Chitradurga news|nammajana.com|12-7-2024
ನಮ್ಮಜನ.ಕಾಂ, ಚಿತ್ರದುರ್ಗ: ಜರ್ಮನ್ ಸರ್ಕಾರದಿಂದ ಮಾನ್ಯತೆ ಪಡೆದಿರುವ ಮೆ.ಟ್ಯಾಲೆಂಟ್ ಆರೆಂಜ್ ಸಂಸ್ಥೆಯು, ಭಾರತ ದೇಶದಿಂದ ನರ್ಸ್ ಆಗಿ ಕೆಲಸ ನಿರ್ವಹಿಸಲು ಬಿ.ಎಸ್ಸಿ ಹಾಗೂ ಜಿ.ಎನ್.ಎಂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ (Job opportunities in Germany) ಜರ್ಮನಿಯಲ್ಲಿ ಉದ್ಯೋಗ ಕಲ್ಪಿಸಲು ಮುಂದೆ ಬಂದಿದೆ.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ನರ್ಸಿಂಗ್ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ, ಕೇರಳ ರಾಜ್ಯದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ 8 ತಿಂಗಳ ಕಾಲ ಜರ್ಮನ್ ಭಾಷೆಯ ಬಗ್ಗೆ ತರಬೇತಿ ನೀಡಿ, (Job opportunities in Germany) ಸಂಸ್ಥೆಯ ವತಿಯಿಂದ ಊಟ ಹಾಗೂ ವಸತಿ ಸೌಲಭ್ಯ ನೀಡಿ ಜರ್ಮನಿಗೆ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಒದಗಿಸಲಾಗುವುದು.
ವಿದ್ಯಾರ್ಹತೆ
ಆಸಕ್ತ ಅಭ್ಯರ್ಥಿಗಳು ಬಿ.ಎಸ್ಸಿ (ನರ್ಸಿಂಗ್) ಬಿಎಸ್ಸಿ, ಜಿ.ಎನ್.ಎಂ ವಿದ್ಯಾರ್ಹತೆ ಹೊಂದಿರಬೇಕು, 38 ವರ್ಷ ವಯೋಮಿತಿ ಒಳಗಿರುವ ಮಹಿಳಾ ಅಭ್ಯರ್ಥಿ ಹಾಗೂ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೊಸಬರು ಅಥವಾ (Job opportunities in Germany) ಅನುಭವವುಳ್ಳರಿಗೂ ಅವಕಾಶವಿದೆ. ಹೆಣ್ಣುಮಕ್ಕಳು ಚಿಕ್ಕ ಮಕ್ಕಳನ್ನು ಹೊಂದಿದ್ದಲ್ಲಿ ತಮ್ಮೊಂದಿಗೆ ಕರೆದೊಯ್ಯಲು ಅವಕಾಶವಿರುವುದಿಲ್ಲ. ಭಾರತೀಯ ನರ್ಸಿಂಗ್ ಲೈಸೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: Dina Bhavishya kannada | ಇಂದಿನ ರಾಶಿ ಭವಿಷ್ಯ 12-7-2024
ಜರ್ಮನಿಯಲ್ಲಿ ಕೆಲಸ ನಿರ್ವಹಿಸಲು ಉತ್ಸುಕರಾದ ಈಗಾಗಲೇ ನರ್ಸಿಂಗ್ ಪೂರ್ಣಗೊಳಿಸಿದ ಉದ್ಯೋಗಾಕಾಂಕ್ಷಿಗಳು ಚಿತ್ರದುರ್ಗ ನಗರದ ಜೆ.ಸಿ.ಆರ್ ಬಡಾವಣೆಯ ಕಾರ್ಮಿಕ (Job opportunities in Germany) ಅಧಿಕಾರಿಗಳ ಕಚೇರಿಯಲ್ಲಿ ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಕಚೇರಿಯ ದೂರವಾಣಿ ಸಂಖ್ಯೆ 08194-231394ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.