Chitradurga news|Nammajana.com|28-8-2025
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ಮುಕ್ತಾಯವಾಗಿದ್ದು ನಿರೀಕ್ಷೆಯಂತೆ ಈ ವರ್ಷವೂ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರಲ್ಲದೆ, ಕಾಣಿಕೆಗಳನ್ನು ಸಲ್ಲಿಸಿ ಹರಿಕೆಯನ್ನು ತೀರಿಸಿಕೊಂಡಿದ್ಧಾರೆ.

ಮೂರು ದಿನಗಳ ಜಾತ್ರೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ತಾಲ್ಲೂಕು ಮುಜುರಾಯಿ ಅಧಿಕಾರಿ ತಹಶೀಲ್ಧಾರ್ ರೇಹಾನ್‌ಪಾಷ ನೇತೃತ್ವದಲ್ಲಿ ಹುಂಡಿ ಹಣ ಏಣಿಕೆ ಕಾರ್ಯಯಶಸ್ವಿಯಾಗಿ ನಡೆಯಿತು.
ಮೂರು ದಿನಗಳ ಅವಧಿಯಲ್ಲಿ ಭಕ್ತರು 13,15,550 ಲಕ್ಷ ರೂಗಳನ್ನು ದೇವರಿಗೆ ಕಾಣಿಕೆಯಾಗಿ ಸಲ್ಲಿಸಿರುತ್ತಾರೆ. 12,87,970 ನೋಟು, 27.587 ಚಿಲ್ಲರೆ ಒಟ್ಟು 13,15,550ರೂ ಹಣ ಸಂಗ್ರಹವಾಗಿದೆ.
ಇದನ್ನೂ ಓದಿ: ಎಂಜಿನಿಯರ್ ಅಂತ ಹೇಳಿಕೊಂಡು ಚಿನ್ನ ಆಭರಣ ಕಳ್ಳತನ
ಹುಂಡಿ ಏಣಿಕೆ ಕಾರ್ಯ ದೇವಸ್ಥಾನದ ಒಳಭಾಗದಲ್ಲಿ ನಡೆದಿದ್ದು ಶಿರಸ್ತೇದಾರ್ ಸದಾಶಿವಪ್ಪ, ಉಪತಹಶೀಲ್ಧಾರ್ ಮಹಮ್ಮದ್‌ರಫೀ, ಕಂದಾಯಾಧಿಕಾರಿ ಲಿಂಗೇಗೌಡ, ಚೇತನ್‌ಕುಮಾರ್, ರಾಜೇಶ್, ಗ್ರಾಮಪಂಚಾಯಿತಿ ಅಧ್ಯಕ್ಷ ಓಬಣ್ಣ, ಸದಸ್ಯರಾದ ಚಂದ್ರಣ್ಣ, ಶಾಂತಕುಮಾರ್, ಶಶಿಧರ, ದೇವಸ್ಥಾನದ ಆಡಳಿತಮಂಡಳಿ ಸದಸ್ಯರು, ಬ್ಯಾಂಕ್ ಅಧಿಕಾರಿಗಳು ಏಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
