Chitradurga news|nammajana.com|11-6-2024
ನಮ್ಮಜನ.ಕಾಂ, ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ (Renukaswamy murder) ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅರೆಸ್ಟ್ ಆಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಪ್ರತಿಕ್ರಿಯೆ ನೀಡಿದ್ದು ಅತ್ಯಂತ ಹೇಯ ಕೃತ್ಯ ದರ್ಶನ್ ಮತ್ತು ತಂಡ ಮಾಡಿದೆ. ಕೇವಲ ಒಂದು ಸಮಾಜದ ವ್ಯಕ್ತಿ ಕೊಲೆಯಲ್ಲ, ಮಾನವೀಯತೆ, ಮನುಷ್ಯತ್ವದ ಕೊಲೆಯಾಗಿದೆ. ಅವನು ತಪ್ಪು ಮಾಡಿದ್ರೆ ಶಿಕ್ಷೆ ನೀಡಲು ನ್ಯಾಯಾಲಯ ಇತ್ತು. ಕಾನೂನು ಕೈಗೆ ತೆಗೆದುಕೊಂಡ ಕೃತ್ಯ ಎಸಗಿದ್ದು ತಕ್ಕ ಶಿಕ್ಷೆ ಇವರಿಗೆ ಆಗಬೇಕಿದ್ದು ಪೊಲೀಸರು ತಕ್ಷಣ ದರ್ಶನ್ ಅವರನ್ನ ಅರೆಸ್ಟ್ (Renukaswamy murder) ಮಾಡಿದ್ದಕ್ಕೆ ಧನ್ಯವಾದಗಳು ಅರ್ಪಿಸಿದ್ದು ನ್ಯಾಯಯುತ ತನಿಖೆ ಆಗಬೇಕು.
ಅನ್ಯಾಯಕ್ಕೆ ಅವಕಾಶ ನೀಡಬಾರ್ದು.ನಟ ದರ್ಶನ್ ನೇರವಾಗಿ ಭಾಗಿಯಾಗಿದ್ದು, ದೊಡ್ಡ ಮಟ್ಟದಲ್ಲಿ ತನಿಖೆ ಆಗಬೇಕು, ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕಿದೆ ಹಾಗೂ ಸರ್ಕಾರ ವಿಶೇಷ ತಂಡ ರಚನೆ ಮಾಡಬೇಕು. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಜೊತೆಗೆ ನಾವು ಸಮಾಜದ ನೇತೃತ್ವದಲ್ಲಿ ನಾಳೆ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಪ್ರಸಿದ್ದ ನಟನಾಗಿ ಈ ವರ್ತನೆ ಸರಿಯಲ್ಲ: ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ (Renukaswamy murder)
ರೇಣುಕಾಸ್ವಾಮಿ ಕೊಲೆ ಕೇಸ್ ಗೆ (Renukaswamy murder) ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ದಕ್ಷಿಣ ಭಾರತದಲ್ಲಿ ಪ್ರಸಿದ್ದ ನಟನಾಗಿ ಈ ರೀತಿ ವರ್ತನೆ ಆಶ್ಚರ್ಯ ಆಯ್ತು. ಅನುಯಾಯಿಗಳ ಮೂಲಕ ಈತರ ಮಾಡಿದ್ದಾರೆ. ಕಾನೂನು ಪ್ರಕಾರ ಕ್ರಮ ಜರುಗಿಬೇಕಿತ್ತು. ಉತ್ತರ ಭಾರತದ ಕೃತ್ಯ ಎಸಗಿದ್ದಾರೆ. ಜನಪ್ರಿಯ ನಟ ದರ್ಶನ್ ಈ ರೀತಿ ಮಾಡಿದ್ದು ತಪ್ಪು, ರೇಣುಕಾಸ್ವಾಮಿ ಹುಡುಗ ಮದುವೆಯಾಗಿ ಒಂದು ವರ್ಷ ಆಗಿಲ್ಲ ಕೊಲೆ ಆಗಿರುವುದು ನೋವಿನ ಸಂಗತಿಯಾಗಿದ್ದು ತಕ್ಕ ಶಿಕ್ಷೆ ಆಗಬೇಕಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252