Chitradurga news | nammajana.com | 21-08-2025
ನಮ್ಮಜನ.ಕಾಂ,ನಾಯಕನಹಟ್ಟಿ: ಸಮೀಪದ (NAYAKANAHATTI) ಹಿರೇಕೆರೆ ಏರಿ ಅಂಗಳದಲ್ಲಿ ಗುರುವಾರ ಕೆರೆಗಂಗಮ್ಮ ಆಚರಿಸಿ ಹಟ್ಟಿ ಜನರು ಸಮೃದ್ಧ ಮಳೆ, ಬೆಳೆ ಆಗಲೆಂದು ದೇವರಲ್ಲಿ ಪ್ರಾರ್ಥಿಸಿಕೊಂಡರು. ಊರಿನ ಹಿರಿಯರು ಸಾಂಪ್ರದಾಯಿಕ ಕೆರೆಗಂಗಮ್ಮ ಉತ್ಸವ ಆಚರಿಸಿದರು. ಕೆರೆ ಗಂಗಮ್ಮ ಉತ್ಸವ ಕೃಷಿ ಪ್ರಧಾನ ಆಚರಣೆ ಆಗಿದ್ದು, ಗಳಿಗೆ ಕೆರೆಯ ನೀರಿನಿಂದ 108 ಅಭಿಷೇಕ ಕೊಡಗಳಿಂದ ಮಾಡಲಾಗುತ್ತದೆ.
ಇದನ್ನೂ ಓದಿ: ವಿಧಾನ ಪರಿಷತ್ ನಲ್ಲಿ ಹಾಸ್ಟೆಲ್ ವಿದ್ಯಾರ್ಥಿ ವರ್ಷಿತಾ ಹತ್ಯೆ ಕುರಿತು ಪ್ರತಿಧ್ವನಿ

ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಇರುವ ಕೆರೆಯ ಕೋಡಿ ಸ್ಥಳದಲ್ಲಿ ಎಡೆ ಇಟ್ಟು ವಿಶೇಷ ಪೂಜೆ ನಡೆಸುವ ಧಾರ್ಮಿಕ ಉತ್ಸವ ಆಗಿದೆ. ಹಿರೇಕೆರೆಯಲ್ಲಿ ನೀರು ಸಂಗ್ರಹಗೊಂಡರೆ ಈ ಉತ್ಸವಕ್ಕೆ ಮೆರುಗು ಕೂಡ ಹೆಚ್ಚುತ್ತದೆ.
ಗುರುವಾರ ಶ್ರೀಗುರು ತಿಪ್ಪೇರುದ್ರಸ್ವಾಮಿ ಒಳಮಠದಿಂದ ಮಠದ ಗೂಳಿಯನ್ನು (ಬಸವಣ್ಣ) ಪಟ್ಟಪೀತಾಂಬರದಿಂದ ಅಲಂಕರಿಸಲಾಗಿತ್ತು. ಬಸವಣ್ಣನ ಜತೆಗೆ ಕುಂಭಹೊತ್ತ ಮಹಿಳೆಯರು, ಊರ ಜನರು ಹಟ್ಟಿಯಿಂದ 6ಕಿ.ಮೀ. ದೂರದ ಹಿರೇಕೆರೆಯತ್ತ ಹೆಜ್ಜೆ ಹಾಕಿದರು.
ಡೋಲು, ಡಮರುಗ, ಶಹ ನಾಯಿ, ನಂದಿಕೋಲು ಸಹಿತ ಹಟ್ಟಿ ಜನರು ಹಿರೆಕೆರೆಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನಡೆಸಿದರು. ನಂತರ ಜನರಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು. ವ್ಯಾಪ್ತಿಯಲ್ಲಿ ಸಮೃದ್ಧ ಮಳೆ, ಬೆಳೆ ಆಗಲೆಂದು ಹಟ್ಟಿ ಜನರು ದೇವರಲ್ಲಿ ಪ್ರಾರ್ಥಿಸಿಕೊಂಡರು.
