Chitradurga news|Nammajana.com|05-10-2025
ನಮ್ಮಜನ.ಕಾಂ, ಚಳ್ಳಕೆರೆ: ರಾಜ್ಯದಲ್ಲಿ ಪ್ರಸ್ತುತ ಅಸ್ಥಿತ್ವದಲ್ಲಿರುವ ಪರಿಶಿಷ್ಟ ಪಂಗಡಗಳ ಮೀಸಲಾತಿಗೆ ವ್ಯಾಪ್ತಿಗೆ ಕುರುಬ (Protest) ಜನಾಂಗವನ್ನು ಸೇರ್ಪಡೆ ಮಾಡಬೇಕೆಂಬ ಸರ್ಕಾರದ ನಿರ್ಧಾರವನ್ನು ಖಂಡಿಸಿ ಚಳ್ಳಕೆರೆ ತಾಲ್ಲೂಕು ನಾಯಕ ಸಮುದಾಯ ಸಾವಿರಾರು ಸಂಖ್ಯೆಯಲ್ಲಿ ಸೇರಿ ಸರ್ಕಾರದ ವಿರುದ್ದ ಧಿಕ್ಕಾರಕೂಗಿ ಪ್ರತಿಭಟನೆ ನಡೆಸಿದರು.

ಶ್ರೀವಾಲ್ಮೀಕಿ ಹೋರಾಟ ಸಮಿತಿ ನೇತೃತ್ವದಲ್ಲಿ ನಾಯಕ ಜನಾಂಗದ ಎಲ್ಲಾ ಪಕ್ಷಗಳ ದುರೀಣರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೋರಾಟಕ್ಕೆ ಸ್ಪೂರ್ತಿ ತುಂಬಿದರಲ್ಲದೆ, ನಾಯಕ ಸಮಾಜವೂ ಸಹ ಒಗ್ಗಟ್ಟಿನಲ್ಲಿದೆ ಎಂಬುವುದನ್ನು ನಿರೂಪಿಸಿದರು. ಸಮುದಾಯದ ಏಳಿಗೆಗೆ ಮಾರಕವಾಗುವ (Protest) ಯಾವುದೇ ಕಾನೂನು ತಂದರೂ ಸಹ ನಾಯಕ ಸಮುದಾಯ ಕೆಚ್ಚೆದ್ದೆಯ ಹೋರಾಟವನ್ನು ನಡೆಸುತ್ತದೆ ಎಂಬ ಸಂದೇಶವನ್ನು ಸರ್ಕಾರಕ್ಕೆ ನೀಡಲಾಯಿತು.
ಪ್ರಾರಂಭದಲ್ಲಿ ಚಿತ್ರದುರ್ಗ ರಸ್ತೆಯ ವಾಲ್ಮೀಕಿ ವೃತ್ತದಿಂದ ಪ್ರತಿಭಟನೆ ಮೆರವಣೆ ಆರಂಭವಾಯಿತು. ಮೆರವಣಿಗೆಯಲ್ಲಿ ಕಲಾತಂಡಗಳಲ್ಲದೆ, ಮ್ಯಾಸಬೇಡರ ಪಡೆಯೊಂದಿಗೆ ಮಹರ್ಷಿ ವಾಲ್ಮೀಕಿಯವರ ವೇಷತೊಟ್ಟು ಸಮುದಾಯದ ಮುಖಂಡರು ಪಾಲ್ಗೊಂಡಿದ್ದು ಎಲ್ಲರ ಗಮನಸೆಳೆಯಿತು.
