Chitradurga News | Nammajana.com |22-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ರಾಜ್ಯ(Sri Immadi Siddarameshwara Swamiji) ಸರ್ಕಾರ ಇಂದಿನಿಂದ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಗಣತಿಯನ್ನು ರಾಜ್ಯದಲ್ಲಿನ 7 ಕೋಟಿ ಜನರ ಸಮೀಕ್ಷೆಯಾಗುವವರೆಗೂ ಸಹಾ ನಡೆಸಬೇಕು, ಇದಕ್ಕೆ ಯಾವುದೇ ರೀತಿಯಲ್ಲಿ ಕಾಲಮಿತಿಯನ್ನು ಹಾಕುವುದು ಬೇಡ ಈ ಸಮೀಕ್ಷೆಯಿಂದ ಯಾರೂ ಸಹಾ ಹೊರಗುಳಿಯದಂತೆ ನೋಡಿಕೊಳ್ಳಬೇಕಿದೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಚಿತ್ರದುರ್ಗ ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ರಾಜ್ಯ ಸರ್ಕಾರ ಸಾಮಾಜಿಕ ಶೈಕ್ಷಣಿಕ ಗಣತಿಯನ್ನು ರಾಜ್ಯದಲ್ಲಿ ನಡೆಸುತ್ತಿರುವುದಕ್ಕೆ ಸ್ವಾಗತ, ಈ ಸಮೀಕ್ಷೆ ರಾಜ್ಯದಲ್ಲಿ ವಿವಿಧ ಜಾತಿಗಳ ಪ್ರಗತಿಗೆ ಕಾರಣವಾಗಿದೆ.
ಈ ಸಮೀಕ್ಷೆಯನ್ನು ಯಾರೂ ಸಹಾ ನಿರ್ಲಕ್ಷ್ಯ ಮಾಡಬಾರದು, ಎಲ್ಲಾರು ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡುವುದರ ಮೂಲಕ ನಿಮ್ಮ ನಿಮ್ಮ ಜಾತಿಯನ್ನು ಗುರುತಿಸಿಕೊಳ್ಳಬೇಕಿದೆ, ರಾಜ್ಯದ ಕೆಲವು ಪ್ರದೇಶಗಳಲ್ಲಿ ಕೆಲಸಕ್ಕಾಗಿ ನಮ್ಮ ರಾಜ್ಯವನ್ನು ಬಿಟ್ಟು ಬೇರೆ ಕಡೆಗಳಲ್ಲಿ ಹಲವಾರು ಜನತೆ ವಲಸೆ ಹೋಗಿದ್ದಾರೆ. ಇಂತಹವರನ್ನು ಸಹಾ ಈ ಗಣತಿಯಲ್ಲಿ ಒಳಪಡಿಸಬೇಕಿದೆ.
ಕಟ್ಟಡ ಕೆಲಸಕ್ಕಾಗಿ ಬೆಂಗಳೂರು ಸೇರಿದಂತೆ ಮಹಾನಗರಗಳಿಗೆ ಹೋಗಿದ್ದಾರೆ. ಉತ್ತರ ಕರ್ನಾಟಕದಿಂದ ಕಾಫೀ ತೋಟಗಳಲ್ಲಿ ಕೆಲಸ ಮಾಡಲು ಹೋಗಿದ್ದಾರೆ ಕೊಪ್ಪಳ, ಬಳ್ಳಾರಿ ಸೇರಿದಂತೆ ನಾನಾ ಜಿಲ್ಲೆಗಳಿಂದ ಜಿಲ್ಲೆಯನ್ನು ಬಿಟ್ಟು ಹೊರಗಡೆ ಹೋಗಿರುತ್ತಾರೆ ಇಂತಹರನ್ನು ಸಹಾ ಸಮೀಕ್ಷೆ ಮಾಡಲು ಪ್ರತ್ಯೇಕವಾದ ತಂಡವನ್ನು ನೇಮಕ ಮಾಡುವಂತೆ ಸರ್ಕಾರವನ್ನು ಶ್ರೀಗಳು ಆಗ್ರಹಿಸಿದರು.
ಇದನ್ನೂ ಓದಿ: APK file ಅಥವಾ ಅನಾಮಧೇಯ ಲಿಂಕ್ ಓಪನ್ ಮಾಡಿದ್ರೆ ನಿಮ್ಮ ಫೋನ್ ಹ್ಯಾಕ್ ಆಗುತ್ತೆ | ಎಚ್ಚರ
ಮೈಸೂರಿನ ದಸರಾ ಹಬ್ಬ ನಾಡಹಬ್ಬವಾಗಿ ಪರಿಣಿಮಿಸಿದೆ. ಈ ಸಮಯದಲ್ಲಿ ಊರಿನಿಂದ ಹೊರಗೆ ಹೋದವರು ಸಹಾ ವಾಪಾಸ್ಸು ಬರುತ್ತಾರೆ. ಇದೇ ಉತ್ತರ ಕರ್ನಾಟಕದಲ್ಲಿ ದೀಪಾವಳಿ ಹಬ್ಬ ನಾಡಹಬ್ಬವಾಗಿದೆ. ಈ ಸಮಯದಲ್ಲಿ ಸಹಾ ಊರಿನಿಂದ ಹೋರಗಡೆ ಹೋದವರು ವಾಪಾಸ್ಸು ಬರುತ್ತಾರೆ ಇಂತಹ ಸಮಯದಲ್ಲಿ ಸರ್ಕಾರ ಮಾಡುವ ಸಮೀಕ್ಷೆ ಸರಿಯಿದೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ಸಮೀಕ್ಷೆಯನ್ನು ಮಾಡಬೇಕಿದೆ.
