Chitradurga news|Nammajana.com|22-8-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಚಳ್ಳಕೆರೆ ಮನೆ ಮೇಲೆ ದಾಳಿ ಮಾಡಿ (ED Raid Challakere) ಬೆಳ್ಳಂಬೆಳಗ್ಗೆಯೇ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಶಾಸಕ ಕೆ.ಸಿ. ವೀರೇಂದ್ರ ಹಾಗೂ ಅವರ ಸಹೋದರರ, ಚಳ್ಳಕೆರೆ ನಗರದ ನಾಲ್ಕು ನಿವಾಸಗಳ ಮತ್ತು ಬೆಂಗಳೂರು ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ (ED Raid Challakere) ಪರಿಶೀಲನೆ ನಡೆಸುತ್ತಿದ್ದಾರೆ.
ಶಾಸಕ ಮನೆ ಬಳಿ ಶಾಸಕರ ಸಹೋದರ ಕೆ.ಸಿ.ನಾಗರಾಜ್ ಮಾತನಾಡಿ ಇಡಿ ದಾಳಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಯಾವ ರೀತಿಯಲ್ಲಿ ಅವರು ದಾಳಿ ಮಾಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಇಡಿ ಏನು ಕೇಳುತ್ತದೆ ಅದಕ್ಕೆ ಉತ್ತರವನ್ನು ನಾವು ನೀಡುತ್ತೇವೆ. ನಾನು ಈಗ ಬೆಂಗಳೂರು ನಿಂದ ಆಗಮಿಸಿದ್ದು ಶಾಸಕರು ಸಹ (ED Raid Challakere) ಆಗಮಿಸುತ್ತಾರೆ ಎಂದರು.
ಇದನ್ನೂ ಓದಿ: Gold Rate | ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
ರಾಜಕೀಯ ಪ್ರೇರಿತ ದಾಳಿ ಏನಿಲ್ಲ, ಅವರು ಏನು ಕೇಳುತ್ತಾರೆ ಅದಕ್ಕೆ ಮಾತ್ರ ಉತ್ತರವನ್ನು ನೀಡುತ್ತೇನೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
