Chitradurga news|Nammajana.com|10-10-2025
ನಮ್ಮಜನ.ಕಾ, ಚಳ್ಳಕೆರೆ: ತಾಲ್ಲೂಕಿನಾದ್ಯಂತ ಸೆ.27 ರಿಂದ (Challakere Rain) ಆರಂಭವಾಗಬೇಕಿದ್ದ ಹಸ್ತಮಳೆ ಒಂದು ದಿನವೂ ಬಾರದೆ ರೈತರ ಮುಖದಲ್ಲಿ ಕಳೆಇಲ್ಲದಂತೆ ಮಾಡಿತ್ತು. ಮಳೆಯ ಅಭಾವದಿಂದ ಕಂಗೆಟ್ಟ ರೈತ ತಮ್ಮ ಜಮೀನ ಬೆಳಗಳು ಉಳಿಯದ ಕಾರಣ ನಿರಾಶೆಗೆ ಜಾರಿದ್ದ. ಆದರೆ, ಹಸ್ತಮಳೆಯ ಅ.೧೦ಕ್ಕೆ ಕೊನೆಯಾಗಲಿದ್ದು, ಅ.೮ರ ರಾತ್ರಿ ತಾಲ್ಲೂಕಿನಾದ್ಯಂತ ಮಳೆ ನಿರೀಕ್ಷೆಗೂ ಮೀರಿದ ಆರ್ಭಟದಿಂದ ಮಳೆಯಾದುದ್ದಲ್ಲದೆ, ಅನೇಕ ಅವಘಡಗಳಿಗೂ ಕಾರಣವಾಗಿದೆ.

ಒಂದೇ ಹಂತದಲ್ಲಿ ತಾಲ್ಲೂಕಿನಾದ್ಯಂತ ಹಸ್ತಮಳೆ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿ ಒಟ್ಟು ೩೦೧.೧೦ ಎಂ.ಎAಮಳೆ ಕೇವಲ ನಾಲ್ಕೆöÊದು ಗಂಟೆಯಲ್ಲೇಯಾಗಿದೆ. ನಗರದ ಮಧ್ಯಭಾಗದಲ್ಲಿ ಹಾದುಹೋಗುವ ಹಳ್ಳ ತುಂಬಿದ್ದು, ರಹೀಂನಗರ, ಕಾಟಪ್ಪನಹಟ್ಟಿಗೊಲ್ಲರಹಟ್ಟಿಗೆ ಮನೆಗಳಿಗೆ ನೀರುನುಗ್ಗಿದ್ದಲ್ಲದೆ, ಪಾವಗಡ ರಸ್ತೆಯಲ್ಲಿ ರಸ್ತೆಸಂಚಾರವನ್ನು ಅಸ್ಥವ್ಯಸ್ಥಗೊಳಿಸಿತ್ತು.
ತುಂಬಿ ಹರಿಯುವ ಹಳ್ಳವನ್ನು ದಾಟಿ ಅಪಾಯಕ್ಕೆಸಿಲುಕದಂತೆ ಎಚ್ಚರಿಕೆವಹಿಸಿದ್ದ ಪೊಲೀಸರು ಹಳ್ಳದ ಎರಡೂ ಕಡೆಗೆ ಬ್ಯಾರಿಕೇಟ್ ಹಾಕಿಸಂಚಾರ ನಿಯಂತ್ರಿಸಿದರು. (Challakere Rain) ತಾಲ್ಲೂಕಿನ ನಗರಂಗೆರೆ ಕೆರೆ ಮತ್ತೊಮ್ಮೆ ತುಂಬಿ ವರ್ಷದಲ್ಲಿ ಎರಡು ಬಾರಿ ಕೋಡಿಬಿದ್ದಿದೆ.
ಕಳೆದ ಜೂನ್‌ತಿಂಗಳಲ್ಲಿ ಕೆರೆ ಕೋಡಿಬಿದ್ದಿದ್ದು ಮತ್ತೊಮ್ಮೆ ಅ.೮ರ ಮಳೆಯಿಂದ ಮತ್ತೊಮ್ಮೆ ನಗರಂಗೆರೆ ಕೆರೆ ಕೋಡಿಬಿದ್ದಿದೆ. ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದ ಹಿಂಭಾಗದ ಅಂಗನವಾಡಿ ಕೇಂದ್ರ ಬಳಿ ಇದ್ದ ಮರ ರಸ್ತೆಗೆ ಅಡ್ಡಲಾಗಿ ಬಿದ್ದು, ವಿದ್ಯುತ್ ಕಂಬದ ಮೇಲೆ ಬಿದ್ದು ವಿದ್ಯುತ್ ಕಂಬ ಮುರಿದು ಬಿದ್ದಿದೆ. ಹೌಸಿಂಗ್‌ಬೋರ್ಡ್ನಲ್ಲಿ ಗಾಳಿ, ಮಳೆಗೆ ಮರವೊಂದು ನಿವೃತ್ತ ಶಿಕ್ಷಕ ಈಶ್ವರಪ್ಪನವರ ಕಾರಿಗೆನ ಮೇಲೆ ಬಿದ್ದು ಕಾರು ಜಖಂಗೊಂಡಿದೆ.
