Chitradurga news | nammajana.com | 21-08-2025
ನಮ್ಮಜನ.ಕಾಂ,ಹೊಸದುರ್ಗ: ತಾಲೂಕು(HOSDURGA) ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೆಪ್ಟಂಬರ್ ಎರಡನೇ ವಾರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಕವಿಗೋಷ್ಠಿಗೆ ಚಿತ್ರದುರ್ಗ ಜಿಲ್ಲೆಯ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್.ಶಾಂತಪ್ಪ ಮತ್ತು ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಏರಿಕೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬರುವ ಸೆಪ್ಟೆಂಬರ್ 14ರಂದು ಭಾನುವಾರ ಬೆಳಿಗ್ಗೆ 11:30ಕ್ಕೆ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ನಡೆಸಲು ಉದ್ದೇಶಿಸಿದ್ದು.
ಭಾಗವಹಿಸುವ ಜಿಲ್ಲೆಯ ಕವಿಗಳು ಸೆಪ್ಟೆಂಬರ್ 5 ರೊಳಗೆ ತಾವು ವಾಚನ ಮಾಡಲಿರುವ ಒಂದು ಕವಿತೆ, ಭಾವ ಚಿತ್ರದೊಂದಿಗೆ ಪಾಸ್ ಫೋಟೋವನ್ನು ಅಧ್ಯಕ್ಷರು ಮತ್ತು ಕಾರ್ಯದರ್ಶಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಟಿ ಬಿ ಸರ್ಕಲ್ ಪ್ರಮುಖ ರಸ್ತೆ ಹೊಸದುರ್ಗ 577527 ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಅಂಚೆ ಮತ್ತು ಕೊರಿಯರ್ ಮೂಲಕ ಕಳುಹಿಸಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.
ಕವಿಗೋಷ್ಠಿ ಕವನಗಳಿಗೆ ಆಹ್ವಾನ
ಹೆಚ್ಚಿನ ಮಾಹಿತಿಗೆ(HOSDURGA) ಕಾರ್ಯದರ್ಶಿಗಳಾದ ಡಾ.ಚಂದ್ರು ಕಲಾವಿದ ಮೊಬೈಲ್ ನಂಬರ್ 9902 851 319, ಎಂ.ಎಸ್.ರಮೇಶ್ 7353933539, ಉಪಾಧ್ಯಕ್ಷ ನಾಗತಿಹಳ್ಳಿ ಮಂಜುನಾಥ್ ಮೊಬೈಲ್ ನಂಬರ್ 9986994558 ಇವರಿಗೆ ಸಂಪರ್ಕಿಸಬಹುದು.
