Chitradurga news|nammajana.com|12-7-2024
ನಮ್ಮಜನ.ಕಾಂ, ಚಿತ್ರದುರ್ಗ: ವಿದ್ಯಾರ್ಥಿಗಳು ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶೈಕ್ಷಣಿಕವಾಗಿ, (Pratibhotsava and Women Siri) ಸಾಮಾಜಿಕವಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿ ಅರಿತು ಉನ್ನತಮಟ್ಟಕ್ಕೆ ಬೆಳೆಯಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಲಹೆ ನೀಡಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಶುಕ್ರವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ (Pratibhotsava and Women Siri) ಆಯೋಜಿಲಾಗಿದ್ದ “ಮಹಿಳಾ ಸಿರಿ” ವಾರ್ಷಿಕ ಸಂಚಿಕೆ ಬಿಡುಗಡೆ ಹಾಗೂ ಪ್ರತಿಭೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಪೋಷಕರು ನಿಮ್ಮ ಮೇಲೆ ಅಗಾಧವಾದ ನಂಬಿಕೆಯನ್ನಿಟ್ಟು ಶಾಲಾ, ಕಾಲೇಜುಗಳಿಗೆ ಕಳುಹಿಸುತ್ತಾರೆ. ಅವರ ನಂಬಿಕೆಗೆ ದ್ರೋಹ ಮಾಡದೆ, ವಿದ್ಯಾರ್ಥಿಗಳು ತಮ್ಮ ಪೋಷಕರ, ಆರ್ಥಿಕ ಪರಿಸ್ಥಿತಿ ಅರಿತು, ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಂಡು ಉದಯೋನ್ಮುಖರಾಗಿ ಬೆಳೆಯಬೇಕು. (Pratibhotsava and Women Siri) ಮುಂದಿನ ಜೀವನದ ಪಯಣಕ್ಕೆ ಜಾಗೃತವಾಗಿ ಹೆಜ್ಜೆ ಇಡಬೇಕು. ನಿಮ್ಮ ಸಾಧನೆ, ಸನ್ನಡತೆ ಕಂಡು ಪೋಷಕರು ನಿಮ್ಮ ಬಗ್ಗೆ ಹೆಮ್ಮೆಪಡುವಂತಾಗಬೇಕು. ಆಗ ಮಾತ್ರ ನಿಮ್ಮ ಬದುಕು ಸಾರ್ಥಕ ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಈಗಾಗಲೇ 2.24 ಗುಂಟೆ ಜಮೀನು ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ರೂ.25 ಕೋಟಿ ಅನುದಾನ ಮೀಸಲಾಗಿದೆ. ಈ ಎಲ್ಲಾ (Pratibhotsava and Women Siri) ಸೌಕರ್ಯಗಳನ್ನು ಮುಂಬರುವ ವಿದ್ಯಾರ್ಥಿಗಳು ಬಳಸಿಕೊಂಡು, ಸಮಾಜದಲ್ಲಿ ಉತ್ತಮ ನಾಗರಿಕರಾಗಿ, ಒಳ್ಳೆಯ ಗುಣಗಳನ್ನು ಮೈಗೂಡಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಏನೋ ಅನುದಾನ ಕೊಡ್ತಾರೆ, ಏನೋ ಮಾಡೋಣ ಎಂಬ ಮನಸ್ಥಿತಿ ಬಿಡಿ: ಕೆ.ಸಿ.ವೀರೇಂದ್ರ ಪಪ್ಪಿ | K. C. Veerendra PuppyPuppy
2022-23ನೇ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಬಿ.ಕಾಂ. ವಿಭಾಗದ ರುಖಾಯಾ ತಾಜೀಮ್ ಹಾಗೂ ಬಿ.ಎ ವಿಭಾಗದ ಎನ್.ರಕ್ಷಿತಾ ಅವರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. 2022-23ನೇ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಬಿ.ಎ, ಬಿ.ಕಾಂ ಪದವಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಗುಡ್ಡದೇಶ್ವರಪ್ಪ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಿ.ಚನ್ನಕೇಶವ, ಸಾಂಸ್ಕøತಿಕ ಸಮಿತಿ ಸಂಚಾಲಕ ಡಾ. ಡಿ. ಓ.ಸಿದ್ದಪ್ಪ, ಅಧ್ಯಾಪಕ ಸಂಘದ ಅಧ್ಯಕ್ಷ ಡಾ. ಪಿ. ಎನ್.ಮಧುಸೂದನ್, ಐ. ಕ್ಯೂ. ಎ.ಸಿ. ಸಂಚಾಲಕ ಬಿ.ಹೆಚ್.ಕುಮಾರಸ್ವಾಮಿ, ರಾ. ಸೇ. ಯೋ. ಕಾರ್ಯಕ್ರಮಾಧಿಕಾರಿ ಎಂ.ಗಿರೀಶ್, ಕ್ರೀಡಾ ಸಮಿತಿ ಸಂಚಾಲಕ ಆರ್. ಶಿವಪ್ರಸಾದ್, ಪತ್ರಾಂಕಿತ ವ್ಯವಸ್ಥಾಪಕ ವೆಂಕಟೇಶ್, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರುಗಳಾದ ನಿವೃತ್ತ ಪ್ರಾಧ್ಯಾಪಕ ಕೆ.ಸಜ್ಜತ್, ಎಸ್.ಆರ್.ಮನು, ಸಮೀವುಲ್ಲಾ ಶರೀಫ್, ನರಸಿಂಹಮೂರ್ತಿ, ತಾರಕೇಶ್ವರಿ, ಸಮಾಜಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಸಿದ್ದಪ್ಪ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವೀಣಾ, ಕ್ರೀಡಾ ಸಮಿತಿ ಸಂಚಾಲಕ ಡಾ.ಶಿವಪ್ರಾಸಾದ್ ಹಾಗೂ ವಿದ್ಯಾರ್ಥಿಗಳು, ಸಿಬ್ಬಂಧಿಗಳು ಉಪಸ್ಥಿತರಿದ್ದರು. ಮಹಿಳಾ ಸಿರಿ ವಾರ್ಷಿಕ ಸಂಚಿಕೆ ಸಂಪಾದಕ ಬಿ.ಮಂಜುನಾಥ್ ಸ್ವಾಗತಿಸಿದರು.