ನಮ್ಮಜನ.ಕಾಂ, ಚಿತ್ರದುರ್ಗ: ಹಾವೇರಿ ಜಿಲ್ಲೆ ಮೊಟೆಬೆನ್ನೂರು (Dance Master) ಬಳಿಯ ಎನ್ ಹೆಚ್-4 8ಫ್ಲೈಓವರ್ ಮೇಲೆ ಕತ್ತು ಸೀಳಿ ಡ್ಯಾನ್ಸ್ ಮಾಸ್ಟರ್‌ನನ್ನು (Dance Master) ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಚಿತ್ರದುರ್ಗದ ಲಿಂಗೇಶ್ ಹತ್ಯೆಯಾದ ಡ್ಯಾನ್ಸ್ ಮಾಸ್ಟರ್ ಎಂದು ಗುರುತಿಸಲಾಗಿದೆ. ಅವರು ಚಿತ್ರದುರ್ಗದಲ್ಲಿ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದರು. ಮೃತ ಲಿಂಗೇಶ್ ಭಾನುವಾರ ಲಾಂಗ್ ಡ್ರೈವ್ ಹೋಗಿ ಬರೋದಾಗಿ ತನ್ನ ಕುಟುಂಬಸ್ಥರಿಗೆ ಹೇಳಿದ್ದ. ಬಳಿಕ ಆತ ಹುಬ್ಬಳ್ಳಿಗೆ ಬಂದಿದ್ದ. ರಾತ್ರಿ ಊಟಕ್ಕೆ ಮನೆಗೆ ಬಾ ಅಂತ ತಾಯಿ ಕರೆ ಮಾಡಿದಾಗ ಬರ್ತೀನಮ್ಮ ಅಂತ ಹೇಳಿದ್ದನು ಎಂದು (Dance Master) ತಿಳಿದಿದೆ.

ಇದನ್ನೂ ಓದಿ: Today Gold Rate | ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ಇದೀಗ ಲಿಂಗೇಶ್‌ನನ್ನು ದುಷ್ಕರ್ಮಿಗಳು ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಶವದ ಬಳಿ ಆತ ತಂದಿದ್ದ ಡ್ಯೂಕ್ ಬೈಕ್, ವಾಟರ್ ಬಾಟಲ್, ಸಿಗರೇಟ್ ಪ್ಯಾಕ್ ಪತ್ತೆಯಾಗಿದೆ. ಅಲ್ಲದೇ ಸಣ್ಣ ಚಾಕು ಕೂಡಾ ಪತ್ತೆಯಾಗಿದ್ದು, ಹಂತಕರು ಲಿಂಗೇಶ್‌ನನ್ನು ಹತ್ಯೆ ಮಾಡಿ, ಚಾಕು ಅಲ್ಲೇ ಬಿಸಾಡಿ ತೆರಳಿರುವುದು ಹಲವು (Dance Master) ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
