Chitradurga news|nammajana.com|10-7-2024
ನಮ್ಮಜನ.ಕಾಂ, ಚಳ್ಳಕೆರೆ: ಕಳೆದ ಸುಮಾರು ಎರಡು ವರ್ಷಗಳಿಂದ ತುಂಗಾಹಿನ್ನೀರು ಯೋಜನೆಯಡಿ ಕೂಡ್ಲಗಿ, ಚಳ್ಳಕೆರೆ, ಮೊಳಕಾಲ್ಮೂರು, ಪಾವಗಡ ವಿಧಾನಸಭಾ ಕ್ಷೇತ್ರಗಳಿಗೆ ಕುಡಿಯುವ ನೀರು ಒದಿಸುವ ನಿಟ್ಟಿನಲ್ಲಿ ಪೈಪ್‌ಲೈನ್ (Tunga Hinniru Scheme) ಪೂರ್ಣಗೊಂಡಿದ್ದು, ಚಳ್ಳಕೆರೆ ಗಡಿಭಾಗದ ಪಾವಗಡ ತಾಲ್ಲೂಕಿನ ಕೆಂಚಮ್ಮನಹಳ್ಳಿ ಬಳಿ ನೀರು ದಾಸ್ತಾನು ಮಾಡು ಪಾವಗಡ ತಾಲ್ಲೂಕಿಗೆ ವಿತರಣೆ ಮಾಡುವ ಕಾಮಗಾರಿಯನ್ನು ವೀಕ್ಷಿಸಲು ಗ್ರಾಮಾಭಿವೃದ್ದಿ ಮತ್ತು ಪಂಚಾಯಿತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ನೀಡಿದ ಎಲ್ಲಾ ಭರವಸೆಗಳನ್ನು (Tunga Hinniru Scheme) ಈಡೇರಿಸುವಲ್ಲಿ ಕಠಿಬದ್ದವಾಗಿದೆ.
ನಾಲ್ಕು ತಾಲೂಕಿನ ಲಕ್ಷಾಂತರ ಜನರಿಗೆ ಅನುಕೂಲ
ತುಂಗಾಹಿನ್ನೀರು ಯೋಜನೆಯಡಿ ನಾಲ್ಕು ತಾಲ್ಲೂಕಿನ ಲಕ್ಷಾಂತರ ಜನರಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆಯಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಕೆಲವೇ ದಿನಗಳಲ್ಲಿ ನೀರು ದಾಸ್ತಾನು ಮಾಡಲಾಗುವುದು ಸುಮಾರು ೯೫ ಲಕ್ಷ ಲೀಟರ್ ಸಾಮರ್ಥ್ಯ ನೀರು ಸಂಗ್ರಹ ಮಾಡಿ ವಿತರಣೆ ಮಾಡಲಾಗುವುದು. ಸಧ್ಯದ ಸ್ಥಿತಿಯಲ್ಲಿ ಚಳ್ಳಕೆರೆ ತಾಲ್ಲೂಕಿನಾದ್ಯಂತ ಒಂದೆರಡು ಬಾರಿ (Tunga Hinniru Scheme) ಉತ್ತಮ ಹದ ಮಳೆಯಾಗಿದೆ.ಬಿತ್ತನೆ ಕಾರ್ಯ ಆರಂಭವಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ಧಾರೆ. ಕುಡಿಯುವ ನೀರು ನೀಡಲು ಈ ಯೋಜನೆ ಸಹಕಾರಿಯಾಗಿದೆ ಎಂದರು.
ಇದನ್ನೂ ಓದಿ: ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಎಂ.ಎನ್.ಅಹೋಬಳಪತಿ ನೇಮಕ | Member of Karnakata Media Academy
ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಸಚಿವರು ಇದೇ ಮೊದಲಬಾರಿಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಕಾಮಗಾರಿ ಪರಿಶೀಲನೆಗೆ ಆಗಮಿಸಿರುವುದು ಸಂತಸ ತಂದಿದೆ. ತುಂಗಾಹಿನ್ನೀರು ಯೋಜನೆಯಡಿ ಕಾಮಗಾರಿ ಯಶಸ್ವಿಯಾಗಿ ನಡೆದಿದೆ. ಪಾವಗಡ ಕ್ಷೇತ್ರದ ಜನತೆಗೆ ಚಳ್ಳಕೆರೆ ಮೂಲಕವೇ (Tunga Hinniru Scheme) ಕುಡಿಯುವ ನೀರು ಹಾದುಹೋಗಲಿದೆ. ಸರಾಸರಿ ಸುಮಾರು ೯೦ ಲಕ್ಷ ಲೀಟರ್ ನೀರು ದಾಸ್ತಾನು ಮಾಡಿ, ನಂತರ ವಿತರಣೆ ಮಾಡಲಾಗುವುದು. ಜಿಲ್ಲೆಯ ವ್ಯಾಪ್ತಿಯಲ್ಲಿ ೧೧೩೮ ಗ್ರಾಮಗಳು, ಎರಡು ಪಟ್ಟಣದ ೧೭.೧೨ ಲಕ್ಷ ಜನರಿಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದಂತಾಗಿದೆ. ತಾಲ್ಲೂಕಿನ ೩೬೦, ತುರುವನೂರಿನ ೫೮ ಗ್ರಾಮೀಣ ವಸತಿಪ್ರದೇಶಗಳಿಗೆ ಈ ನೀರಿನ ಸೌಲಭ್ಯ ದೊರಕಲಿದೆ ಎಂದು ತಿಳಿಸಿದ್ಧಾರೆ.
ಇದನ್ನೂ ಓದಿ: ಖಾಸಗಿ ಗಣಿ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲಿ : ಸಂಸದ ಗೋವಿಂದ ಎಂ ಕಾರಜೋಳ | Private mining companies
ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸವನಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ದಯಾನಂದಸ್ವಾಮಿ, ಸಹಾಯಕ ಇಂಜಿನಿಯರ್ ತಿಪ್ಪೇಸ್ವಾಮಿ, ಇಒ ಶಶಿಧರ, ಮುಖಂಡರಾದ ರವಿಕುಮಾರ್, ವೀರಭದ್ರಪ್ಪ, ಶಶಿಧರ, ರಮೇಶ್‌ಗೌಡ, ರಾಘವೇಂದ್ರ, ನರಸಿಂಹಮೂರ್ತಿ, ದೇವರಾಜು ಮುಂತಾದವರು ಉಪಸ್ಥಿತರಿದ್ದರು.