ಕೂಡಲೇ ಅಲ್ಲಿನ ನಿವಾಸಿಗಳಾದ ವೈ.ಗಂಗಾದರ, ಪವನ್‌ಕುಮಾರ್, ಈಶ್ವರಪ್ಪನವರು ಪೌರಾಯುಕ್ತ, ಬೆಸ್ಕಾಂ ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯ ಸಿ.ಎಂ.ವಿಶುಕುಮಾರ್‌ಗೆ ದೂರವಾಣಿಕರೆ ಮಾಡಿ ಅಗತ್ಯಕ್ರಮ (Challakere Rain) ಕೈಗೊಳ್ಳುವ ನಿಟ್ಟಿನಲ್ಲಿ ನೆರವಾಗಿದ್ಧಾರೆ.
ಇದೇ ಮೊಟ್ಟಮೊದಲಬಾರಿಗೆ ಪಾವಗಡ ರಸ್ತೆಯ ಹಳ್ಳ ಭಾರಿಪ್ರಮಾಣದಲ್ಲಿ ಹರಿದ ಪರಿಣಾಮ ಈ ರಸ್ತೆಯಲ್ಲಿ ಯಾವುದೇ ವಾಹನ ನಡೆಸದಂತೆ ನಿಯಂತ್ರಿಸಲಾಗಿತ್ತು. ನಗರದ ಪಾವಗಡ ರಸ್ತೆಯಲ್ಲಿರುವ ಮೈನಿಂಗ್ ಡಂಪಿಂಗ್‌ಯಾರ್ಡ್ ಮಳೆನೀರಿನಿಂದ ತುಂಬಿ ಮೈನಿಂಗ್‌ಸಾಗಿಸುವ ಲಾರಿಗಳು ಮುಳುಗಿದ್ದವು. ಚಿತ್ರದುರ್ಗ ರಸ್ತೆಯ ಪ್ರವಾಸಿಮಂದಿರ ಬಳಿ ಇರುವ ಲೋಕೋಪಯೋಗಿ ಇಲಾಖೆ ಕ್ವಾಂಟ್ರಸ್‌ನಲ್ಲಿದ್ದ (Challakere Rain) ಮರವೊಂದು ಗಾಳಿಗೆ ಮನೆಯ ಮೇಲೆಬಿದ್ದಿದೆ.
ವಾಲ್ಮೀಕಿ ನಗರದ ಕುವೆಂಪು ಶಾಲೆಯ ಬಳಿರುವ ಗಿರಿಜಮ್ಮ ಎಂಬುವವರ ಮನೆಗೆ ಮಳೆ ನೀರು ಅಪಾರಪ್ರಮಾಣದಲ್ಲಿ ನುಗ್ಗಿದ್ದು ಮನೆಯ ಎಲ್ಲಾ ವಸ್ತುಗಳು ನೀರಿನಲ್ಲಿ ಮುಳುಗಿ ಲಕ್ಷಾಂತರ ರೂಪಾಯಿನಷ್ಟ ಸಂಭವಿಸಿದೆ.
ಬಳ್ಳಾರಿ ರಸ್ತೆಯ ಪುಲ್ಲಾರೆಡ್ಡಿ ಪೆಟ್ರೋಲ್‌ಬಂಕ್‌ಬಳಿ ಅಲ್ಲಿ ನೀರು ಹೊರಗೆ ಸಾಗಿಸಲು ಬಾರಿ ಪ್ರಮಾಣದ ಪೈಪ್ ಅಳವಡಿಸಿದ್ದು ಪೈಪ್‌ನಲ್ಲಿ ಹೂಳುತುಂಬಿ ನೀರು ಹರಿಯದೆ ವಾಪಸಾಗಿ ಇಡೀ ಪ್ರದೇಶ ಮಳೆನೀರಿನಿಂದ ತುಂಬಿತ್ತು. ಸುದ್ದಿತಿಳಿದ ಕೂಡಲೇ ತಹಶೀಲ್ಧಾರ್ ರೇಹಾನ್‌ಪಾಷ, ಪೌರಾಯುಕ್ತ ಜಗರೆಡ್ಡಿ, ನಗರಸಭೆ ಅಧಿಕಾರಿಗಳು ಪೈಪ್‌ನಲ್ಲಿದ್ದ ಹೂಳನ್ನು ತೆಗೆದ ಕಾರಣ ನೀರು ಸರಾಗವಾಗಿ ಹರಿಯಿತು.
ಇದನ್ನೂ ಓದಿ: Astrology | ಇಂದಿನ ರಾಶಿ ಭವಿಷ್ಯ, ಯಾರಿಗೆಲ್ಲ ಶುಭ, ಅಶುಭ
ವಾಲ್ಮೀಕಿ ನಗರದ ಕುವೆಂಪುಶಾಲೆಯ ಗೇಟ್‌ನಲ್ಲಿದ್ದ ಒಂದು ಮರ ಮುರಿದು ಬಿದ್ದರೆ ಮತ್ತೊಂದು ಮರ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ವಾಹನ ಮತ್ತು ಶಾಲಾ ಮಕ್ಕಳು ಓಡಾಡಲು (Challakere Rain) ತೊಂದರೆಯಾದ ಕಾರಣ ಕೂಡಲೇ ಶಾಲಾ ಆಡಳಿತಮಂಡಳಿ ಎರಡೂ ಮರಗಳನ್ನು ತೆರವುಗೊಳಿಸಿ ವಿದ್ಯಾರ್ಥಿಗಳು ಮತ್ತು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
