
Chitradurga news |nammajana.com|29-5-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಇವಿಎಂ (EVM) ಮತ ಎಣಿಕೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮೊದಲ ಹಂತದ ತರಬೇತಿ ಕಾರ್ಯಾಗಾರ ನಡೆಯಿತು.
ಬೆಳಿಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂ ತೆರವು ಓಪನ್ (EVM)
ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ ಲೋಕಸಭಾ ಚುನಾವಣೆಯ ಮತ ಎಣಿಕೆಯು (EVM) ಜೂನ್ 4ರಂದು ನಡೆಯಲಿದ್ದು, ಅಂದು ಬೆಳಿಗ್ಗೆ 6ಕ್ಕೆ ಎಲ್ಲಾ ಮತ ಎಣಿಕೆ ಸಿಬ್ಬಂದಿಯವರು ಮತ ಎಣಿಕೆ ಕೇಂದ್ರಕ್ಕೆ ಗುರುತಿನ ಪತ್ರ, ಆದೇಶ ಪ್ರತಿಯೊಂದಿಗೆ ಹಾಜರಾಗಬೇಕು. ಬೆಳಿಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂ ತೆರವು ಮಾಡಲಾಗುತ್ತದೆ.

ಪ್ರತಿ ವಿಧಾನ ಸಭಾ ಸೆಗ್ಮೆಂಟ್‍ನ ಕೊಠಡಿಗೆ 14 ತಂಡ (EVM)
ತದನಂತರ ಪ್ರತಿ ವಿಧಾನಸಭಾ ಸೆಗ್ಮೆಂಟ್‍ನ ಕೊಠಡಿಯನ್ನು ಸಹಾಯಕ ಚುನಾವಣಾಧಿಕಾರಿಗಳ ಅಧೀನದಲ್ಲಿ 14 ತಂಡಗಳನ್ನು ತೊಡಗಿಸಲಾಗುತ್ತದೆ. ಪ್ರತಿ ಎರಡು ತಂಡಗಳು ರಿಸರ್ವ್ ತಂಡಗಳಾಗಿರುತ್ತವೆ. ಪ್ರತಿ ಸುತ್ತಿನ ಮತ ಎಣಿಕೆಯಾದ ನಂತರ ಸಹಾಯಕ ಚುನಾವಣಾಧಿಕಾರಿಗಳು ಅಂಕಿಅಂಶಗಳನ್ನು ಕ್ರೂಢೀಕರಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Dina Bhavishya: ಇಂದಿನ ದಿನ ಭವಿಷ್ಯ 29-5-2024
ತರಬೇತಿಯಲ್ಲಿ ಭಾಗವಹಿಸಿದ ಅಧಿಕ ಲರಿಗಳು
ಈ ಸಂದರ್ಭದಲ್ಲಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಬಸವನಗೌಡ ಕೊಟೂರ, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಬಿ.ಆನಂದ್, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಎಂ.ಕಾರ್ತಿಕ್, ಹಿರಿಯೂರು ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಹೆಚ್.ಎನ್.ಶಿವೇಗೌಡ, ಹೊಸದುರ್ಗ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಂ.ಮಹೇಂದ್ರ ಕುಮಾರ್, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ವಿವೇಕಾನಂದ, ಸಿರಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ಡಾ.ಜೆ.ಜಿ.ದತ್ತಾತ್ರೇಯ, ಪಾವಗಡ ತಹಶೀಲ್ದಾರ್ ಎನ್.ಜಿ.ಸಂತೋಷ್ ಕುಮಾರ್ ಇವಿಎಂ (EVM) ಎಣಿಕೆ ತರಬೇತಿಯಲ್ಲಿ ಇದ್ದರು.