Chitradurga news|nammajana.com|3-7-2023
ನಮ್ಮಜನ.ಕಾಂ, ಚಿತ್ರದುರ್ಗ: ಋತುಸ್ರಾವದ ಹೊಟ್ಟೆ ನೋವು ತಾಳಲಾರದೆ ಯುವತಿ (Young woman dies of stomach pain) ಮನೆಯಲ್ಲಿ ಯಾರೂ ಇಲ್ಲದೆ ಇರುವಾಗ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಜರುಗಿದೆ.
ಹಳವುದರ ಲಂಬಾಣಿ ಹಟ್ಟಿ ಗ್ರಾಮದ ಸಂಜನಾ (14) ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ. ಹಲವು ತಿಂಗಳುಗಳಿಂದ ಸಂಜನಾ ಋತುಸ್ರಾವದ ವೇಳೆಯಲ್ಲಿ ತೀವ್ರ ಹೊಟ್ಟೆ ನೋವಿನ (Young woman dies of stomach pain) ಸಂಕಟ ಅನುಭವಿಸುತ್ತಿದ್ದಳು, ಅದಕ್ಕೆ ತೆಗೆದುಕೊಂಡಿದ್ದ ಔಷಧೋಪಚಾರಗಳಿಂದ ಗುಣಮುಖಳಾಗಿದ್ದಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಆರೋಗ್ಯಕರ ಆಹಾರ ಯೋಜನೆಯನ್ನು ನಾನು ಹೇಗೆ ಅನುಸರಿಸಬಹುದು ನೀವು ಓದಿ |Health advice
ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ತಿಮ್ಮೇಗೌಡ ಮತ್ತು ಪವಿತ್ರಾ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರ ವಶಕ್ಕೆ ನೀಡಿದ್ದಾರೆ.
ಯುವತಿ ಕರಿಯಮ್ಮನಹಟ್ಟಿ ಗ್ರಾಮದ ಪ್ರೌಢಶಾಲೆಯಲ್ಲಿ (Young woman dies of stomach pain) ಎಂಟನೆ ತರಗತಿ ಓದುತ್ತಿದ್ದಳು. ಬೇಬಿಬಾಯಿ ಮತ್ತು ಪೊನ್ಯನಾಯ್ಕ ಎಂಬುವರ ಮಗಳಾದ ಸಂಜನಾಳ ತಂದೆ 2 ವರ್ಷ ಹಿಂದೆ ನಿಧನರಾ ಗಿದ್ದರು. ತಾಯಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವತಿ ತನ್ನ ಅಜ್ಜಿ ಮನೆಯಲ್ಲಿದ್ದು ಕೊಂಡು ವ್ಯಾಸಂಗ ಮುಂದುವರಿಸಿದ್ದಳು ಎಂದು ತಿಳಿದು ಬಂದಿದೆ.