ಹಿರಿಯ ಮುಖಂಡ ಕಾವಲಪರ ತಿಪ್ಪೇರುದ್ರಪ್ಪ ಮಾತನಾಡಿ, ಶ್ರಾವಣ ಮಾಸದಲ್ಲಿ ಕೆರೆಗಂಗಮ್ಮ ಉತ್ಸವವನ್ನು ನಮ್ಮ ಪೂರ್ವಜನರು ನಡೆಸಿಕೊಂಡು ಬಂದಿದ್ದಾರೆ. ಅವರ ಹಾದಿಯಲ್ಲಿ ಈಗಿನ ಹಟ್ಟಿ ಜನರು ಕೆರೆ ಉತ್ಸವ ಹಮ್ಮಿಕೊಂಡು ಆಚರಿಸುತ್ತಿದ್ದಾರೆ. ಬಸವಮೂರ್ತಿಗಳ ಜತೆಗೆ ಕೆರೆಪೂಜೆ ಇಲ್ಲಿ ಪ್ರಧಾನ ಆಗಿರುತ್ತದೆ ಎಂದರು.
ಇದನ್ನೂ ಓದಿ: ವರ್ಷಿತಾ ಕೊಲೆ | ಹತ್ಯೆಗೂ ಮೊದಲು ಪ್ರಿಯಕರ ಚೇತನ್ ಜೊತೆ ವರ್ಷಿತಾ ಜೊತೆಯಾಗಿದ್ದೇಲಿ, ಚೇತನ್ ಪ್ಲಾನ್ ಹೇಗಿತ್ತು!
ಪಟ್ಟಣ ಪಂಚಾಯತಿ(NAYAKANAHATTI) ಸದಸ್ಯ ಜೆ.ಆರ್. ರವಿಕುಮಾರ್ ಮಾತನಾಡಿ, ಮಾಡಿದ್ದಷ್ಟು ನೀಡು ಎನ್ನುವ ಕಾಯಕದ ತತ್ವವನ್ನು ಸಾರಿದ ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಿರ್ಮಿಸಿದ ಹಿರೆಕೆರೆ ಮತ್ತು ಚಿಕ್ಕಕೆರೆ ಐತಿಹಾಸಿಕ ಪ್ರಸಿದ್ಧವಾದದ್ದು, ಕಳೆದ ನಾಲ್ಕು ವರ್ಷಗಳಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕೆರೆಗೆ ನೀರು ಹರಿದು ಬರುತ್ತಿವೆ. ನಮ್ಮ ಪೂರ್ವಿಕರು ಹಿಂದಿನಿಂನದಲೂ ಕೆರೆ ಗಂಗಮ್ಮ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ದೇವೆ, ಶ್ರಾವಣ ಮಾಸದ ನಾಲ್ಕನೇ ಗುರುವಾರದಂದು ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ಸೇರಿ ಹಿರೇಕೆರೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ, ನಾಯಕನಹಟ್ಟಿ ಗ್ರಾಮದ ದೈವಸ್ಥರಾದ ದೊರೆ ತಿಪ್ಪೇಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯ ಅಬಕಾರಿ ತಿಪ್ಪೇಸ್ವಾಮಿ, ಎನ್.ಪಿ. ರುದ್ರಯ್ಯ, ಗಿರಿಯಜ್ಜ, ಬಿ.ಜಿ. ರಾಜಶೇಖರ್, ಎನ್.ಬಿ. ತಿಪ್ಪೇಸ್ವಾಮಿ, ಉಮೇಶ್ ಬಿ ಎಂ ನಟರಾಜ್ ಸೇರಿದಂತೆ ಸಮಸ್ತ ನಾಯಕನಹಟ್ಟಿ ದೈವಸ್ಥರು ಭಕ್ತಾದಿಗಳು ಇದ್ದರು.
