Chitradurga news|Nammajana.com|21-8-2025
ನಮ್ಮಜನ.ಕಾಂ, ಚಿತ್ರದುರ್ಗ ಕ್ರೈಂ: ಚಿತ್ರದುರ್ಗದಲ್ಲಿ ಹಿರಿಯೂರು ತಾಲೂಕು ಕೋವೆರಹಟ್ಟಿ ವಿದ್ಯಾರ್ಥಿ ವರ್ಷಿತಾ ಭೀಕರ ಹತ್ಯೆ ಕೇಸ್ ನಲ್ಲಿ ಹುಡುಗ ಹೇಗೆಲ್ಲ ಸ್ಕೇಚ್ ಹಾಕಿದ್ದ ಎಂಬುದು ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.
ವರ್ಷಿತಾ ಸಾವಿನ ದಾರಿ ಹೇಗಿತ್ತು.
ಯುವತಿ ವರ್ಷಿತಾಳನ್ನು ಹಾಸ್ಟೆಲ್ ನಿಂದ ಕರೆದುಕೊಂಡು ಬರುವುದಕ್ಕಿಂತ ಮೊದಲೇ ಪಾಪಿ ಚೇತನ್ ಕೊಲೆ ಸ್ಕೇಚ್ ಹಾಕಿದ್ದ ಎಂದು ತಿಳಿದು ಬಂದಿದೆ.

ಹಂತಕ ಚೇತನ್ ರಾಕ್ಷಸ ಕೃತ್ಯಕ್ಕೂ ಮುನ್ನ ಸ್ಕೇಚ್ ಹಾಕಿದ್ದ ದೃಶ್ಯ CCTVಯಲ್ಲಿ ಸೆರೆಯಾಗಿರುವುದು ಲಭ್ಯವಾಗಿದೆ.
ಈ ಪ್ರಕಣವನ್ನು ನೋಡುತ್ತಿದ್ದರೆ ವರ್ಷಿತಾ ಜೊತೆ ತೆರಳುವ ಮುನ್ನವೇ 1 ಲೀಟರ್ ಪೆಟ್ರೋಲ್ ಖರೀದಿ ಮಾಡಿದ್ದ ಪ್ರೀಯಕರ ಚೇತನ್ ಎಂದು ತಿಳಿಯುತ್ತಿದೆ.
ನಗರದ ಪೆಟ್ರೋಲ್ ಬಂಕ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ಖರೀದಿ ಮಾಡಿ ಪ್ಲಾನ್ ಮಾಡಿಕೊಂಡಿದ್ದ ಬಳಿಕ ಆಟೋದಲ್ಲಿ ಗೋನೂರು ರಸ್ತೆಗೆ ಎಂಟ್ರಿಯಾಗಿದ್ದರು. ವರ್ಷಿತಾ ಸಹ ಆಟೋ ಬಿಟ್ಟು ಹಿಂದೆ ಮುಂದೆ ಪ್ರೀಯಕರ ಚೇತನ್ ಮತ್ತು ವರ್ಷಿತಾ ಜೊತೆಯಾಗಿ ನಡೆದುಕೊಂಡು ಹೊರಟಿದ್ದಾರೆ.
ಇಬ್ಬರು ಸುಮಾರು 1 ಕಿಲೋ ಮೀಟರ್ ದೂರ ವರ್ಷಿತಾ ಜೊತೆ ನಡೆದು ಸಾಗಿದ್ದ ಚೇತನ್ ಗೋನೂರು ಬ್ರೀಡ್ಜ್ ದಾಟಿಸ ನಂತರ ವರ್ಷಿತಾ ಕೊಲೆ ಮಾಡಿ ದೇಹದ ಮೇಲೆಹಾಕಿದ್ದಲ್ ಹಾಕಿ ಸುಟ್ಟಿದ್ದ ಆರೋಪಿ ಎಂಬುದು ತಿಳಿದಿದ್ದು ನಂತರ ಮನೆಗೆ ಹೋಗಿ ಬಟ್ಟೆ ಬದಲಿಸಿಕೊಂಡು ಬೈಕ್ ನಲ್ಲಿ ಮತ್ತೊಮ್ಮೆ ಪೆಟ್ರೋಲ್ ಬಂಕ್ ಗೆ ಬಂದಿದ್ದ ಆರೋಪಿ ನಂತರ ಇನ್ನೊಂದು ಲೀಟರ್ ಪೆಟ್ರೋಲ್ ಖರೀದಿಸಿದ್ದಾನೆ.
ಅರೆಬರೆ ಸುಟ್ಟಿರುವ ದೇಹಕ್ಕೆ ಮತ್ತೋಮ್ಮೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಯಾರಿಗೋ ಗೊತ್ತಾಗದಂತೆ ಮನೆ ಕಡೆ ತೆರಳಿದ್ದ ಆರೋಪಿಯನ್ನು ಪೋಲಿಸ್ ತನಿಖೆಯಲ್ಲಿ ಆರೋಪಿಯ ರಾಕ್ಷಸ ಕೃತ್ಯ ಬಯಲಾಗಿದೆ.
ಇದನ್ನೂ ಓದಿ: Chitradurga ವರ್ಷಿತಾ ಮರ್ಡರ್ | ಆರೋಪಿ ಚೇತನ್ ವರ್ಷಿತಾ ಕೊಲೆಗೆ ಕಾರಣ ಕೊಟ್ಟಿದ್ದೇನು? ಕೇಳಿದರೆ ನೀವು ಶಾಕ್
ಆರೋಪಿ ಚೇತನ್ ಸ್ಕೇಚ್ ಹಾಕಿದ್ದ ಪಿನ್ ಟು ಪಿನ್ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಮುಂದೆ ಓದಿ: ಚಿತ್ರದುರ್ಗ | ವರ್ಷಿತಾ ಅಮ್ಮನ ಬಳಿ ಮಾತಾಡಿದ್ದು ಕೊನೆಯಾದಾಗಿ ಯಾವಾಗ? ತಾಯಿ ಏನ್ ಹೇಳಿದರು | Varshita Murder Case
