Chitradurga News | Nammajana.com | 25-08-2025
ನಮ್ಮಜನ ನ್ಯೂಸ್ ಕಾಂ,ಚಳ್ಳಕೆರೆ: ಭಗವಾನ್(Krishna Jayanti) ಶ್ರೀಕೃಷ್ಣ ಪರಮಾತ್ಮ ದಯಾಮಯಿ, ವಿಶೇಷವಾಗಿ ನಾಡಿನ ಬುಡಕಟ್ಟು ಸಮುದಾಯ ಶ್ರೀಕೃಷ್ಣನ ಆರಾಧಕರಾಗಿದ್ದಾರೆ. ಶ್ರೀಕೃಷ್ಣನ ಮೇಲೆ ಅಪಾರವಾದ ಭಕ್ತಿ, ಶ್ರದ್ದೆಯಿಂದ ಪ್ರತಿನಿತ್ಯ ಪೂಜಿಸುತ್ತಾರೆ. ನಮ್ಮೆಲ್ಲರ ಸಂಕಷ್ಟಗಳನ್ನು ನಿವಾರಿಸುವ ಶಕ್ತಿ ಶ್ರೀ ಕೃಷ್ಣನಲ್ಲಿದೆ. ನಾಡಿನ ಜನರ ಒಳಿಗಾಗಿ ಶ್ರೀ ಕೃಷ್ಣನನ್ನು ಪ್ರಾರ್ಥಿಸಿರುವುದಾಗಿ ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಇದನ್ನೂ ಓದಿ: ಒಳ ಮೀಸಲಾತಿ ಜಾರಿ ಹಿನ್ನಲೆ ಕೋಟೆನಾಡು ಚಿತ್ರದುರ್ಗದಲ್ಲಿ ವಿಜಯೋತ್ಸವ ಆಚರಣೆ

ಭಾನುವಾರ ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ ಹಾಗೂ ಭಕ್ತರು ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿಯಲ್ಲಿ ಪಾಲ್ಗೊಂಡು, ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವರ್ಷವೂ ಕೃಷ್ಣ ಜಯಂತಿ ಕಾರ್ಯಕ್ರಮ ಹೆಚ್ಚು ರಂಜನೆಯಿಂದ ಕೂಡಿದೆ. ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಕೃಷ್ಣನ ನಾಮವನ್ನು ಜಪಿಸುತ್ತಿದ್ದಾರೆ. ಭಗವಾನ್ ಶ್ರೀಕೃಷ್ಣ ಎಲ್ಲರಿಗೂ ಉತ್ತಮ ಬದುಕು ನೀಡಲಿ ಎಂದು ದೇವರನ್ನು ಕೋರಿರುವುದಾಗಿ ತಿಳಿಸಿದರು.
ಮೆರವಣಿಗೆ ಆರಂಭಕ್ಕೂಮುನ್ನವೇಕಾಟಪ್ಪನಹಟ್ಟಿ ನಿವಾಸಿ, ಜಿಲ್ಲಾ ಬಿಜೆಪಿಅಧ್ಯಕ್ಷಕೆ.ಟಿ.ಕುಮಾರಸ್ವಾಮಿ ಆಗಮಿಸಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಶ್ರೀಕೃಷ್ಣ ಪರಮಾತ್ಮ ತನ್ನನ್ನು ನಂಬಿದ ಭಕ್ತರಿಗೆ ಸದಾಕಾಲ ವರವನ್ನು ನೀಡುತ್ತಾನೆ. ಶ್ರೀಕೃಷ್ಣಮೇಲೆ ಸಮುದಾಯನಂಬಿಕೆ ಅಪಾರವಾಗಿದೆ ಎಂದರು.
ಇದನ್ನೂ ಓದಿ: ಆಗಸ್ಟ್ 28 ರವರೆಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ED ವಶಕ್ಕೆ
ಮೆರವಣಿಗೆ ಬೆಳಗ್ಗೆ 11 ರಿಂದ ಆರಂಭವಾದ(Krishna Jayanti) ಮೆರವಣಿಗೆ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ, ಹಳೇಟೌನ್, ಪಾವಗಡ ರಸ್ತೆ, ನೆಹರು ವೃತ್ತ, ಬಳ್ಳಾರಿ ರಸ್ತೆ ಮೂಲಕ ಕಾಟಪ್ಪನಹಟ್ಟಿಗೆ ತೆರಳಿತು. ದಾರಿ ಯುದ್ದಕ್ಕೂ ಸಾವಿರಾರು ಸಮುದಾಯದ ಮುಖಂಡರು ಭಾಗವಹಿಸಿದ್ದರು.
ತಾಲೂಕು ಯಾದವ ಸಂಘದ ಅಧ್ಯಕ್ಷ ಟಿ.ರವಿಕುಮಾರ್, ಹಿರಿಯ ಮುಖಂಡ ಸಿ.ವೀರಭದ್ರಬಾಬು, ಗ್ಯಾರಂಟಿ ಯೋಜನೆಗಳ ಅಧ್ಯಕ್ಷಗದ್ದಿಗೆತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷೆ ಶಿಲ್ಪ ಮುರುಳಿ, ಉಪಾಧ್ಯಕ್ಷ ಸಿ.ಕವಿತಾ, ಸದಸ್ಯರಾದ ವೈ.ಪ್ರಕಾಶ್, ವೀರಭದ್ರಪ್ಪ, ಶಶಿಧರ, ಕಾಂತರಾಜ್ ಪಾಲ್ಗೊಂಡಿದ್ದರು.
