Chitradurga news | nammajana.com | 27-08-2025
ನಮ್ಮಜನ.ಕಾಂ, ಹೊಸದುರ್ಗ: ಮನೆ(HOSDURGA) ಮುಂದೆ ನಿಲ್ಲಿಸಲಾಗಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಹೊಸದುರ್ಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 7 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಸೆ.01 ರಿಂದ ಜಿಲ್ಲೆಯಾದ್ಯಂತ ಪಹಣಿ ತಿದ್ದುಪಡಿಗೆ ವಿಶೇಷ ಅಭಿಯಾನ | ಡಿ.ಸಿ. ವೆಂಕಟೇಶ್
ಬಂಧಿತರನ್ನು ಚಿತ್ರದುರ್ಗ ನಗರದ ಕವಡಿಗರ ಹಟ್ಟಿಯ ದಾದಾಪೀರ್ (28) ಹಾಗೂ ನಬಿ (17) ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳು ಹೊಸದುರ್ಗ ಚಿತ್ರದುರ್ಗ ಚಳ್ಳಕೆರೆ ಭರಮಸಾಗರ ಹಿರಿಯೂರು ಹಾಗೂ ದಾವಣಗೆರೆ ನಗರದ ಕೆ ಟಿ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿನ ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಆರೋಪಿಗಳನ್ನು ಬಂಧಿಸಲು(HOSDURGA) ಯಶಸ್ವಿಯಾದ ಪೊಲೀಸರ ಸಾಧನೆಯನ್ನು ಎಸ್.ಪಿ.ರಂಜಿತ್ ಕುಮಾರ್‌ಭಂಡಾರು ಶ್ಲಾಘಿದ್ದಾರೆ.