ಮೆರವಣಿಗೆ ಸಂದರ್ಭದಲ್ಲಿ ಸಂಖ್ಯೆ ಕಡಿಮೆ ಇದ್ದರೂ ತಾಲ್ಲೂಕು ಕಚೇರಿಗೆ ಹೋಗುವಷ್ಟರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು. ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ನಾಯಕ ಸಮುದಾಯದ ಹಿರಿಯ ಮುಖಂಡ ಡಾ.ಡಿ.ಎನ್.ಮಂಜುನಾಥ ಮಾತನಾಡಿ, ರಾಜ್ಯದಲ್ಲಿ ನಾಯಕ ಸಮುದಾಯ ಬೇರೆ ಎಲ್ಲಾ ಸಮುದಾಯದೊಂದಿಗೆ ಗೌರವ, ವಿಶ್ವಾಸದೊಂದಿಗೆ ಬದುಕುತ್ತಿದೆ. ವಿಶೇಷವಾಗಿ ಕುರುಬ ಸಮುದಾಯ ಈ ಸಮುದಾಯಕ್ಕೆ ಹೆಚ್ಚು ಹತ್ತಿರವಾಗಿದೆ. ಆದರೆ, ಸರ್ಕಾರ ಮೀಸಲಾತಿ ಮೂಲಕ ಎರಡೂ ಸಮುದಾಯಗಳಲ್ಲಿ ಒಡಕನ್ನು ಹುಟ್ಟಿಸಲು ಯತ್ನಿಸುತ್ತಿದೆ ಎಂದರು.
ನಾಯಕ ಜನಾಂಗದ ಮುಖಂಡ ಹಾಗೂ ಪುರಸಭೆ ಮಾಜಿ ಸದಸ್ಯ ಪಿ.ತಿಪ್ಪೇಸ್ವಾಮಿ ಮಾತನಾಡಿ, ಯಾವುದೇ ಸರ್ಕಾರ ಜನಾಂಗಗಳ ಅಭಿವೃದ್ದಿಯನ್ನು ಕಾನೂನಾತ್ಮಕವಾಗಿ (Protest) ಮಾಡಬೇಕಿದೆ. ಎಲ್ಲಾ ಜನಾಂಗಗಳ ಹಕ್ಕು, ಕರ್ತವ್ಯಗಳಿಗೆ ಚ್ಯುತಿಯಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ನಾಯಕ ಸಮುದಾಯ ಯಾವ ಜನಾಂಗಕ್ಕೂ ತೊಂದರೆ ಕೊಡುವುದಿಲ್ಲ. ಆದರೂ ಸಹ ಈ ಜನಾಂಗದ ಮೇಲೆ ಸರ್ಕಾರ ಸವಾರಿಮಾಡಲು ಹೊರಟಿರುವುದು ಸರಿಯಲ್ಲವೆಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ.ಟಿ.ಶ್ರೀನಿವಾಸ್‌ಮಾತನಾಡಿ, ಸರ್ಕಾರ ಯಾವುದೇ ಕಾನೂನು ತಂದರೂ ಅದರಿಂದ ಜನಾಂಗದ ಅಭಿವೃದ್ದಿಯಾಗಬೇಕೆವಿನಃ ಜನಾಂಗದಲ್ಲಿ ಅಸಮದಾನ ಉಂಟಾಗಬಾರದು. ಆದರೆ, ಸರ್ಕಾರ ಇತ್ತೀಚೆಗೆ ಆತುರವಾಗಿ ಈ ನಿರ್ಧಾರ ಪ್ರಕಟಿಸಿದೆ. ಪ್ರಸ್ತುತ ಸರ್ಕಾರದಲ್ಲಿರುವ ಜನಾಂಗದ ಸಚಿವರು, ಶಾಸಕರು ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಸಮುದಾಯಕ್ಕೆ ನ್ಯಾಯವನ್ನು ದೊರಕಿಸಿಕೊಡಬೇಕೆಂದರು.
