Chitradurga news |nammajana.com|20-6-2023
ನಮ್ಮಜನ.ಕಾಂ, ಹೊಸದುರ್ಗ: ದೇವಸ್ಥಾನದ ಹುಂಡಿಗೆ ಹಾಕಿದ ಹಣವನ್ನು ಭಕ್ತರ ಅಭಿವೃದ್ಧಿಗಾಗಿ ವಿನಯೋಗಿಸುತ್ತಿರುವ ಏಕೈಕ ಧಾರ್ಮಿಕ ಶ್ರದ್ಧಾ ಕೇಂದ್ರವೆಂದರೆ ಅದು ಧರ್ಮಸ್ಥಳ (Dharmasthala) ರಾಜ್ಯದ ಮೂಲೆ ಮೂಲೆಗಳಲ್ಲಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನ ಮಾಡುತ್ತಾ ಬಂದಿರುವ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕನ್ನಡ ನಾಡಿನ ಹೆಮ್ಮೆಯ ಸಂಕೇತ ಎಂದು ಸದ್ಗುರು ಆಯುರ್ವೇದ ಸಂಸ್ಥೆಯ ಮಾಲೀಕ ಉದ್ಯಮಿ ಡಿ.ಎಸ್.ಪ್ರದೀಪ್ ತಿಳಿಸಿದರು.
ತಾಲೂಕಿನ ಗುರುವಿನ ಕಲ್ಲು ಗ್ರಾಮದಲ್ಲಿ ನಡೆದ ಶ್ರೀಹರಿ ಸೇವಾ ಟ್ರಸ್ಟ್ ನ ಶ್ರೀ ಕಂಬದ ನರಸಿಂಹ ಸ್ವಾಮಿ ದೇವಾಲಯಕ್ಕೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು (Dharmasthala) ಅರ್ಪಣೆ ಮಾಡಿರುವ ಮೂರು ಲಕ್ಷ ಹಣದ ಚೆಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನನ್ನ ಸಾಧನೆಗೆ ಬೆಂಬಲವಾಗಿ ಸಹಕಾರ ನೀಡಿದವರು ವೀರೇಂದ್ರ ಹೆಗ್ಗಡೆಯವರು
ನಾನು ಒಂದು ಉದ್ಯಮ ಪ್ರಾರಂಭ ಮಾಡಲು 35 ಸಾವಿರ ಹಣ ಸಾಲ ಪಡೆಯಲು ಕರ್ನಾಟಕ ಬ್ಯಾಂಕ್ ಗೆ ಮನವಿ ಮಾಡಿದಾಗ ಅವರು ಧರ್ಮಸ್ಥಳ ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ರುಡ್ ಸೆಟ್ ರುಡ್ ಶೆಡ್ ಸಂಸ್ಥೆಯಾ ತರಬೇತಿ ಪಡೆದು ಬಂದವರಿಗೆ ಮಾತ್ರ ಲೋನ್ ಕೊಡಲಾಗುವುದು ಎಂದು ಹೇಳಿದಾಗ ಕೇವಲ 15 ದಿನದ ತರಬೇತಿ ನನ್ನ ಜೀವನದ ಅಮೂಲ್ಯ ವಾದ ಬದಲಾವಣೆ ತಂದು ಇಂದು ನೂರಾರು ಕೋಟಿ ವಹಿವಾಟು ನಡೆಸುತ್ತಿರುವ ಸದ್ಗುರು ಆಯುರ್ವೇದ ಸಂಸ್ಥೆಗೆ ಪ್ರೇರಣೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಎಂದು ತನ್ನ ನೆನಪನ್ನು ಮೆಲುಕು ಹಾಕಿದರು.
