Chitradurga News | Nammajana.com | 2-5-2024
ನಮ್ಮಜನ.ಕಾಂ.ಚಿತ್ರದುರ್ಗ:ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ ಕಾರಣ ಸಾರ್ವಜನಿಕರು ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಕೆಲವೊಂದು ಉಪಾಯ ಅನುಸರಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್ ನಾಗಸಮುದ್ರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಏಕೆ ಸೂರ್ಯನ ತಾಪ ಹೆಚ್ಚಾಗಿರುತ್ತದೆ ?
ಆಯುರ್ವೇದದಲ್ಲಿ ಈ ಕಾಲವನ್ನು ಉತ್ತರಾಯಣದ ಗ್ರೀಷ್ಮ ಋತು ಎಂದು ಕರೆದಿದ್ದು ಈ ಕಾಲದಲ್ಲಿ ಸೂರ್ಯನ ತಾಪ ಹೆಚ್ಚಾಗಿರುತ್ತದೆ ಹಾಗೂ ವಾತಾವರಣದಲ್ಲಿ ಒಣಹಾವೆ ಇರುತ್ತದೆ. ಈ ಕಾರಣದಿಂದ ಮನುಷ್ಯನ ಶಕ್ತಿ ಸಹಜವಾಗಿ ಕುಂದು ತತ್ಪರಿಣಾಮವಾಗಿ ಜ್ವರ, ಸುಸ್ತು, ಚರ್ಮದ ಸೋಂಕುಗಳು, ತಲೆನೋವು ಇತ್ಯಾದಿ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ.
ವಿಶೇಷವಾಗಿ ಮಕ್ಕಳಲ್ಲಿ ಈ ತೀವ್ರವಾದ ಬಿಸಿಲು ಮತ್ತು ಉಷ್ಣಾಂಶ ಹೆಚ್ಚು ಅನಾರೋಗ್ಯವನ್ನು ಉಂಟುಮಾಡುತ್ತದೆ.ಸಾರ್ವಜನಿಕರು ಕೆಲವು ಸರಳ ಉಪಾಯಗಳಿಂದ ಬಿಸಿಲ ಬೇಗೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾಗಿದೆ.
ಬೇಸಿಗೆ ಕಾಲದಲ್ಲಿ ಉತ್ತಮ ಆರೋಗ್ಯಕ್ಕೆ ಆಹಾರಗಳು
ದ್ರವಾಂಶ ಹೆಚ್ಚಾಗಿರುವಂತಹ ಸೊಪ್ಪು, ತರಕಾರಿ, ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಿ, ಇವು ದೇಹದಲ್ಲಿಯ ನೀರಿನ ಅಂಶವನ್ನು ಸಮತೋಲನದಲ್ಲಿಡಲು ಸಹಾಯಕ. ಮೇಲಿಂದ ಮೇಲೆ ಮಜ್ಜಿಗೆ, ತಂಪಾದ ಮಡಿಕೆಯ ನೀರು ಇತ್ಯಾದಿ ಆರೋಗ್ಯಕರ ಪಾನೀಯಗಳನ್ನು ಸೇವಿಸಿ. ನೈಸರ್ಗಿಕವಾಗಿ ಸಿಹಿಯಾದ ಹಣ್ಣುಗಳನ್ನು ಹಣ್ಣಿನ ರಸವನ್ನು, ಸರಳವಾಗಿ ಜೀರ್ಣವಾಗುವ ಆಹಾರವನ್ನು ಹಾಗೂ ಮೇಲಿಂದ ಮೇಲೆ ಮಜ್ಜಿಗೆ, ಆರೋಗ್ಯದಾಯಕ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ ಸೇವಿಸುವುದು ಉತ್ತಮ. ಹೆಚ್ಚು ಮಸಾಲೆಯುಕ್ತ, ಹುರಿದ, ಕರಿದ ಆಹಾರ ಸೇವನೆ ಬೇಡ.
ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಅಗತ್ಯ ಕ್ರಮಗಳು
ಛತ್ರಿ ಅಥವಾ ತಲೆ ಮೇಲೆ ವಸ್ತ್ರವನ್ನು ಉಪಯೋಗಿಸಿ. ಹತ್ತಿ ಬಟ್ಟೆಗಳನ್ನು ಧರಿಸುವುದು ಸೂಕ್ತ. ದೇಹಕ್ಕೆ ತಂಪನ್ನು ನೀಡುವಂತಹ ಖರ್ಜೂರ, ಒಣದ್ರಾಕ್ಷಿ, ಸಾಂಪ್ರದಾಯಕವಾಗಿ ತಯಾರಿಸಿದ ತುಪ್ಪ, ಹಾಲಿನಂತಹ ಶಕ್ತಿದಾಯಕ ಆಹಾರ ಸೇವಿಸಬೇಕು. ಆರೋಗ್ಯದಾಯಕ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ ಸೇವಿಸಿ. ಹಣ್ಣಿನ ರಸಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.
ಇದನ್ನೂ ಓದಿ: ಅಬಕಾರಿ ಡಿಸಿ ವಿರುದ್ಧದ ಎಸಿಬಿ ಕೇಸ್ ವಜಾ
ತೀವ್ರವಾದ ಬಿಸಿಲಿಗೆ ಹೊರಗೆ ಹೋಗದೆ ಮುಂಜಾಗ್ರತೆ ಕೈಗೊಂಡು ತಮ್ಮ ಆರೋಗ್ಯ ಸಂರಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್ ನಾಗಸಮುದ್ರ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252