Chitradurga news|nammajana.com|12-7-2024
ನಮ್ಮಜನ.ಕಾಂ, ಚಿತ್ರದುರ್ಗ: ಬಸವಕೇಂದ್ರ ಮುರುಘಾಮಠದ ರಾಜಾಂಗಣದಲ್ಲಿ ಇರಿಸಲಾಗಿದ್ದ 22 ಕೆಜಿ ತೂಕದ 20 ಲಕ್ಷ ರು. ಮೌಲ್ಯದ ಬೆಳ್ಳಿ ವಿಗ್ರಹ ನಾಪತ್ತೆಯಾಗಿದ್ದು, ಈ ಸಂಬಂಧ (Marughamatha silver idol) ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಮುರುಘಾಶ್ರೀ ಪೀಠಾರೋಹಣದ 25 ವರ್ಷದ ನೆನಪಿಗಾಗಿ ಭಕ್ತರು ಪ್ರತಿರೂಪದ ಬೆಳ್ಳಿ ವಿಗ್ರಹ ಮಾಡಿಸಿದ್ದರು.
ಅಕ್ಟೋಬರ್ 18, 2021 ರಂದು ಮುರುಘಾಶ್ರೀಗೆ ವಿಗ್ರಹವ ಕೊಡುಗೆ ನೀಡಲಾಗಿತ್ತು. ಅದನ್ನು ರಾಜಾಂಗಣದಲ್ಲಿ (Marughamatha silver idol) ಇರಿಸಲಾಗಿತ್ತು. ನಾಲ್ಕು ದಿನಗಳ ಹಿಂದೆಯೇ ವಿಗ್ರಹ ನಾಪತ್ತೆಯಾಗಿದೆ ಎಂದು ಹೇಳಲಾಗಿದೆ. ಇಡೀ ಮುರುಘಾಮಠ ಸಿಸಿ ಟಿವಿ ಕಣ್ಣಾವಲಿನಲ್ಲಿದ್ದು, ವಿಗ್ರಹ ನಾಪತ್ತೆ ಅಚ್ಚರಿ ತಂದಿದೆ.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ | ಲವರ್ ಜೊತೆ ಸೇರಿ ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ | Husband killed along with lover
ಮುರುಘಾಶ್ರೀ ಫೋಕ್ಲೋ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾದ ನಂತರ ರಾಜ್ಯ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಅವರನ್ನು ಎಸ್ ಜೆಎಂ ವಿದ್ಯಾಪೀಠ ಹಾಗೂ ಮುರುಘಾಮಠಕ್ಕೆ (Marughamatha silver idol) ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು. ಗಾಣಿಗ ಪೀಠದ ಡಾ.ಬಸವಕುಮಾರ ಸ್ವಾಮೀಜಿ ಸದಸ್ಯರಾಗಿದ್ದರು.
ಪೊಲೀಸರು ತನಿಖೆ ನಡೆಸಿ ಕಳ್ಳತನ ಪ್ರಕರಣ ಬೇಧಿಸಬೇಕಿದೆ
ಇನ್ನು ಮಠದ ಆಡಳಿತ ಸಮಿತಿ ಸದಸ್ಯ ಬಸವಕುಮಾರಶ್ರೀ ಮಾತನಾಡಿ, ಮುರುಘಾಶ್ರೀಗಳ ಬೆಳ್ಳಿ ಪುತ್ಥಳಿ ಕಳವು ಬಗ್ಗೆ ಬಸವಪ್ರಭುಶ್ರೀಗಳು ಮಾಹಿತಿ ನೀಡಿದರು. ನಾವು ಕೂಡಲೇ ಮಠದ ಆಡಳಿ ಮಂಡಳಿ ಅಧ್ಯಕ್ಷರಿಗೆ ತಿಳಿಸಿದೆವು. ಜೊತೆಗೆ (Marughamatha silver idol) ನಿವೃತ್ತ ಐಎಎಸ್ ಅಧಿಕಾರಿ ಆಗಿರುವ ಶಿವಯೋಗಿ ಕಳಸದ್ ಅವರಿಗೆ ಮಾಹಿತಿ ನೀಡಿದೆವು. ಕಳಸದ್ ಸೂಚನೆಯಂತೆ ಆಂತರಿಕ ತನಿಖೆ ನಡೆಸಿದ್ದೇವೆ.
ಬೆಳ್ಳಿ ಪುತ್ಥಳಿ ಬಗ್ಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಇಂದು ಮಧ್ಯಾಹ್ನ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ಸಲ್ಲಿಸುತ್ತೇವೆ. ಪೊಲೀಸ್ ತನಿಖೆಯಿಂದ ಬೆಳ್ಳಿ ಪುತ್ಥಳಿ ಕಳ್ಳತನ ಕೇಸ್ ಬಯಲಾಗಬೇಕಿದೆ ಎಂದು ಸ್ಪಷ್ಟನೆ ನೀಡಿದ್ದರು.