ಯುವಮುಖಂಡ ಸಂದೀಪ್ ಮಾತನಾಡಿ, ನಾಯಕ ಸಮುದಾಯದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆದರೆ, ಸರ್ಕಾರದ ಈ ನಿರ್ಧಾರ ಅನಗತ್ಯವಾಗಿದ್ದು, ಜನಾಂಗದ ಏಳಿಗೆಗೆ ಮಾರಕವಾಗಿದೆ. ಸರ್ಕಾರ ಈ ಕೂಡಲೇ ತನ್ನ ನಿರ್ಧಾರವನ್ನು ಬದಲಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ.ಜಯಪಾಲಯ್ಯ ಮಾತನಾಡಿ, ಸರ್ಕಾರದ ನಿರ್ಧಾರದಿಂದ ರಾಜ್ಯದೆಲ್ಲೆಡೆ ಜನಾಂಗದಲ್ಲಿ ಅಸಮದಾನ ಎದ್ದುಕಾಣುತ್ತಿದೆ. ಈಗಾಗಲೇ ಸರ್ಕಾರದ ವಿರುದ್ದ ನಾಯಕ ಸಮುದಾಯ ಸಿಡಿದು ನಿಂತಿದೆ. ಯಾವುದೇ ಕಾರಣಕ್ಕೂ ನಮ್ಮ ಮೀಸಲಾತಿಗೆ ಅನ್ಯಜಾತಿ ಸೇರ್ಪಡೆಯನ್ನು ನಾವು ವಿರೋಧಿಸುತ್ತೇವೆಂದರು.
ಪ್ರತಿಭಟನೆ ಉದ್ದೇಶಿಸಿ ನವೀನ್‌ನಾಯಕ, ಮಹಿಳಾ ಘಟಕದ ಅಧ್ಯಕ್ಷ ಯಶೋಧಮ್ಮ, ಸೌಭಾಗ್ಯಮ್ಮ, ಎಲ್‌ಐಸಿತಿಪ್ಪೇಸ್ವಾಮಿ, ಟಿ.ಮಂಜುನಾಥ, ಎಸ್.ಪಾಪೇಶ್‌ನಾಯಕ, ಡಾ.ರಾಮರಾಜ್ ಮುಂತಾದವರು ಮಾತನಾಡಿದರು. ಪ್ರತಿಭಟನೆಯ ನಂತರ ತಾಲ್ಲೂಕು ಕಚೇರಿಗೆ ಆಗಮಿಸಿ ತಹಶೀಲ್ಧಾರ್ ರೇಹಾನ್‌ಪಾಷಗೆ ಮನವಿ ಅರ್ಪಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ಧಾರ್ ರೇಹಾನ್‌ಪಾಷ ವಾಲ್ಮೀಕಿ ಹೋರಾಟ ಸಮಿತಿ ಮತ್ತು ಜನಾಂಗದ ವಿವಿಧ ರಾಜಕೀಯ ಪಕ್ಷದ ಮುಖಂಡರು (Protest) ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮುಂದಿನ ಆದೇಶಕ್ಕಾಗಿ ಕಳಿಸಿಕೊಡುವ ಭರವಸೆ ನೀಡಿದರು.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ | 05-10-2025
ಪ್ರತಿಭಟನೆಯಲ್ಲಿ ಜನಾಂಗದ ಮುಖಂಡರಾದ ಬಾಳೆಮಂಡಿರಾಮದಾಸ್, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಎನ್.ಓಬಳೇಶ್, ನಗರಸಭಾ ಸದಸ್ಯರಾದ ಕವಿತಾನಾಯಕಿ, ನಾಗಮಣಿ, ತಿಪ್ಪಕ್ಕ, ಕವಿತಾಬೋರಯ್ಯ, ಎಸ್.ಜಯಣ್ಣ, ಶಿವಕುಮಾರ್, ಪಾಲಮ್ಮ, ಸಿ.ಶ್ರೀನಿವಾಸ್, ಸುಮಭರಮಣ್ಣ, ಬಿ.ಟಿ.ರಮೇಶ್‌ಗೌಡ, ಹೊಯ್ಸಳಗೋವಿಂದ, ಮುಖಂಡರಾದ ಎಂ.ಚೇತನ್‌ಕುಮಾರ್, ದಳವಾಯಿಮೂರ್ತಿ, ಟಿ.ಜೆ.ವೆಂಕಟೇಶ್, ಸುರೇಶ್, ಕೆ.ಸೂರನಾಯಕ, ಡಾ.ಜಿ.ತಿಪ್ಪೇಸ್ವಾಮಿ, ದೊರೆಬೈಯಣ್ಣ, ವಕೀಲರಾದ ಪ್ರಭಾಕರ, ಬೋರಯ್ಯ, ದೊರೆನಾಗರಾಜು, ತಿಪ್ಪೇಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.
