Chitradurga News | Nammajana.com | 14-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ದೇಶದ(Hindu Maha Ganapati) ಗಮನ ಸೆಳೆದಿರುವ ಐತಿಹಾಸಿಕ ಕೋಟೆನಾಡು ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಮಹೋತ್ಸವದ ಗಣೇಶ ಮೂರ್ತಿಯ ವಿಸರ್ಜನೆ ಶೋಭಾಯಾತ್ರೆಯೊಂದಿಗೆ ಶನಿವಾರ ಅದ್ದೂರಿಯಾಗಿ ನೆರವೇರಿ, ಶಾಂತಿಯುತವಾಗಿ ಮುಕ್ತಾಯವಾಯಿತು.

18 ಅಡಿ ಎತ್ತರದ ಗಣೇಶ :
ಶತ್ರುಗಳನ್ನು ಸಂಹರಿಸಿ, ವಿಜಯದ ಸಂಕೇತವಾಗಿ ಬಲಗೈಲಿ ಮಹಾ ವಿಷ್ಣುಎನ ಚಕ್ರ, ಮತ್ತೊಂದು ಕೈಯಲ್ಲಿ ಶಂಖ, ಇನ್ನೊಂದು ಕೈಯಲ್ಲಿ ಗಧೆ, ಕಮಲ ಹೂವು, ಕೇಸರಿ ಬಾವುಟ ಹಿಡಿದು, ಮಗದೊಂದು ಕೈಯಲ್ಲಿ ಭಕ್ತರಿಗೆ ಅಭಯ ನೀಡುವ ಅವತಾರಿಯ ಸುಮಾರು ಹದಿನೆಂಟು ಅಡಿ ಎತ್ತರದ ಹಿಂದೂ ಮಹಾ ಗಣಪತಿ ಮೂರ್ತಿಯ ಬೃಹತ್ ಶೋಭಾಯಾತ್ರೆ ಜಯಘೋಷಗಳೊಂದಿಗೆ ಚಾಲನೆ ದೊರೆಯಿತು. ಈ ವೇಳೆ ಭಾರತ್ ಮಾತಾ ಕೀ ಜೈ ಜೈ ಭಜರಂಗಿ, ಹಿಂದೂ ಮಹಾ ಗಣಪತಿ ಕೀ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.
ಇದನ್ನೂ ಓದಿ: HIRIYUR : ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆ
ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಹಿಂದೂ ಮಹಾ ಗಣಪತಿ ಮಹೋತ್ಸವ ಸಮಿತಿಯಿಂದ ಆಯೋಜಿಸಿದ್ದ ಶೋಭಾಯಾತ್ರೆಗೆ ಬೆಳಗ್ಗೆ ಕಡಿಮೆ ಸಂಖ್ಯೆಯಲ್ಲಿದ್ದ ಜನತೆ ಮಧ್ಯಾಹ್ನ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು. 7 ಡಿಜೆ ಸದ್ದಿಗೆ ನೆರೆದಿದ್ದವರು ಕುಣಿದು ಸಂಭ್ರಮಿಸಿದರು. ಯುವತಿಯರು, ಮಹಿಳೆಯರು ಕೂಡ ಹೆಜ್ಜೆ ಹಾಕಿದರು.
