮಾಡಿ ಕಳ್ಳರನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
