Chitradurga news | nammajana.com | 23-08-2025
ನಮ್ಮಜನ.ಕಾಂ,ಹೊಸದುರ್ಗ: ತಾಲೂಕಿನ(HOSDURGA) ಸಣ್ಣಕಿಟ್ಟದಹಳ್ಳಿ ಗ್ರಾಮದ ಹೊರವಲಯದಲ್ಲಿನ ನಿಂಗಪ್ಪನ ಗುಡ್ಡ ಸಮೀಪದ ಈಶ್ವರ ದೇವಾಲಯದಲ್ಲಿ ನಿಧಿ ಆಸೆಗಾಗಿ ವಿಗ್ರಹಗಳನ್ನು ಕಿತ್ತೆಸೆದು ನೆಲವನ್ನು ಅಗೆದಿರುವ ಘಟನೆ ಶುಕ್ರವಾರ ಬಂದಿದೆ.
ಇದನ್ನೂ ಓದಿ: ಸೃಜನಶೀಲ ಬರವಣಿಗೆಗೆ ಸಾಹಿತ್ಯ ಓದು ಅಗತ್ಯ | ದಿನೇಶ್ ಅಮಿನ್ ಮಟ್ಟು

ಪೂಜಿಸುವ ವಿಗ್ರಹಗಳ 250 ಕದಲಿಸಿರುವ ಕಳ್ಳರು ಮೊದಲು ಈಶ್ವರ ಲಿಂಗವನ್ನು ಪಕ್ಕಕ್ಕಿಟ್ಟು, ವಿಗ್ರಹದ ಕೆಳಗೆ ಸುಮಾರು 5 ಅಡಿಯಷ್ಟು ಆಗೆದು ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ. ನಂದಿ
ಅಮಾವಾಸ್ಯೆ ಎರಡು ದಿನ ಮೊದಲೇ ಗುರುವಾರ ರಾತ್ರಿ ಖದೀಮರು ಇರಬಹುದು ಎಂಬ ಆಸೆಗೆ ರಾತ್ರೋರಾತ್ರಿ ಕಳ್ಳರು ಗರ್ಭಗುಡಿ ಅಗೆದಿದ್ದಾರೆ.
ಈಶ್ವರ ದೇವಾಲಯದಲ್ಲಿ ನಿಧಿ ಆಸೆಗೆ ವಿಗ್ರಹಗಳನ್ನು ಕಿತ್ತೆಸೆದ ಕಳ್ಳರು ವಿಗ್ರಹವನ್ನು ಕಿತ್ತು ಹೊರಹಾಕಿದ್ದಾರೆ. ಇನ್ನು ನಿಧಿಗಾಗಿ ಈಶ್ವರಲಿಂಗ ತೆಗೆದು ಕೆಳಗೆ ಆಗೆದಿರುವ ನಿಧಿಗಳ್ಳರಿಗೆ ಏನು ಸಿಕ್ಕಿದೆಯೋ, ಇಲ್ಲವೋ ಗೊತ್ತಿಲ್ಲ. ಪೊಲೀಸರ ತನಿಖೆಯಿಂದ ಸತ್ಯಾಂಶ ತಿಳಿಯಬೇಕಿದೆ.
ಈ ದೇವಾಲಯದಲ್ಲಿ ವಾರಕ್ಕೊಮ್ಮೆ ಪೂಜೆ ಕಾರ್ಯ ಗಳು ನಡೆಯುತ್ತವೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆ ದಿನ ವಿಶೇಷ ಪೂಜೆ ಇರುತ್ತದೆ.
ಇದನ್ನೂ ಓದಿ: ಒಳ ಮೀಸಲಾತಿ ಜಾರಿ ಹಿನ್ನಲೆ ಚಿತ್ರದುರ್ಗದಲ್ಲಿ ಆಗಸ್ಟ್ 24ರಂದು ಸಂಭ್ರಮೋತ್ಸವ | ಹೆಚ್.ಆಂಜನೇಯ
ಸಣ್ಣಕಿಟ್ಟದಹಳ್ಳಿ ಹೊರವಲಯದಲ್ಲಿರುವ ಈಶ್ವರ ದೇವಾಲಯದಲ್ಲಿ ನಿಧಿಯಾಸೆಗೆ ಗರ್ಭಗುಡಿ ಕೆಳಗೆ ಅಗೆದಿರುವ ಕಳ್ಳರು.
ಸ್ಥಳಕ್ಕೆ ಹೊಸದುರ್ಗ ಪೊಲೀಸರು(HOSDURGA) ಭೇಟಿ ನೀಡಿ ಪರಿಶೀಲಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ನಿಧಿಗಳ್ಳರಿಂದ ಐತಿಹಾಸಿಕ ದೇವಾಲಯ ಗಳು ಧ್ವಂಸವಾಗುತ್ತಿವೆ. ಇದರಿಂದ ಧಾರ್ಮಿಕ ಭಕ್ತಿಭಾವಕ್ಕೆ ಧಕ್ಕೆ ಆಗಲಿದ್ದು, ಇಂತಹ ಕಿಡಿಗೇಡಿಗಳಿಗೆ ಕಾನೂನು ಶಿಕ್ಷೆ ಆಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