ಈ ಹಿನ್ನಲೆಯಲ್ಲಿ ಸಮೀಕ್ಷೆಯನ್ನು ಮಾಡುವವರಿಗೆ ಕಾಲ ಮಿತಿಯನ್ನು ಹಾಕದೇ ಗಣತಿಯಲ್ಲಿ ರಾಜ್ಯದ 7 ಕೋಟಿ ಜನ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಕಾಲವನ್ನು ನೀಡಬೇಕಿದೆ. ರಾಜ್ಯದ ಎಲ್ಲಾ ಜನತೆ ಈ ಸಮಿಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಖಾತರಿಯಾದ ಮೇಲೆ ಸಮೀಕ್ಷೆಯನ್ನು ಪೂರ್ಣ ಮಾಡುವಂತೆ ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
2011ರ ಗಣತಿಯಲ್ಲಿ ಪ. ಜಾತಿ ಸಮಾಜದ ಜನಸಂಖ್ಯೆ 1.08 ಕೋಟಿ ಇತ್ತು ಆದರೆ ನಾಗ ಮೋಹನ್ ದಾಸ್ ಆಯೋಗದ ವರದಿಯಲ್ಲಿ ಪರಿಶಿಷ್ಟ ಜಾತಿಯವರ ಸಮೀಕ್ಷೆಯನ್ನು ಮಾಡುವಾಗ 1.05 ಕೋಟಿ ಎಂದು ತೋರಿಸಿದ್ದಾರೆ, ಇದು ಸರಿಯಾದ ಸಮೀಕ್ಷೆಯಲ್ಲ ಹತ್ತು ವರ್ಷದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಕನಿಷ್ಠ 25ಲಕ್ಷ ಹಾಗೂ ಭೋವಿ ಸಮುದಾಯ ಕನಿಷ್ಠ 3 ಲಕ್ಷದಿಂದ ರಿಂದ 5 ಲಕ್ಷದವರೆಗೆ ಜನಸಂಖ್ಯೆಯಷ್ಟದಾರೂ ಏರಿಕೆಯಾಗಿರುತ್ತದೆ. ಆದರೆ, ಆಯೋಗವೂ ಕಡಿಮೆ ಜನಸಂಖ್ಯೆಯನ್ನು ತೋರಿಸಿದೆ.
ಆದರೆ, ಈ ಬಾರಿಯ ಸಮೀಕ್ಷೆಯಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳಬೇಕಿದೆ. ನಮ್ಮ ಸಮುದಾಯದವರೆಲ್ಲರೂ ಸಹ ಜಾತಿ ಭೋವಿ ಅಥವಾ ವಡ್ಡರ ಎಂದು ಬರೆಸುವುದರ ಮೂಲಕ ನಮ್ಮ ಸಂಘಟನೆಯನ್ನು ಪ್ರದರ್ಶನ ಮಾಡಬೇಕಿದೆ, ನಮ್ಮ ಸಮುದಾಯ ಅರೆಅಲೆಮಾರಿಯಾಗಿದ್ದು ಕೆಲಸದ ನಿಮ್ಮಿತ್ತ ಊರನ್ನು ಬಿಟ್ಟು ಹೋಗಿರುತ್ತಾರೆ.
ಇದನ್ನೂ ಓದಿ: Chitradurga today Gold Rate | ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ
ಈ ಸಮಯದಲ್ಲಿ(Sri Immadi Siddarameshwara Swamiji)ಊರಿನಲ್ಲಿ ಇರುವುದರ ಮೂಲಕ ಗಣತಿದಾರರು ಬಂದಾಗ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ನೀಡುವುದರ ಮೂಲಕ ಭೋವಿ ಸಮುದಾಯದ ಸರಿಯಾದ ರೀತಿಯಲ್ಲಿ ಸಂಖ್ಯೆಯನ್ನು ನಮೂದಿಸಬೇಕಿದೆ ಎಂದು ಶ್ರೀಗಳು ಸಮುದಾಯವರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ಭೋವಿ ಗುರುಪೀಠದ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಗೌನಹಳ್ಳಿ ಗೋವಿಂದಪ್ಪ ಹಾಜರಿದ್ದರು.