ತಲೆಗೆ ಕೇಸರಿ ಪೇಟ, ಹೆಗಲ ಮೇಲೆ ಕೇಸರಿ ಪಕ್ಷ ಧರಿಸಿ ಪಾಲ್ಗೊಂಡಿದ್ದರು. ಭಜರಂಗಿ, ಓಂ ಚಿಹ್ನೆಯುಳ್ಳ ಬಾವುಟ ಪ್ರದರ್ಶಿಸಿದರು. ಉತ್ಸವ ಸಮಿತಿಯ ನಿಷೇಧದ ನಡುವೆಯೂ ಯಾತ್ರೆಯಲ್ಲಿ ದರ್ಶನ್ ಭಾವಚಿತ್ರದ ಬಾವುಟ ಹಿಡಿದಿದ್ದರು. ಶೋಭಾಯಾತ್ರೆ ಸಾಗಿದ ಅಲ್ಲಲ್ಲಿ ಕೇಸರಿ ಪೇಟಗಳು, ಕೇಸರಿ ಟವಲ್ ಮಾರಾಟವಿತ್ತು, ನಿವೃತ್ತ ನೌಕರರ ಸಂಘ, ವಕೀಲರ ಸಂಘ, ಅಪ್ಪು ಟ್ಯಾಕ್ಸಿ ವಾಹನ ಚಾಲಕರ ಸಂಘ, ವಾಸವಿ ಯುಮುನ ಸಂಸ್ಥೆ, ಲಕ್ಷ್ಮಿ, ಬಚಾರನ ನಾನಾ ಕ್ಷೇತ್ರಗಳ ಉದ್ಯಮಿಗಳು, ಹೂವಿನ ಮಾರಾಟಗಾರರು ಸಾರ್ವಜನಿಕರಿಗೆ ಆಹಾರ, ಜ್ಯೂಸ್, ಐಸ್ ಕ್ರೀಂ, ಬಿಸ್ಕೆಟ್ ವಿತರಿಸಿದರು. ಆದರೆ ಕೆಲವರು ತಟ್ಟೆಗೆ ಹಾಕಿಸಿಕೊಂಡ ಆಹಾರ ವ್ಯರ್ಥ ಮಾಡಿದ್ದು ಬಹುತೇಕರಲ್ಲಿ ಬೇಸರ ವ್ಯಕ್ತಪಡಿಸಿದರು.
ತಡವಾಗಿ ಆರಂಭ:
1.15ಕ್ಕೆ ವೇದಿಕೆ ಕಾರ್ಯಕ್ರಮ ಮುಗಿದು, 2.30ಕ್ಕೆ ಶೋಭಾಯಾತ್ರೆಗೆ ಚಾಲನೆ ದೊರೆಯಿತು.
ಕಬೀರಾನಂದ ಆಶ್ರಮದ ಶ್ರೀಶಿವಲಿಂಗಾನಂದ ಸ್ವಾಮೀಜಿ, ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀರಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀಮರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀಶಾಂತವೀರ ಸ್ವಾಮೀಜಿ, ಶ್ರೀಬಸವ ಮಾಚಿದೇವ ಸ್ವಾಮೀಜಿ, ಶ್ರೀಸರ್ದಾರ್ ಸೇವಾಲಾಲ್ ಸ್ವಾಮೀಜಿ ಸೇರಿ ನಾನಾ ಮತದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಸದ ಗೋವಿಂದ ಕಾರಜೋಳ, ಎಂಎಲ್ಲಿ ಕೆ.ಎಸ್. ನವೀನ್, ಉತ್ಸವ ಸಮಿತಿ ಅಧ್ಯಕ್ಷ ಶರಣ್ ಕುಮಾರ್, ಮುಖಂಡರಾದ ಡಾ.ಸಿದ್ರಾರ್ಥ, ಜಿ.ಎಸ್.ಅನಿತ್ ಕುಮಾರ್, ಉಮೇಶ್ ಕಾರಜೋಳ, ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಪ್ರಬಂಜನ್, ಮುಖಂಡ ಟಿ.ಬದರಿನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಸೇರಿ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಚಿತ್ರದುರ್ಗ ಹಿಂದೂ ಮಹಾಗಣಪತಿ | ಭಗವಾಧ್ವಜ 6 ಲಕ್ಷಕ್ಕೆ ಹರಾಜು, ಏನೆಲ್ಲ ಹರಾಜು ಆಯ್ತು ಇಲ್ಲಿದೆ ಮಾಹಿತಿ
ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿ ಮಹೋತ್ಸವದ ಬೃಹತ್ ಶೋಭಾಯಾತ್ರೆಯಲ್ಲಿ ರಾಜ ಗಾಂಭೀರ್ಯದಿಂದ ಸಾಗಿದ ಹದಿನೆಂಟು ಅಡಿ ಎತ್ತರದ ಗಣೇಶ ಮೂರ್ತಿ.
