Chitradurga news|nammajana.com | 10-6-2024
ನಮ್ಮಜನ.ಕಾಂ, ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ರಾತ್ರಿವೇಳೆ ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದವರಿಗೆ ಚಾಕು, ಚೂರಿಯಿಂದ (Robbery of 6.50 lakh in Hirehalli) ಬೆದರಿಸಿ ಹಲ್ಲೆ ಮಾಡಿ ಅವರನ್ನು ಕಟ್ಟಿಹಾಕಿ ಹಣ ಮತ್ತು ಬಂಗಾರದ ಆಭರಣಗಳನ್ನು ಸೂಲಿಗೆ ಮಾಡಿಕೊಂಡು ಹೋಗುವ ಪ್ರಕರಣಗಳು ನಡೆಯುತ್ತಿತ್ತು.
ತಾಲ್ಲೂಕಿನ ತಳಕು ಹೋಬಳಿಯ ಹಿರೇಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ೨ಗಂಟೆ ಸಮಯದಲ್ಲಿ ಮನೆಯ ಬಾಗಿಲು ಕಬ್ಬಿಣದ ಆಯುಧದಿಂದ ಒಡೆದು ಒಳಪ್ರವೇಶಿಸಿದ (Robbery of 6.50 lakh in Hirehalli) ೨೫ರಿಂದ೩೦ ವರ್ಷದ ಮೂವರು ಸೂಲಿಗೆಕೋರರು ಸುಮಾರು ೬.೫೦ ಲಕ್ಷ ನಗದು ಹಣ ಹಾಗೂ ಆಭರಣಗಳನ್ನು ದೋಚಿ ಮನೆಯವರನ್ನು ಬೆಡ್‌ರೂಂನಲ್ಲಿ ಕೂಡಿಹಾಕಿ ಪರಾರಿಯಾದ ಘಟನೆ ನಡೆದಿದೆ.

ಹಿರೇಹಳ್ಳಿ ಗ್ರಾಮದ ಮೆಕ್ಕೆಜೋಳ ವ್ಯಾಪಾರಿ ಜಿ.ಬಿ.ತಿಪ್ಪೇಸ್ವಾಮಿ(೬೮) ತಳಕು ಪೊಲೀಸರಿಗೆ ನೀಡಿದ ದೂರಿನಲ್ಲಿ ಹಿರೇಹಳ್ಳಿ ಗ್ರಾಮದ ಹೊರವಲಯದ ತನ್ನ ಜಮೀನಿನಲ್ಲಿ ಮನೆಯನ್ನು ಕಟ್ಟಿಕೊಂಡು ವಾಸಿಸುತ್ತಿದ್ದು, ಪುತ್ರ ಶ್ರೀನಿಧಿ ಹಾಗೂ ಹೆಂಡತಿಯ ಅಕ್ಕನ ಮಗಳಾದ (Robbery of 6.50 lakh in Hirehalli) ಪುಪ್ಪಲತರೊಂದಿಗೆ ಊಟ ಮಾಡಿ ಮಲಗಿದ್ದು, ಮಂಗಳವಾರ ಸುಮಾರು ೨ರ ಸಮಯದಲ್ಲಿ ಮುಖಕ್ಕೆ ಮಂಕಿಕ್ಯಾಪ್, ಮಾಸ್ಕ್, ಟೀಶರ್ಟ್ ಧರಿಸಿ ಬಂದ ಮೂವರು ೨೫ರಿಂದ೩೦ವರ್ಷದ ಮೂವರು ಅಪರಿಚಿತ ವ್ಯಕ್ತಿಗಳು ಮನೆಯ ಬಾಗಿಲು ಮುರಿದು ಜಿ.ಬಿ.ತಿಪ್ಪೇಸ್ವಾಮಿ, ಶ್ರೀನಿಧಿ, ಪುಪ್ಪಲತಾರವರ ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿ, ಚಾಕುತೋರಿಸಿ ಹಣ ಹಾಗೂ ಒಡವೆ ಕೊಡುವಂತೆ ಬೆದರಿಸಿದ್ದಾರೆ.
ಪುಪ್ಪಲತಾರ ಪರ್ಸ್ನಲ್ಲಿದ್ದ ೨.೫೦೦, ಕಿವಿಯ ಓಲೆ ಹಾಗೂ ಜಿ.ಬಿ.ತಿಪ್ಪೇಸ್ವಾಮಿಯ ಮೆಕ್ಕೆಜೋಳ ವ್ಯಾಪಾರದ ಹಣ ೬.೫೦ ಲಕ್ಷ ಹಣವನ್ನು ದೋಚಿ (Robbery of 6.50 lakh in Hirehalli) ಮೂವರನ್ನು ಬೆಡ್‌ರೂಂನಲ್ಲಿ ಕೂಡಿಹಾಕಿ ಅವರ ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ಧಾರೆ.
ಸ್ವಲ್ಪ ಸಮಯದ ನಂತರ ಸುಧಾರಿಸಿಕೊಂಡು ಜಿ.ಬಿ.ತಿಪ್ಪೇಸ್ವಾಮಿ ತಳಕು ಪೊಲೀಸ್ ಠಾಣೆಗೆ ಹೋಗಿ ಘಟನೆಯ ಬಗ್ಗೆ ದೂರು (Robbery of 6.50 lakh in Hirehalli) ನೀಡಿದ್ಧಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಕುಸಿದು ಬಿದ್ದ ಮನೆ | House collapse due to short circuit
ಜಿಲ್ಲಾ ಪೋಲಿಸ್ ರಕ್ಷಣಾಧಿಕಾರಿಗಳ ಭೇಟಿ
ಜಿಲ್ಲಾ ರಕ್ಷಣಾಧಿಕಾರಿ ಧರ್ಮೆಂದ್ರಕುಮಾರ್‌ಮೀನಾ, ದರೋಡೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಜೂನ್-೨೩ರಂದು ನಗರದ ಬೆಂಗಳೂರು ರಸ್ತೆಯ ಈರಣ್ಣ ಎಂಬುವವರ ಶಿಕ್ಷಕರ ಮನೆಯ ಬಾಗಿಲು ಮುರಿದು (Robbery of 6.50 lakh in Hirehalli) ಮನೆಯಲ್ಲಿದ್ದವರನ್ನು ಕಟ್ಟಿಹಾಕಿ ಸುಮಾರು ೩.೫೦ ಲಕ್ಷ ಹಣ ದೋಚಿದ್ದರು. ಚಳ್ಳಕೆರೆ ಉಪವಿಭಾಗದ ಡಿವೈಎಸ್ಪಿ ಟಿ.ಬಿ.ರಾಜಣ್ಣ, ಸಿಪಿಐ ರಾಜಶೇಖರಯ್ಯ ಸ್ಥಳಕ್ಕೆ ಭೇಟಿ ನೀಡಿದ್ದರು, ತಳಕು ಪಿಎಸ್‌ಐ ಎಚ್.ವಿ.ಲೋಕೇಶ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ಧಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252