ಕೇವಲ ಮಾತನಾಡುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳ ಮೇಲು ಎಂಬ ನಾಣ್ಣುಡಿಯಂತೆ ಧರ್ಮಸ್ಥಳ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹೊಸದುರ್ಗ ತಾಲೂಕಿನ 234 ದೇವಸ್ಥಾನಗಳಿಗೆ ಮೂರುವರೆ ಕೋಟಿ ಹಣವನ್ನ ದೇವಸ್ಥಾನಗಳಿಗೆ ಅರ್ಪಣೆ ಮಾಡಿ ಧಾರ್ಮಿಕ ಕಾರ್ಯದಲ್ಲಿ ಧರ್ಮಸ್ಥಳ (Dharmasthala) ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪಾತ್ರ ಏನೆಂಬುದನ್ನು ತಿಳಿಸಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಜನ ಜಾಗೃತಿ ವೇದಿಕೆ ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಿ.ಪಿ.ಓಂಕಾರಪ ಮಾತನಾಡಿ ಮಧ್ಯವರ್ಜನ ಶಿಬಿರ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ವಿದ್ಯಾರ್ಥಿ ವೇತನ, ಕೌಶಲ್ಯ ತರಬೇತಿ, ಕೆರೆಗಳ ಅಭಿವೃದ್ಧಿ ಕಾರ್ಯಗಳನ್ನ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ನಿರ್ಮಾಅನ್ಡುತ್ತಿರುವುದು ಅಭಿನಂದನಾರ್ಹ, ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂಬುದು ಪೂಜ್ಜರ ಸಂಕಲ್ಪವಾಗಿದ್ದು ಕನ್ನಡ ನಾಡು ಮತ್ತು ಭಾರತ ದೇಶದ ಬಗ್ಗೆ ಪೂಜ್ಯರಿಗೆ ಅತ್ಯಂತ ಹೆಚ್ಚು ಗೌರವವಿದೆ ಎಂದರು.
ಸಮಾಜ ಸೇವಕ ಆಗ್ರೋ ಶಿವಣ್ಣ ಮಾತನಾಡಿ ಮನುಷ್ಯನು ಮನುಷ್ಯತ್ವವನ್ನು ಪ್ರೀತಿಸುವುದೇ ನಿಜವಾದ ಧರ್ಮ ನಾವು ದ್ವೇಷ ಅಸೂಯೆಗಳಿಂದ ದೂರವಾಗಿ ಒಬ್ಬರು ಮತ್ತೊಬ್ಬರನ್ನು ಪ್ರೀತಿಸುವಂತೆ ಆಗಬೇಕು. ಗೊರವಿನಕಲ್ಲು ಕಂಬದ ನರಸಿಂಹ ಸ್ವಾಮಿ ದೇವಸ್ಥಾನ ಕಟ್ಟಡ ಭೌತಿಕವಾಗಿ ನಿರ್ಮಾಣವಾಗಿದೆ. ಆದರೆ ಈ ಒಂದು ಕಟ್ಟಡ ಮುಂದಿನ ಪೀಳಿಗೆಗೆ ಒಂದು ಶ್ರದ್ಧಾ ಕೇಂದ್ರವಾಗಿ ಕಂಬದ ನರಸಿಂಹ ಸ್ವಾಮಿ ನಾಡಿನಲ್ಲಿ ರೈತರ ನೆಮ್ಮದಿ ಬದುಕಿಗೆ ದಾರಿದೀಪವಾಗಿದೆ ದೇವರು ಎಂದರೆ ನಂಬಿಕೆ, ದೇವರು ಎಂದರೆ ಭಕ್ತಿ ದೇವರು ಎಂದರೆ ಭಯ ಈ ಭಯ-ಭಕ್ತಿ ನಂಬಿಕೆಯಿಂದ ಮಂಜುನಾಥನನ್ನು (Dharmasthala) ನಂಬಿದವರನ್ನು ಎಂದೆಂದಿಗೂ ಆ ಮಂಜುನಾಥ ಸ್ವಾಮಿ ಕೈ ಬಿಡುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಹೊಸದುರ್ಗ ವಲಯ ಯೋಜನಾಧಿಕಾರಿ ಶಿವಣ್ಣ, ಪುರಸಭಾ ಸದಸ್ಯ ರಾಮಚಂದ್ರಪ್ಪ, ಶ್ರೀಹರಿ ಸೇವಾ ಟ್ರಸ್ಟ್ ಅಧ್ಯಕ್ಷ ಚಂದ್ರಪ್ಪ, ಅಂಜಿನಪ್ಪ, ಉದ್ಯಮಿ ಹನುಮಂತಪ್ಪ, ದೀಪಿಕಾ ಸತೀಶ್, ಜಿಲ್ಲಾ ಜನಜಗೃತಿ ವೇದಿಕೆ ಸದಸ್ಯ ತುಂಬಿನಕೆರೆ ಬಸವರಾಜ್ ,ನಾಗರಾಜು ,ರವಿಕುಮಾರ್, ದೇವರಾಜ್, ರಾಜಪ್ಪ, ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.