Chitradurga News | Nammajana.com | 22-09-2025
ನಮ್ಮಜನ ನ್ಯೂಸ್ ಕಾಂ,ಚಳ್ಳಕೆರೆ: ತಾಲ್ಲೂಕಿನ (challakere) ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಸುಮಾರು ಒಂದು ತಿಂಗಳಿನಿಂದ ಮಳೆಬಾರದೆ ರೈತರ ಬೆಳೆಗಳು ಸಂಪೂರ್ಣವಾಗಿ ಒಣಗಿ ನೆಲಕಚ್ಚಿದ್ದು ಉಳಿದ ಅಲ್ಪಸ್ವಲ್ಪ ಬೆಳೆಗಾಗಿ ಮಳೆರಾಯನ ಆಗಮನಕ್ಕಾಗಿ ಗ್ರಾಮಸ್ಥರು ಹಿಂದಿನ ಪದ್ದತಿಯಂತೆ ಗ್ರಾಮಕ್ಕೆ ಕತ್ತೆಗಳನ್ನು ತರಿಸಿ ಅವುಗಳ ಮದುವೆ ಮಾಡಿಸಿದ್ದಾರೆ.

ಇದನ್ನೂ ಓದಿ: Sirigere shri: ಈಗ ಪ್ರಕಟಿಸಿರುವಂತೆ ಜಾತಿಗಳ ಪಟ್ಟಿಯಲ್ಲಿರುವ ದೋಷವನ್ನು ಸರಿಪಡಿಸಿ | ಸಿರಿಗೆರೆ ಶ್ರೀ ಸರ್ಕಾರಕ್ಕೆ ಆಗ್ರಹ
ಗ್ರಾಮದ ಮುಖಂಡ ಎ.ಪಿ.ರೇವಣ್ಣ, ಚನ್ನಪ್ಪ, ಸುಪುತ್ರಬಾಬು, ಸಿದ್ದೇಶ್ವರಪ್ಪ, ಪತ್ರಗೌಡ, ಹಾಲಪ್ಪ, ಗೌರಮ್ಮ, ತಿಪ್ಪೇಸ್ವಾಮಿ, ಬೈಯಣ್ಣ, ಕುಬೇರ, ಮಹಂತೇಶ್, ಮಂಜಮ್ಮ, ಚನ್ನಬಸಮ್ಮ, ಕಾಂತರಾಜ್, ಈರಣ್ಣ, ಲಕ್ಷಿö್ಮ, ಶೇಕರಪ್ಪ ಮುಂತಾದವರು ಪತ್ರಿಕೆಯೊಂದಿಗೆ ಮಾತನಾಡಿ, ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಜಮೀನಿಗೆ ಬಿತ್ತನೆ ಮಾಡಿದ್ದು ಕೊನೆಕಳಿಗೆಯಲ್ಲಿ ಮಳೆಬಾರದೆ ಬೆಳೆ ಒಣಗುತ್ತಿದೆ.
ಪ್ರತಿನಿತ್ಯವೂ ಆಕಾಶದತ್ತ ನೋಡಿ ಮಳೆಗಾಗಿ ಪ್ರಾರ್ಥನೆ ಮಾಡಲಾಗುತ್ತಿದೆ. ಈ ಹಿಂದೆ ಗ್ರಾಮದಲ್ಲಿ ಮಳೆಬಾರದಿದ್ದಾಗ ನಮ್ಮ ಪೂರ್ವಜನರು ಕತ್ತೆಗಳ ಮದುವೆ ಮಾಡಿಸಿ ಮೆರವಣಿಗೆ ನಡೆಸುತ್ತಿದ್ದರು.
ನಾವು ಸಹ ನಮ್ಮ ಹಿರಿಯರ ಪದ್ದತಿಯನ್ನು ಪಾಲಿಸಿದ್ದೇವೆ. ಈಗಲಾದರೂ ವರಣದೇವ ನಮಗೆ ಕೃಪೆತೋರಬೇಕೆಂದು ಪ್ರಾರ್ಥಿಸುತ್ತೇವೆಂದರು.
ಇದನ್ನೂ ಓದಿ: ರೈತರಿಗೆ ಜಮೀನುಗಳಿಗೆ ಕಾಲುದಾರಿ ಮತ್ತು ಬಂಡಿದಾರಿ ಸಮಸ್ಯೆಗೆ ಸರ್ಕಾರದಿಂದ ಮಹತ್ವದ ಆದೇಶ
ಇದೇ ಸಂದರ್ಭದಲ್ಲಿ ಗಂಗಾಪೂಜೆ ನೆರವೇರಿಸಿ, ಕತ್ತೆಗಳನ್ನು ಅಲಂಕರಿಸಿ ಶಾಸ್ತ್ರಕ್ತವಾಗಿ ಮದುವೆ ಮಾಡಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.
