Chitradurga news |nammajana.com |27-5-2024
ನಮ್ಮಜನ.ಕಾಂ, ಚಿತ್ರದುರ್ಗ: KSRTC ಬಸ್ ಹರಿದು ಕುರಿಗಳನ್ನು ಒಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸೇರಿ 21 ಕುರಿಗಳು (Chitradurga accident) ಸ್ಥಳದಲೇ ಮೃತಪಟ್ಟಿವೆ.

ಚಿತ್ರದುರ್ಗ (Chitradurga accident) ತಾಲೂಕಿನ ಜಾನುಕೊಂಡ ಮುಖ್ಯ ರಸ್ತೆಯಲ್ಲಿ ಈರಜ್ಜನಹಟ್ಟಿ ಗೇಟ್ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ: VV Sagara water level: ವಿವಿ ಸಾಗರದ ಮೇ 27ರ ನೀರಿನ ಮಟ್ಟ
ಚಳ್ಳಕೆರೆ ತಾಲೂಕು ನೇಲಗೆತ್ತನಹಟ್ಟಿ ಗ್ರಾಮದ ವಾಸಿ ರಾಜಪ್ಪ (30) ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಕುರಿಗಾಯಿ ತಿಪ್ಪಣ್ಣ ಗಂಭೀರವಾಗಿ ಗಾಯಗೊಂಡು ಚಿತ್ರದುರ್ಗ(Chitradurga accident) ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಳೆ ಇಲ್ಲದೆ ಮೇವಿಗಾಗಿ ಹೋದ ವ್ಯಕ್ತಿ ಮನೆ ಸೇರಲಿಲ್ಲ
ಮಳೆ ಇಲ್ಲದೆ ಮೇವು, ನೀರಿಗೆ ಸಮಸ್ಯೆ ಆಗಿದ್ದ ಕಾರಣಕ್ಕೆ ಚನ್ನಗಿರಿ ಭಾಗಕ್ಕೆ ನೆಲಗೇತನಹಟ್ಟಿಯಿಂದ ಕುರಿ ಮೇಯಿಸಲು ಹೋಗಿದ್ದರು. ಕಳೆದ ಹತ್ತು ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ವಾಪಾಸು ಊರಿಗೆ ಮರಳುತ್ತಿದ್ದಾಗ ಈ ಅವಘಡ (Chitradurga accident) ಸಂಭವಿಸಿದೆ.
ಇದನ್ನೂ ಓದಿ: LAKKURU ANANDA: ಲಕ್ಕೂರ ಆನಂದರ ಸಾಹಿತ್ಯ ಕೃಷಿ ನಾಡಿಗೆ ಪರಿಚಯಿಸಬೇಕಿದೆ: ಹುಲಿಕುಂಟೆ ಮೂರ್ತಿ
ಎರಡು ಲಕ್ಷ ಮೌಲ್ಯದ ಕುರಿ
ಸುಮಾರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ 21 ಕುರಿಗಳು ಈರಜ್ಜನಹಟ್ಟಿ ರಸ್ತೆ ಬದಿಯಲ್ಲಿವೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು KSRTC ಬಸ್ ಪೊಲೀಸ್ ಠಾಣೆಯಲ್ಲಿದೆ.