6 ಲಕ್ಷಕ್ಕೆ ಭಗವಾಧ್ವಜ:
ಭಗವಾ ಧ್ವಜವನ್ನು ಬಿಜೆಪಿ ಮುಖಂಡ ಹನುಮಂತೇಗೌಡ 6 ಲಕ್ಷ ರೂ.ಗಳಿಗೆ ಹರಾಜು ಕೂಗಿ ಪಡೆದುಕೊಂಡರು. ಏಳು ಮಲೆವಾಸ ತಿರುಪತಿ ತಿಮ್ಮಪ್ಪ ದೇವಸ್ಥಾನ ಮಾದರಿಯನ್ನು ಉದ್ಯಮಿ ವಜ್ರ ಮಹೇಶ್ 5.25 ಲಕ್ಷಕ್ಕೆ, ಗಣಪತಿಯ ಫಲಾಹಾರವನ್ನು ಐಶ್ವರ್ಯ ಗ್ರೂಪ್‌ನ ಕಿರಣ್ ಕುಮಾರ್ 1.25 ಲಕ್ಷ ರೂ. ಕೈಯಲ್ಲಿ ರುಚಿಸಿರುವ ಗಣಪತಿ ಕಲಾಕೃತಿಯನ್ನು ಮಂಜುನಾಥ್ ಎಂಬವರು 1.05 ಲಕ್ಷ ರೂ., ಗಣಪತಿ ಹೂವಿನ ಹಾರವನ್ನು ಚಿತ್ರಹಳ್ಳಿ ಲವಕುಮಾರ್ 1 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಪಡೆದುಕೊಂಡರು.
ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿ ಮಹೋತ್ಸವದ ಬೃಹತ್ ಶೋಭಾಯಾತ್ರೆ ಸೇರಿದ್ದ ಜನಸ್ತೋದು.
ಶರಣ್ ಪಂಪ್‌ವೆಲ್ ಭಾಗಿ:
ಸುಪ್ರೀಂ ಕೋರ್ಟ್ ಅನುಮತಿಯಂತೆ(Hindu Maha Ganapati) ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಜರಂಗದಳ ನಾಯಕ ಶರಣ್ ಪಂಪ್ ವೆಲ್. ಮಾತನಾಡಿ, ಚಿತ್ರದುರ್ಗದ ಗಣೇಶ ಉತ್ಸವಕ್ಕೆ ಸರಕಾರ ವಿನಾಚಾರಣ ತೊಂದರೆ ಕೊಡುತ್ತಿದೆ. ಹದಿನೆಂಟು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಹಿಂದೂ ಮಹಾ ಗಣಪತಿ ಉತ್ಸವದಲ್ಲಿ ಯಾರಿಗಾದರೂ ತೊಂದರೆಯಾಗಿರುವ ಒಂದೇ ಒಂದು ಉದಾಹರಣೆ ಕೊಡಿ ಎಂದು ಪ್ರಶ್ನಿಸಿದರು. ನಾವೆಲ್ಲ ಒಂದು ನಾವೆಲ್ಲಾ ಹಿಂದೂ ಎಂಬ ಸಂದೇಶ ನೀಡಲು ಈ ಉತ್ಸವ ನಡೆಸಲಾಗುತ್ತಿದೆ ಎಂದರು.
ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿ ಮಹೋತ್ಸವದ ಬೃಹತ್ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಮಠಾಧೀಶರು, ನಾನಾ ಗಣ್ಯರು.
ಮೊಬೈಲ್ ಶೌಚಾಲಯ:
ಮೊದಲ ಬಾರಿಗೆ ಸಾರ್ವಜನಿಕರ ಸ್ಪಂದನೆಗೆ ಐದು ಕಡೆ ಸ್ಪಂದನ ಕೇಂದ್ರಗಳನ್ನು ತೆರೆಯಲಾಗಿತ್ತು, ಜಿಲ್ಲಾಡಳಿತದ 30 ಮಂದಿ ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದರು. ಐದು ಕಡೆ ಮೊಬೈಲ್ ಶೌಚಾಲಯದ ವ್ಯವಸ್ಥೆ ಮಾಡಲಾಗಿತ್ತು.
