
Chitradurga news | nammajana.com | 20-5-2024
ನಮ್ಮಜನ.ಕಾಂ, ಚಳ್ಳಕೆರೆ: ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆಜ್ಞಾನದ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಬೆಳಕು ನೀಡಿದ ಕೆಲವೇ ಕೆಲವು ಮಹಾನೀಯರಲ್ಲಿ ಗೌತಮ ಬುದ್ದರು(Gautama Buddha)ಒಬ್ಬರು, ತಮ್ಮ ರಾಜವೈಭೋಗಗಳನ್ನು ತೊರೆದು ಮಾನವೀಯ ಗುಣಗಳನ್ನು ಬಿತ್ತುವ ನಿಟ್ಟಿನಲ್ಲಿ ಜೈನ ಧರ್ಮವನ್ನು ಸ್ವೀಕರಿಸಿ ಗೌತಮಬುದ್ದರಾದರು, ಬುದ್ದವೆಂದರೆ ಜ್ಞಾನದ ಸಂಕೇತ ಎಂದು ಹಿರಿಯ ಸಂಶೋಧಕ ಡಾ.ಬಿ.ರಾಜಶೇಖಪ್ಪ ತಿಳಿಸಿದರು.
ಭಾನುವಾರ ನಗರದ ಅವನಿ ಖಾಸಗಿ ಅತಿಥಿ ಗೃಹದಲ್ಲಿ ಲೇಖಕ, ಚಿಂತಕ ಜಿ.ವಿ.ಆನಂದಮೂರ್ತಿ ರಚಿಸಿದ ಬುದ್ದನ. (Gautama Buddha) ಕಥೆಗಳು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯ ಕ್ಷೇತ್ರಕ್ಕೆ ಜಿ.ವಿ.ಆನಂದಮೂರ್ತಿ ತಮ್ಮದೇ ವಿಶೇಷ ಛಾಪು (Gautama Buddha)
ಕಳೆದ ಹಲವಾರು ದಶಕಗಳಿಂದ ಜಿ.ವಿ.ಆನಂದಮೂರ್ತಿ ಅವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೆ ವಿಶೇಷ ಛಾಪು ಉಂಟು ಮಾಡಿದ್ದಾರೆ. ಇಂದು ಅವರ ಬರವಣಿಗೆಯಲ್ಲಿ ಮೂಡಿಬಂದ ಬುದ್ದ ಕಥೆಗಳು ಪುಸ್ತಕ ಅವಲೋಕಿಸಿದರೆ ಬುದ್ದ ಈ ನಾಡಿಗೆ ಸಲ್ಲಿಸಿದ ಅಪಾರ ಸೇವೆಯ ಬಗ್ಗೆ ಎಲ್ಲರೂ ಚಕಿತಗೊಳ್ಳುತ್ತಾರೆ, ಕಾರಣ ವೈಭೋಗದ ಜೀವನವನ್ನು ಕೈಬಿಟ್ಟು ಸಾಮಾನ್ಯನಂತೆ ಜ್ಞಾನದ ಮೆಟ್ಟಿನಲ್ಲು ಏರಿದ ಮೊಟ್ಟಮೊದಲ ಮಹಾನ್ ವ್ಯಕ್ತಿ ಎಂದರೆ ಗೌತಮಬುದ್ದ (Gautama Buddha)
ಮಾತ್ರ, ನಾವೆಲ್ಲರೂ ಗೌತಮಬುದ್ದರ ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆಯೋಣವೆಂದರು.
ವೈಶಿಷ್ಟ್ಯ ವ್ಯಕ್ತಿಗಳಿಂದ ಸಮಾಜ ಬದಲಾವಣೆ ಸಾಧ್ಯ (Gautama Buddha)
ಹಿರಿಯ ಪತ್ರಕರ್ತ ಹಾಗೂ ಸಿನಿಮಾ ಇತಿಹಾಸಕಾರ ದೊಡ್ಡಹುಲ್ಲೂರು ರುಕ್ಕೋಜಿ ಮಾತನಾಡಿ ಸಮಾಜದಲ್ಲಿ ಹಲವಾರು ಬದಲಾವಣೆಗಳನ್ನು ಕಾಣಲು ಕೆಲವು ವೈಶಿಷ್ಟಪೂರ್ಣ ವ್ಯಕ್ತಿಗಳು ಕಾರಣಕರ್ತರಾಗಿದ್ಧಾರೆ. ಯಾವುದೇ ಸ್ವಾರ್ಥವನ್ನು ಬಯಸದೆ ನಿಸ್ವಾರ್ಥದಿಂದ ಸಮಾಜದ ಉನ್ನತ್ತಿಗಾಗಿ ಶ್ರಮಿಸಿದ್ಧಾರೆ. ಪ್ರತಿಯೊಬ್ಬ ವ್ಯಕ್ತಿಯನ್ನು ಬದಲಾವಣೆ ಮಾಡುವುದು ಕಷ್ಟ ಸಾಧ್ಯ, ಆದರೆ ಗೌತಮಬದ್ದರು (Gautama Buddha)ಮಾತ್ರ ಅವರದ್ದೇಯಾದ ತತ್ವಾದರ್ಶಗಳಿಂದ ಸಮಾಜದ ಬದಲಾವಣೆಗೆ ನಾಂದಿಯಾಡಿದರು ಎಂದರು.
ಇದನ್ನೂ ಓದಿ:Dina Bhavishya: ಇಂದಿನ ರಾಶಿ ಭವಿಷ್ಯ 20-5-2024
ಕಾರ್ಯಕ್ರಮದಲ್ಲಿ ಭಾಗವಹಿಸಿದವರು
ಖ್ಯಾತವಿಚಾರವಾದಿ ಡಾ.ಎಚ್.ಆರ್.ಸ್ವಾಮಿ, ಲೇಖಕ ಜಿ.ವಿ.ಆನಂದಮೂರ್ತಿ, ಎನ್.ಆರ್.ತಿಪ್ಪೇಸ್ವಾಮಿ, ನಿಸರ್ಗಗೋವಿಂದರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
