Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Film Chamber Association visit Chitradurga: ದರ್ಶನ್ ಅವರನ್ನು ನಟನೆಯಿಂದ ಬ್ಯಾನ್ ಬಗ್ಗೆ ಮುಂದಿನ ದಿನದಲ್ಲಿ ತಿರ್ಮಾನ | ಅಧ್ಯಕ್ಷ ಎನ್.ಎಂ.ಸುರೇಶ್
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Film Chamber Association visit Chitradurga: ದರ್ಶನ್ ಅವರನ್ನು ನಟನೆಯಿಂದ ಬ್ಯಾನ್ ಬಗ್ಗೆ ಮುಂದಿನ ದಿನದಲ್ಲಿ ತಿರ್ಮಾನ | ಅಧ್ಯಕ್ಷ ಎನ್.ಎಂ.ಸುರೇಶ್
ಇಂದಿನ ಸುದ್ದಿ

Film Chamber Association visit Chitradurga: ದರ್ಶನ್ ಅವರನ್ನು ನಟನೆಯಿಂದ ಬ್ಯಾನ್ ಬಗ್ಗೆ ಮುಂದಿನ ದಿನದಲ್ಲಿ ತಿರ್ಮಾನ | ಅಧ್ಯಕ್ಷ ಎನ್.ಎಂ.ಸುರೇಶ್

Editor Nammajana
Last updated: 15 June 2024 10:21
By Editor Nammajana 2 Min Read
Share
SHARE

Chitradurga news|nammajana.com|15-6-2024

ನಮ್ಮಜನ.ಕಾಂ, ಚಿತ್ರದುರ್ಗ: ಯಾರು ತಪ್ಪು ಮಾಡಿದರು ಅದು ತಪ್ಪೇ ದೊಡ್ಡ ವ್ಯಕ್ತಿ , ಚಿಕ್ಕ ವ್ಯಕ್ತಿ ಎಂಬ ಪ್ರಶ್ನೆ ಇಲ್ಲ, ಕಾನೂನಿಗೆ ಯಾರು ದೊಡ್ಟವರಲ್ಲ, ನಾವು ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ಹೇಳಿದರು.

ನಗರದ ಬಿಗ್ ಬಾಸ್ ಹೋಟೇಲ್ ನಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ (Film Chamber Association visit Chitradurga) ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಐತಿಹಾಸಿಕ ಚಿತ್ರದುರ್ಗದಲ್ಲಿ ಈ ರೀತಿಯ ಪತ್ರಿಕಾಗೋಷ್ಠಿ ನಡೆಸುತ್ತಿರುವುದು ದುಃಖ ತಂದಿದೆ. ಚಿತ್ರದುರ್ಗ ನಗರದ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ  ಧೈರ್ಯ ತುಂಬಲು ಬಂದಿದ್ದೇವೆ.

ಚಲನಚಿತ್ರ ಮಂಡಳಿಯಿಂದ ದರ್ಶನ್ ಅವರನ್ನು ಬ್ಯಾನ್ ಮಾಡುವುದು ನಮ್ಮ ಕೈಯಲ್ಲಿ ಇಲ್ಲ, ಆದರು ಕಲಾವಿದರ ಸಂಘದ ಜೊತೆ ಮಾತನಾಡಿ ತಿರ್ಮಾನ ಕೈಗೊಳ್ಳುತ್ತೇವೆ.

ಚಿತ್ರರಂಗದಲ್ಲಿ ಕಾರ್ಮಿಕರು ಬಗ್ಗೆ ಚಿಂತನೆಯನ್ನು ಮಾಡಬೇಕಿದೆ. ಯಾವುದೇ ತಿರ್ಮಾನಕ್ಕೆ ಮುಂದಿನ ಎಲ್ಲಾ ಪರಿಣಾಮವನ್ನು ಯೋಚನೆ ಮಾಡುತ್ತೇವೆ. ಒಟ್ಟು ಐದು ಲಕ್ಷ ಪರಿಹಾರ ನೀಡುತ್ತೇವೆ. ಕುಟುಂಬಕ್ಕೆ ಯಾವುದಾದರೂ ಒಂದು ಶಾಶ್ವತ ಪರಿಹಾರ ಒದಗಿಸುತ್ತೇನೆ.

ದರ್ಶನ್ ಅವರಿಂದ ಚಿತ್ರರಂಗದ ಚಲನಚಿತ್ರ ಮಂಡಳಿಯನ್ನು ದೂಷಣೆ ಮಾಡಬೇಡಿ.  ವಾಣಿಜ್ಯ ಮಂಡಳಿ ಎಲ್ಲಾ ಸಮಯದಲ್ಲಿ  ಕಷ್ಟದಲ್ಲಿ ಸ್ಪಂದಿಸುವ ಕೆಲಸ ಮಾಡಿದ್ದು  ಮುಂದಿನ ದಿನಗಳಲ್ಲಿ  ಉತ್ತಮ‌ ಕೆಲಸಕ್ಕೆ ಚಲನಚಿತ್ರ ಮಂಡಳಿ ಬೆನ್ನೆಲುಬಾಗಿರುತ್ತದೆ ಎಂದು ತಿಳಿಸಿದರು‌.

ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಅವರು (Film Chamber Association visit Chitradurga) ಮಾತನಾಡಿ ಈ ನಾಡು ಜಲ‌ ನೆಲದ ರಕ್ಷಣೆಗಾಗಿ ಹೋರಟ ಮಾಡಿದ್ದು ನನಗೆ ಸಂತೋಷ ತಂದಿದೆ. ನಾವೆಲ್ಲರೂ ಬಂದಿರುವುದು ರೇಣುಕಾಸ್ವಾಮಿ ಕುಟುಂಬಕ್ಕೆ ಧೈರ್ಯ ತುಂಬಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಸಂದೇಶಕ್ಕೆ ಬಂದಿದ್ದೇವೆ. ಯಾವುದೇ ಕಾರಣಕ್ಕೂ ನಾವು ರಾಜೀ ಸೂತ್ರಕ್ಕೆ ಬಂದಿದ್ದೇವೆ.

ಮನುಷ್ಯ ತಪ್ಪು ಮಾಡುವುದು ಸಹಜ ಆದರೆ ತಪ್ಪು ಈ ರೀತಿಯ ಘಟನೆ ನಡೆದಿರುವುದಕ್ಕೆ ನೇರವಾಗಿ ಚಿತ್ರರಂಗದ ಒಬ್ಬ ವ್ಯಕ್ತಿ ಮಾತ್ರ ಹೊಣೆಯಲ್ಲ, ಮುಂದಿನ ದಿನಗಳಲ್ಲಿ  ರೇಣುಕಾಸ್ವಾಮಿ ಕುಟುಂಬದ ಜೊತೆ ನಾವು ಇರುತ್ತೇವೆ ಎಂಬ ಅಭಯ ನೀಡಿದ್ದೇನೆ.  ರಾಜ್, ಅಂಬರೀಶ್, ವಿಷ್ಣು, ಶಂಕರ್ನಾಗ್, ಅನಂತ್ ನಾಗ್ ಅವರಂತಹ ಕಾಲ ಈಗ ಇಲ್ಲ. ನಮ್ಮ ನಾಯಕ ನಟರು ಏಕೆ ದಾರಿ ತಪ್ಪುತ್ತಿದ್ದಾರೆ ತಿಳಿಯುತ್ತಿಲ್ಲ.

ಕಾನೂನಿಗಿಂತ ಯಾರು ದೊಡ್ಡವರಲ್ಲ, ಸರ್ಕಾರ ಮತ್ತು ಪೋಲಿಸ್ ಇಲಾಖೆ ಉತ್ತಮವಾಗಿ ತನಿಖೆ ನಡೆಸುತ್ತಿದೆ. ಯಾರ ಮುಲಾಜಿಗೆ ಒಳಗಾಗುವುದು ಬೇಡ, ಯಾರೋ ಮಾಡಿದ ತಪ್ಪಿಗೆ ಎಲ್ಲಾರೂ ಹೊಣೆಯಾಗುವುದು ಸಾಧ್ಯವಿಲ್ಲ. ರೇಣುಕಾಸ್ವಾಮಿ ಅವರ ಹೆಂಡತಿ ಮತ್ತು ತಾಯಿ ಇಬ್ಬರನ್ನು ನೋಡಿ ಮನ ಕುಲುಕುತ್ತಿದೆ ಎಂದರು.

ಇದನ್ನೂ ಓದಿ: Renukaswamy Murder Case: ಮಗನ ಬಂಧನದ ಸುದ್ದಿ ಟಿವಿ ಯಲ್ಲಿ ನೋಡಿ ಕುಸಿದು ಬಿದ್ದು ತಂದೆ ಸಾವು

ನಿರ್ಮಾಪಕ ಸಂಘದ ಅಧ್ಯಕ್ಷ ಬಾಣಕರ್ ಮಾತನಾಡಿ ಶಾಮನೂರು ಶಿವಶಂಕರಪ್ಪ ಅವರ ಬಳಿ ಮಾತನಾಡಿದ್ದ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸರ್ಕಾರಿ ಕೆಲಸವನ್ನು ಸಹ ಕೊಡಿಸುವ ಭರವಸೆ ನೀಡಿದ್ದಾರೆ. ಈ ಪ್ರಕರಣಕ್ಕೆ ಚಿತ್ರರಂಗ ಕ್ಷಮೆ ಕೇಳುತ್ತದೆ‌ ಎಂದರು‌.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ, (Film Chamber Association visit Chitradurga) ಕೆ.ವಿ.ಚಂದ್ರಶೇಖರ್, ಜಿ.ವೆಂಕಟೇಶ್, ಬಾಮ ಗಿರೀಶ್, ರಾಮಕೃಷ್ಣ, ತುಶಾಲ್, ಸಿದ್ದರಾಜು, ಸುದರ್ಶನ್, ಕೆಂಪಣ್ಣ , ಜಯಸಿಂಹ ಮುಸರಿ, ಉಮೇಶ್ ಬಾಣಕರ್, ಕುಮಾರ್, ಬಿ.ಕಾಂತರಾಜ್ ಇದ್ದರು.

You Might Also Like

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

TAGGED:ChitradurgaChitradurga NewsFilm Chamber Associationfive lakh compensationhome visitKannada Newskannada suddiNammajana.comRenukaswamyVisitಐದು ಲಕ್ಷ ಪರಿಹಾರಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗನಮ್ಮಜನ.ಕಾಂಫಿಲಂ ಚೇಂಬರ್ ಅಸೋಷಿಯೇಷನ್ಭೇಟಿಮನೆಗೆ ಭೇಟಿರೇಣುಕಾಸ್ವಾಮಿ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Adarsh ​​Vidyalaya: ಆದರ್ಶ ವಿದ್ಯಾಲಯ ದಾಖಲಾತಿ | ಪ್ರವೇಶ ಪರೀಕ್ಷೆ ಮುಂದೂಡಿಕೆ
Next Article Chitradurga: ಪರಿಸರ ಸಂರಕ್ಷಣೆ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ: ADC ಬಿ.ಟಿ.ಕುಮಾರಸ್ವಾಮಿ ಕರೆ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?